Box Office: ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ 50 ಕೋಟಿ ಕ್ಲಬ್ ಸೇರಿರುವುದು ಈ 3 ಚಿತ್ರಗಳು ಮಾತ್ರ

ಸದ್ಯ ಎಲ್ಲಿ ನೋಡಿದರೂ ಸೂಪರ್‌ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಚಿತ್ರದ್ದೇ ಅಬ್ಬರ. ಕಳೆದ ಆಗಸ್ಟ್ 10ರಂದು ಸ್ವಾತಂತ್ರ ದಿನಾಚರಣೆಯ ರಜೆಯನ್ನು ಗುರಿಯನ್ನಾಗಿಸಿಕೊಂಡು ತೆರೆಗೆ ಬಂದ ಜೈಲರ್ ಮೊದಲ ದಿನವೇ ಬ್ಲಾಕ್‌ಬಸ್ಟರ್ ಎನಿಸಿಕೊಂಡಿತು. ಹೌದು, ಈ ಹಿಂದಿನ ರಜನಿ ಚಿತ್ರಗಳಿಗೆ ಇದ್ದಷ್ಟೇ ಕ್ರೇಜ್ ಹಾಗೂ ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡ ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಪಡೆದುಕೊಂಡಿತು.

ವಿಶ್ವ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ಯಶಸ್ವಿಯಾಗಿ 500 ಕೋಟಿ ಕ್ಲಬ್ ಸೇರಿರುವ ಜೈಲರ್ ಎಲ್ಲಾ ರಾಜ್ಯಗಳಲ್ಲಿಯೂ ಸಹ ಅಬ್ಬರದ ಕಲೆಕ್ಷನ್ ಮಾಡಿದೆ. ಹೌದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೊಂಡ ಜೈಲರ್ ದೇಶದ ಎಲ್ಲಾ ಭಾಗಗಳಲ್ಲಿಯೂ ಸಹ ದಾಖಲೆಯ ಗಳಿಕೆ ಮಾಡಿದೆ. ತಮಿಳುನಾಡಿನಲ್ಲಿ ಇಂಡಸ್ಟ್ರಿ ಹಿಟ್ ಆಗಿರುವ ಜೈಲರ್ ಕೇರಳದಲ್ಲಿ ತಮಿಳು ಇಂಡಸ್ಟ್ರಿ ಹಿಟ್ ಎಂಬ ದಾಖಲೆ ನಿರ್ಮಿಸಿದೆ.

Box Office: Jailer becomes the 3rd film to enter 50 crore club in all 4 states of South India

ಇನ್ನು ಕರ್ನಾಟಕದಲ್ಲಿ ಈ ವರ್ಷ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರ ಎಂಬ ದಾಖಲೆ ನಿರ್ಮಿಸಿದ ಜೈಲರ್ ಕರ್ನಾಟಕದಲ್ಲಿ ತಮಿಳು ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಅತ್ತ ತೆಲುಗು ರಾಜ್ಯಗಳಲ್ಲಿಯೂ ಸಹ ಜೈಲರ್ ಅಬ್ಬರ ಇದಕ್ಕಿಂತ ಭಿನ್ನವಾಗಿಲ್ಲ. ಕರ್ನಾಟಕ ಹಾಗೂ ಕೇರಳ ರಾಜ್ಯಗಳಿಗಿಂತ ತೆಲುಗು ರಾಜ್ಯಗಳಲ್ಲಿ ಜೈಲರ್ ಕಲೆಕ್ಷನ್ ಹೆಚ್ಚಿದೆ.

ಈ ಮೂಲಕ ಜೈಲರ್ ಸೌತ್‌ನ ಎಲ್ಲಾ ರಾಜ್ಯಗಳ ಬಾಕ್ಸ್ ಆಫೀಸ್‌ನಲ್ಲಿಯೂ 50 ಕೋಟಿ ಗಳಿಸಿದ ವಿಭಿನ್ನ ಹಾಗೂ ವಿಶೇಷ ದಾಖಲೆ ಬರೆದಿದೆ. ಈ ವಿಶೇಷ ದಾಖಲೆಯನ್ನು ಮಾಡಿದ ಮೂರನೇ ಚಿತ್ರ ಎಂಬ ಕೀರ್ತಿಗೆ ಜೈಲರ್ ಪಾತ್ರವಾಗಿದೆ. ಹೌದು, ಈ ಹಿಂದೆ ಇಂತಹ ಸಾಧನೆಯನ್ನು ರಾಜಮೌಳಿ ನಿರ್ದೇಶನದ ಹಾಗೂ ಪ್ರಭಾಸ್ ನಟನೆಯ ಬಾಹುಬಲಿ ದ ಕನ್ಕ್ಲೂಷನ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2 ಚಿತ್ರಗಳು ಮಾಡಿದ್ದವು.

More from Filmibeat

English summary
50 crore club in all the 4 states of South India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X