"ಜಾನ್ವಿ ಕಪೂರ್ ಬಗ್ಗೆ ಸುಳ್ಳು ವದಂತಿ ಹಬ್ಬಿಸಬೇಡಿ": ಬೋನಿ ಕಪೂರ್ ಮನವಿ ಮಾಡಿದ್ಯಾಕೆ?

ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಸೌತ್ ಸಿನಿಮಾಗಳಲ್ಲಿ ನಟಿಸ್ತಾರೆ ಎನ್ನುವ ಸುದ್ದಿಗಳು ಕೇಳಿಬರ್ತಿದೆ. ಕೆಲ ದಿನಗಳ ಹಿಂದೆ ಸ್ವತ: ಜಾನ್ವಿ ಈ ಬಗ್ಗೆ ಸುಳಿವು ನೀಡಿದ್ದರು. ಆದರೆ ಯಾವ ಸಿನಿಮಾ? ಎನ್ನುವ ಬಗ್ಗೆ ಮಾಹಿತಿ ಇನ್ನು ಸಿಕ್ಕಿಲ್ಲ.

4 ವರ್ಷಗಳ ಹಿಂದೆ ಜಾನ್ವಿ ಕಪೂರ್ 'ಧಡಕ್' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಆದರೆ ಜಾನ್ವಿಗೆ ಬಾಲಿವುಡ್‌ನಲ್ಲಿ ದೊಡ್ಡ ಬ್ರೇಕ್ ಸಿಗಲಿಲ್ಲ. ಈ ಬಗ್ಗೆ ಆಕೆಗೂ ಬೇಸರ ಇದೆ. ಹಾಗಂತ ಅತಿಲೋಕ ಸುಂದರಿ ಪುತ್ರಿಯ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಹಿಟ್ ಸಿನಿಮಾ ಕೊಡ್ಲಿ, ಬಿಡ್ಲಿ ಜಾನ್ವಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಹಾಟ್ ಹಾಟ್ ಫೋಟೊಶೂಟ್‌ಗಳಿಂದ ಜಾನ್ವಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ಸದ್ಯ ಬಿಂದಾಸ್ ಬೆಡಗಿ ಕೈಯಲ್ಲಿ 2 ಸಿನಿಮಾಗಳಿವೆ. ಇದರ ನಡುವೆಯೇ ಸೌತ್ ಇಂಡಸ್ಟ್ರಿ ಎಂಟ್ರಿ ಬಗ್ಗೆ ಚರ್ಚೆ ನಡೀತಿದೆ.

ಜ್ಯೂ. ಎನ್‌ಟಿಆರ್‌ ನಟನೆಯ #NTR30 ಚಿತ್ರದಲ್ಲಿ ಜಾನ್ವಿ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿತ್ತು. ಇದರ ನಡುವೆಯೇ 'ಧಡಕ್' ಚೆಲುವೆ ಕಾಲಿವುಡ್ ಎಂಟ್ರಿ ಬಗ್ಗೆ ಗುಸುಗುಸು ಶುರುವಾಗಿದೆ. ಈ ಬಗ್ಗೆ ಜಾನಿ ತಂದೆ ಬೋನಿ ಕಪೂರ್ ಸ್ಪಷ್ಟನೆ ನೀಡಿದ್ದಾರೆ.

ಬೋನಿ ಕಪೂರ್ ಮನವಿ

"ಪ್ರೀತಿಯ ಮಾಧ್ಯಮ ಸ್ನೇಹಿತರೇ, ಸದ್ಯಕ್ಕೆ ಜಾನ್ವಿ ಕಪೂರ್ ಯಾವುದೇ ತಮಿಳು ಚಿತ್ರಕ್ಕೆ ಕಮಿಟ್ ಆಗಿಲ್ಲ, ಸುಳ್ಳು ವದಂತಿಗಳನ್ನು ಹಬ್ಬಿಸಬೇಡಿ" ಎಂದು ಬೋನಿ ಕಪೂರ್ ಟ್ವೀಟ್ ಮಾಡಿದ್ದಾರೆ. ಬೋನಿ ಕಪೂರ್ ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಥಲಾ ಅಜಿತ್ ಜೊತೆ 'ನೇರ್ಕೊಂಡ ಪಾರ್ವೈ', 'ವಾಲಿಮೈ' ಹಾಗೂ 'ಥುನಿವು' ಸಿನಿಮಾಗಳ ಮೂಲಕ ಹ್ಯಾಟ್ರಿಕ್ ಹಿಟ್ ಕೊಟ್ಟಿದ್ದಾರೆ.

'ಪಯ್ಯಾ' ಸೀಕ್ವೆಲ್‌ನಲ್ಲಿ ಜಾನ್ವಿ?

'ಪಯ್ಯಾ' ಸೀಕ್ವೆಲ್‌ನಲ್ಲಿ ಜಾನ್ವಿ?

ಅಷ್ಟಕ್ಕೂ ಬೋನಿ ಕಪೂರ್ ಈ ರೀತಿ ಸ್ಪಷ್ಟನೆ ನೀಡೋಕೆ ಕಾರಣ ಏನು ಎನ್ನುವುದನ್ನು ನೋಡುವುದಾದರೆ, ಜಾನ್ವಿ ಕಪೂರ್ 'ಪಯ್ಯಾ' ಸಿನಿಮಾ ಸೀಕ್ವೆಲ್‌ನಲ್ಲಿ ನಟಿಸ್ತಾರೆ ಎನ್ನಲಾಗಿತ್ತು. ಲಿಂಗುಸ್ವಾಮಿ ನಿರ್ದೇಶನದ 'ಪಯ್ಯಾ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಕಾರ್ತಿ ಹಾಗೂ ತಮನ್ನಾ ಜೋಡಿಯಾಗಿ ನಟಿಸಿ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಈ ಸಿನಿಮಾ ಕನ್ನಡ 'ಅಜಿತ್' ಹೆಸರಿನಲ್ಲಿ ರೀಮೆಕ್ ಆಗಿತ್ತು. ಇದರ ಮುಂದುವರೆದ ಭಾಗದಲ್ಲಿ ಆರ್ಯ ಜೊತೆ ಜಾನ್ವಿ ನಟಿಸ್ತಾರೆ ಎನ್ನುವ ಗುಸುಗುಸು ಕಾಲಿವುಡ್‌ನಲ್ಲಿ ಶುರುವಾಗಿತ್ತು. ಅದೇ ಕಾರಣಕ್ಕೆ ಬೋನಿ ಕಪೂರ್ ಸ್ಪಷ್ಟನೆ ನೀಡಿದ್ದಾರೆ.

ಜಾನ್ವಿ ವರ್ಕೌಟ್ ವಿಡಿಯೋ ವೈರಲ್

ನಟಿ ಜಾನ್ವಿ ಕಪೂರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿ ಇರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಲಕ್ಷ ಲಕ್ಷ ಫಾಲೋವರ್ಸ್ ಇದ್ದಾರೆ. ಇನ್ನು ಇತ್ತೀಚಿಗೆ ಜಾನ್ವಿ ಶೇರ್ ಮಾಡಿದ್ದ ವರ್ಕೌಟ್ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಜಿಮ್‌ನಲ್ಲಿ 'ಧಡಕ್' ಬೆಡಗಿಯ ಹಾಟ್ ವರ್ಕೌಟ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಲೈಕ್ಸ್, ಕಾಮೆಂಟ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ಧಾರೆ.

ಜಾನ್ವಿ ಟಾಲಿವುಡ್ ಎಂಟ್ರಿ ನಿಜಾನಾ?

ಜಾನ್ವಿ ಟಾಲಿವುಡ್ ಎಂಟ್ರಿ ನಿಜಾನಾ?

'ಜಗದೇಕ ವೀರುಡು ಅತಿಲೋಕ ಸುಂದರಿ' ಸೀಕ್ವೆಲ್‌ನಲ್ಲಿ ರಾಮ್‌ಚರಣ್ ಹಾಗೂ ಜಾನ್ವಿ ನಟಿಸ್ತಾರೆ ಎನ್ನುವ ಗುಸುಗುಸು ಕೆಲ ವರ್ಷಗಳ ಹಿಂದೆ ನಡಿದಿತ್ತು. ಅದು ಸುಳ್ಳು ಎಂದು ಇತ್ತೀಚೆಗೆ ಸ್ವತಃ ಜಾನ್ವಿ ಹೇಳಿದ್ದರು. ನಂತರ ರಾಮ್‌ಚರಣ್‌ ಜೊತೆ ಮತ್ತೊಂದು ಸಿನಿಮಾ ಮಾಡ್ತಾರೆ ಎನ್ನಲಾಗಿತ್ತು. ಇದೀಗ ಜ್ಯೂ.ಎನ್‌ಟಿಆರ್ ಜೊತೆ ನಟಿಸ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಜಾನ್ವಿ ಕೂಡ ಆದಷ್ಟು ಬೇಗ ಸೌತ್ ಸಿನಿಮಾದಲ್ಲಿ ನಟಿಸ್ತೀನಿ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ ಅದು ಯಾವ ಸಿನಿಮಾ ಎನ್ನುವುದನ್ನು ಕಾದು ನೋಡಬೇಕು.

More from Filmibeat

English summary
Boney Kapoor clarifies That Janhvi Kapoor has not committed to any Tamil Films at the moment. He requested not to spread false rumors. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X