ದುಬೈ ಯೂಟ್ಯೂಬರ್ ಖಲೀದ್ ಜೊತೆ 'ಗಂಗೆ ಬಾರೆ ತುಂಗೆ ಬಾರೆ' ನಟಿ ಡೇಟಿಂಗ್; ಕೈಕೈ ಹಿಡಿದು ಪೋಸ್

ಯಾರಿಗೆ ಯಾವಾಗ ಯಾರೊಟ್ಟಿಗೆ ಲವ್ ಆಗುತ್ತದೆ ಎಂದು ಹೇಳುವುದು ಕಷ್ಟ. ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪರಿಚಯದಿಂದಲೇ ಲವ್ ಮಾಡಿ ಮದುವೆ ಆಗಿರುವವರು ಇದ್ದಾರೆ. ಭಾರತದಲ್ಲಿ ಇರುವವರು ವಿದೇಶದಲ್ಲಿ ಇರುವವರ ಜೊತೆ ಪ್ರೀತಿ ಬೀಳುವುದು ಹೊಸದೇನು ಅಲ್ಲ. ಇದೀಗ 'ಗಂಗೆ ಬಾರೆ ತುಂಗೆ ಬಾರೆ' ನಟಿ ತಮ್ಮ ಲವ್ ಸ್ಟೋರಿ ರಿವೀಲ್ ಮಾಡಿದ್ದಾರೆ.

ದುಬೈ ಮೂಲದ ಯೂಟ್ಯೂಬರ್ ಖಲೀದ್ ಎಂಬುವವರ ಜೊತೆ ನಟಿ ಸುನೈನಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಕಳೆದ ವರ್ಷವೇ ಶುರುವಾಗಿತ್ತು. ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಅದನ್ನು ಖಚಿತಪಡಿಸಿರಲಿಲ್ಲ. ಇದೀಗ ಪ್ರಿಯಕರನ ಹುಟ್ಟುಹಬ್ಬದ ದಿನವೇ ತಮ್ಮಿಬ್ಬರ ಲವ್ ಸ್ಟೋರಿಯನ್ನು ಸುನೈನಾ ಬಹಿರಂಗಪರಿಸಿದಂತೆ ಕಾಣ್ತಿದೆ.

ರೆಸ್ಟೋರೆಂಟ್‌ನಲ್ಲಿ ಖಲೀದ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಆ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಸುನೈನಾ ಜೊತೆ ಕೈಕೈ ಹಿಡಿದು ಪೋಸ್ ಕೊಟ್ಟಿದ್ದಾರೆ. ಅದನ್ನು ನೋಡಿ ಇಬ್ಬರೂ ಪ್ರೀತಿಯಲ್ಲಿ ಬಿದ್ದಿರುವ ನಿಜ ಎಂದು ಚರ್ಚೆ ನಡೀತಿದೆ. ಆದರೆ ಸುನೈನಾ ಫೋಟೊಗಳನ್ನು ಫೋಸ್ಟ್ ಮಾಡಿಲ್ಲ. ಬರ್ತ್‌ಡೇ ಕೇಕ್ ಫೋಟೊವನ್ನು ಮಾತ್ರ ಇನ್‌ಸ್ಟಾ ಸ್ಟೋರಿಯಲ್ಲಿ ಹಾಕಿಕೊಂಡಿದ್ದಾರೆ.

Buzz Gange Baare Thunge Baare film actress confirms dating this Dubai influencer

ದುಬೈನ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಖಾಲಿದ್ ಅಲ್ ಅಮೇರಿ ತಮ್ಮ ರೀಲ್ಸ್, ವ್ಲಾಗ್ ವೀಡಿಯೋಗಳಿಂದ ಗಮನ ಸೆಳೆಯುತ್ತಾರೆ. ಇತ್ತೀಚಿಗೆ ಭಾರತಕ್ಕೆ ಸಂಬಂಧಿಸಿದ ರೀಲ್ಸ್‌ಗಳನ್ನು ಹೆಚ್ಚು ಪೋಸ್ಟ್ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬಂದಾಗಲೂ ರೀಲ್ಸ್ ಮಾಡಿ ಪೋಸ್ಟ್ ಮಾಡಿದ್ದರು. ಮಹಾರಾಷ್ಟ್ರದ ನಾಗ್ಪುರ ಮೂಲದ ನಟಿ ಸುನೈನಾ ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಕನ್ನಡದಲ್ಲಿ 'ಗಂಗೆ ಬಾರೆ ತುಂಗೆ ಬಾರೆ' ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಜೋಡಿಯಾಗಿ ಮಿಂಚಿದ್ದರು.

17 ವರ್ಷಗಳ ಹಿಂದೆ 'ಗಂಗೆ ಬಾರೆ ತುಂಗೆ ಬಾರೆ' ಸಿನಿಮಾ ತೆರೆಗೆ ಬಂದಿತ್ತು. ಬಳಿಕ ಯಾವುದೇ ಕನ್ನಡ ಚಿತ್ರದಲ್ಲಿ ಆಕೆ ನಟಿಸಲಿಲ್ಲ. ನಾಗ್ಪುರದಲ್ಲಿ ಹುಟ್ಟಿ ಬೆಳೆದ ಸುನೈನಾ ಬಳಿಕ ಪೋಷಕರ ಜೊತೆ ಹೈದರಾಬಾದ್‌ನಲ್ಲಿ ನೆಲೆಸಿದ್ದರು. 'ಕುಬೇರ' ಚಿತ್ರದ ಸಣ್ಣ ಪಾತ್ರದಲ್ಲಿ ಆಕೆ ನಟಿಸಿದ್ದು ಗೊತ್ತೇಯಿದೆ. ಬಳಿಕ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

ಆಪ್ತರ ಸಮ್ಮುಖದಲ್ಲಿ ಖಾಲಿದ್ ಹುಟ್ಟುಹಬ್ಬ ಆಚರಿಸಿದ್ದಾರೆ. ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಖಾಲಿದ್ ಮಿಂಚಿದ್ದು ಪರ್ಪಲ್ ಕಲರ್ ಸೀರೆಯಲ್ಲಿ ಸುನೈನಾ ಕಾಣಿಸಿಕೊಂಡಂತೆ ಮಿರರ್ ಸೆಲ್ಫಿ ಇಮೇಜ್‌ನಲ್ಲಿ ಕಾಣುತ್ತಿದೆ. 20 ವರ್ಷಗಳ ಹಿಂದೆ 'ಕುಮಾರ್ vs ಕುಮಾರಿ' ಎಂಬ ಚಿತ್ರದಲ್ಲಿ ಮೊದಲ ಬಾರಿಗೆ ಸುನೈನಾ ನಟಿಸಿದ್ದರು. 'ಮಾಸಿಲ ಮಣಿ', 'ವಂಶಂ', 'ನೀರ್ಪರವೈ', 'ತೆರಿ', 'ತೊಂಡನ್', 'ಕಾಲಿ', 'ರಾಜಾ ರಾಜಾ ಚೋರ', 'ರಾಕೆಟ್ ಡ್ರೈವರ್' ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಆಕೆ ಬಣ್ಣ ಹಚ್ಚಿದ್ದಾರೆ.

ಸಿನಿಮಾಗಳಲ್ಲಿ ಮಾತ್ರವಲ್ಲ ಕಿರುತೆರೆ ಕಾರ್ಯಕ್ರಮಗಳಲ್ಲಿ ಕೂಡ ಸುನೈನಾ ಮಿಂಚಿದ್ದಾರೆ. ಕಳೆದ ವರ್ಷವೇ ಇಬ್ಬರೂ ಡೇಟಿಂಗ್ ನಡೆಸುತ್ತಿರುವ ಬಗ್ಗೆ ವದಂತಿ ಕೇಳಿಬಂದರೂ ಪ್ರತಿಕ್ರಿಯಿಸಲಿಲ್ಲ. ಬದಲಿಗೆ ಪರೋಕ್ಷವಾಗಿ ತಮ್ಮಿಬ್ಬರ ರಿಲೇಷನ್‌ಶಿಪ್‌ ಬಗ್ಗೆ ಸುಳಿವು ಕೊಡುತ್ತಾ ಬಂದಿದ್ದರು. ಈವರೆಗೆ ಈ ಬಗ್ಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಶೀಘ್ರದಲ್ಲೇ ಇಬ್ಬರೂ ಮದುವೆ ಆಗುತ್ತಾರೆ ಎನ್ನಲಾಗ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ 30 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಖಾಲಿದ್ ಯೂಟ್ಯೂಬ್‌ನಿಂದಲೂ ಒಳ್ಳೆ ಆದಾಯ ಗಳಿಸುತ್ತಿದ್ದಾರೆ. 50 ಲಕ್ಷಕ್ಕೂ ಅಧಿಕ ಮಂದಿ ಯೂಟ್ಯೂಬ್‌ನಲ್ಲಿ ಅವರ ಚಾನಲ್ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಇನ್ನು ಆತನಿಗೆ ಈಗ 42 ವರ್ಷ ವಯಸ್ಸು ಎನ್ನಲಾಗ್ತಿದ್ದು ಸುನೈನಾಗೆ 36 ವರ್ಷ. ಇಬ್ಬರ ವಯಸ್ಸಿನ ಅಂತರ 6 ವರ್ಷ ಎಂದು ವರದಿಯಾಗಿದೆ.

More from Filmibeat

Read more about: actress kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X