ರಜನಿಕಾಂತ್ ಸಿನಿಮಾ ನಿರಾಕರಿಸಿದ ಬೋನಿಕಪೂರ್: 170ನೇ ಸಿನಿಮಾ ಯಾರ ಪಾಲಿಗೆ!

ನಟ ರಜನಿಕಾಂತ್ ಅವರಿಗೆ ಸಿನಿಮಾ ಮಾಡಬೇಕು ಅಂತ ಸಾಲು ಸಾಲು ನಿರ್ದೇಶಕರು, ನಿರ್ಮಾಪಕರು ಕಾಯುತ್ತಿದ್ದಾರೆ. ಆದರೆ ಅಷ್ಟು ಸುಲಭವಾಗಿ ರಜನಿಕಾಂತ್ ಜೊತೆಗೆ ಸಿನಿಮಾ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಈಗ ನಟ ರಜನಿಕಾಂತ್ ಅವರ 170ನೇ ಸಿನಿಮಾ ಯಾರು ಮಾಡ್ತಾರೆ ಎನ್ನುವ ಕುತೂಹಲ ಹೆಚ್ಚಾಗುತ್ತಿದೆ.

Recommended Video

ರಜಿನಿಯ 170ನೇ ಸಿನಿಮಾ ನಾನು ಮಾಡಲ್ಲಾ ಅಂದ ಬೋನಿ ಕಪೂರ್

ಅಷ್ಟಕ್ಕೂ ಬಾಲಿವುಡ್ ನಿರ್ಮಾಪಕ ಬೋನಿಕಪೂರ್ ಹೆಸರು ಕೇಳಿ ಬಂದಿತ್ತು. ರಜನಿಕಾಂತ್ ಅವರ 170ನೇ ಚಿತ್ರವನ್ನು ಬೋನಿಕಪೂರ್ ನಿರ್ಮಾಣ ಮಾಡುತ್ತಾರೆ ಎನ್ನಲಾಗಿತ್ತು. ಅದಕ್ಕೆಲ್ಲಾ ಈಗ ಉತ್ತರ ಸಿಕ್ಕಿದೆ. ನಿರ್ಮಾಪಕ ಬೋನಿ ಕಪೂರ್ ಈ ಬಗ್ಗೆ ಟ್ವಿಟ್ ಮಾಡುವ ಮೂಲಕ ನಿಜಾಂಶವನ್ನು ಬಿಚ್ಚಿಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ, ಸೂಪರ್‌ಸ್ಟಾರ್ ರಜನಿಕಾಂತ್ ತಮ್ಮ 170 ನೇ ಚಿತ್ರಕ್ಕಾಗಿ ನಿರ್ದೇಶಕ ಅರುಣ್‌ರಾಜ ಕಾಮರಾಜ್ ಅವರೊಂದಿಗೆ ಕೈಜೋಡಿಸಲಿದ್ದಾರೆ ಎನ್ನುವ ಸುದ್ದಿ ವ್ಯಾಪಕವಾಗಿ ಹಬ್ಬಿತ್ತು. ಅಲ್ಲದೇ ಬೋನಿ ಕಪೂರ್ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನುವ ಸುದ್ದಿ ಕೂಡ ಹರಿದಾಡಿದೆ. ಹಾಗಾಗಿ ಬೋನಿ ಕಪೂರ್ ನಿರ್ಮಾಣದಲ್ಲಿ ರಜನಿ ಸಿನಿಮಾ ಅದ್ಧೂರಿಯಾಗಿ ಮೂಡಿ ಬರಲಿದೆ ಎನ್ನುವ ನಿರೀಕ್ಷೆಗಳು ಮನೆ ಮಾಡಿದ್ದವು.

ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಬೋನಿ ಕಪೂರ್!

ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ಬೋನಿ ಕಪೂರ್!

ಈ ಸುದ್ದಿಗೆ ಬ್ರೇಕ್ ಹಾಕಲು ಸ್ವತಃ ನಿರ್ಮಾಪಕ ಬೋನಿ ಕಪೂರ್ ಅವರೇ ಮುಂದೆ ಬಂದಿದ್ದಾರೆ. ಹಬ್ಬಿದ್ದ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಸದ್ಯಕ್ಕೆ ರಜನಿ ಜೊತೆ ಯಾವುದೇ ಸಿನಿಮಾ ಮಾಡುತ್ತಿಲ್ಲ. ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಮತ್ತು ರಜನಿಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ರಜನಿಕಾಂತ್ ಜೊತೆಗೆ ಬೋನಿ ಕಪೂರ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿಯನ್ನು ನಿರಾಕರಿಸಿದ್ದಾರೆ.

ರಜನಿ ಜೊತೆ ಸಿನಿಮಾ ಮಾಡುತ್ತಿಲ್ಲ: ಬೋನಿ ಕಪೂರ್!

ರಜನಿ ಜೊತೆ ಸಿನಿಮಾ ಮಾಡುತ್ತಿಲ್ಲ: ಬೋನಿ ಕಪೂರ್!

ಈ ಬಗ್ಗೆ ಟ್ವೀಟ್ ಮಾಡಿರುವ ಬೋನಿ ಕಪೂರ್ "ರಜನಿ ಅವರು ಹಲವು ವರ್ಷಗಳಿಂದ ಸ್ನೇಹಿತ. ನಾವು ನಿಯಮಿತವಾಗಿ ಭೇಟಿಯಾಗುತ್ತೇವೆ ಮತ್ತು ಆಲೋಚನೆಗಳನ್ನು, ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ನಾವು ಒಟ್ಟಿಗೆ ಕೆಲಸ ಮಾಡಲು ಚಿತ್ರವನ್ನು ಒಪ್ಪಿಕೊಂಡಾಗ, ಅದನ್ನು ಘೋಷಿಸುವ ಮೊದಲ ವ್ಯಕ್ತಿ ನಾನೇ ಆಗಿರುತ್ತೇನೆ. ನೀವು ಗಾಳಿ ಸುದ್ದಿಯನ್ನು ನಂಬಬೇಕಾಗಿಲ್ಲ." ಎಂದು ಬೋನಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ರಜನಿ ಜೊತೆ ಸಿನಿಮಾ ಮಾಡಲು ಬೋನಿ ಸಿದ್ಧ!

ರಜನಿ ಜೊತೆ ಸಿನಿಮಾ ಮಾಡಲು ಬೋನಿ ಸಿದ್ಧ!

ಬೋನಿ ಕಪೂರ್ ಈ ಹೇಳಿಕೆಯ ಮೂಲಕ ಈ ರಜನಿ ಅವರ 170ನೇ ಸಿನಿಮಾವನ್ನು ಬೋನಿ ಕಪೂರ್ ನಿರ್ಮಾಣ ಮಾಡುತ್ತಾರೆ ಎನ್ನುವ ಸುದ್ದಿಯಲ್ಲಿ ನಿಜಾಂಶವಿಲ್ಲ ಎನ್ನುವುದು ದೃಢಪಟ್ಟಿದೆ. ಆದರೆ ಸಮಯ ಬಂದಾಗ ರಜನಿಗಾಗಿ ಸಿನಿಮಾ ಮಾಡುತ್ತೇನೆ ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ. ಹಾಗಾಗಿ ಮುಂದೆ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡುವ ಸಾಧ್ಯತೆಯನ್ನು ತಳ್ಳಿ ಹಾಕುವ ಹಾಗಿಲ್ಲ.

169ನೇ ಚಿತ್ರದಲ್ಲಿ ರಜನಿ ಬ್ಯುಸಿ!

169ನೇ ಚಿತ್ರದಲ್ಲಿ ರಜನಿ ಬ್ಯುಸಿ!

ಪ್ರಸ್ತುತ ರಜನಿ ತಮ್ಮ 169 ನೇ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ, ಈ ಚಿತ್ರವನ್ನು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶಿಸಲಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಅತ್ತ ಬೋನಿ ಕಪೂರ್ ತಮ್ಮ ಮುಂಬರುವ ಚಿತ್ರ 'ವಲಿಮೈ' ಪ್ರಚಾರದಲ್ಲಿ ನಿರತರಾಗಿದ್ದಾರೆ. 'ವಲಿಮೈ' ಫೆಬ್ರವರಿ 24 ರಂದು ತೆರೆಗೆ ಬರಲು ಸಿದ್ಧವಾಗಿದೆ.

More from Filmibeat

English summary
Boney Kapoor Refuse To Produce Superstar Rajinikanth film, Here Is The details,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X