ದಳಪತಿ ವಿಜಯ್ ಕೊನೆ ಸಿನಿಮಾ ಟೈಟಲ್ ಇದೇನಾ? ಮೊದಲ ಚಿತ್ರಕ್ಕೂ ಇದೇ ಹೆಸರಿತ್ತು!

ತಮಿಳು ನಟ ವಿಜಯ್ ರಾಜಕೀಯದತ್ತ ಮುಖ ಮಾಡಿರುವುದು ಗೊತ್ತೇಯಿದೆ. 'ತಮಿಳಿಗ ವೆಟ್ರಿ ಕಳಗಂ' ಎಂಬ ಪಕ್ಷ ಸ್ಥಾಪಿಸಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಅದಕ್ಕೂ ಮುನ್ನ ಕೊನೆಯದಾಗಿ ಒಂದು ಚಿತ್ರಕ್ಕೆ ದಳಪತಿ ಬಣ್ಣ ಹಚ್ಚಿದ್ದಾರೆ.

ವಿನೋದ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಇದು ವಿಜಯ್ 69ನೇ ಸಿನಿಮಾ. ಹಾಗಾಗಿ ದಳಪತಿ69 ಎಂಬ ವರ್ಕಿಂಗ್ ಟೈಟಲ್‌ನಲ್ಲಿ ಚಿತ್ರೀಕರಣ ನಡೀತಿದೆ. ಕೆವಿಎಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಅಂದಾಜು 300 ಕೋಟಿ ರೂ. ಬಜೆಟ್‌ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಇದೇ ನನ್ನ ಕೊನೆಯ ಸಿನಿಮಾ ಎಂದು ವಿಜಯ್ ಅಧಿಕೃತವಾಗಿ ಹೇಳಿಲ್ಲ. ಆದರೂ ಹೀಗೊಂದು ಚರ್ಚೆ ನಡೀತಿದೆ.

Buzz Interesting title in consideration for Vijay s Thalapathy 69

ಪೂಜಾ ಹೆಗ್ಡೆ ದಳಪತಿ69 ಚಿತ್ರದಲ್ಲಿ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ, ಮಮತಾ ಬಿಜು ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಅಕ್ಟೋಬರ್ 17ಕ್ಕೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ.

ಗಣರಾಜ್ಯೋತ್ಸವ ಸಂಭ್ರಮದಲ್ಲಿ ಟೈಟಲ್ ಸಮೇತ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗುತ್ತದೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರದ ಟೈಟಲ್ ಏನು ಎನ್ನುವ ಬಗ್ಗೆ ಭಾರೀ ಕುತೂಹಲ ಇದೆ. ಯಾವುದೇ ಚಿತ್ರಕ್ಕೆ ಟೈಟಲ್ ಬಹಳ ಮುಖ್ಯ. ಅದರಲ್ಲೂ ಸ್ಟಾರ್ ನಟರ ಚಿತ್ರಗಳಿಗೆ ಪವರ್‌ಫುಲ್ ಟೈಟಲ್‌ಗಳ ಹುಡುಕಾಟ ನಡೆಯುತ್ತದೆ. ದಳಪತಿ69 ಚಿತ್ರಕ್ಕೆ ಇಂಟ್ರೆಸ್ಟಿಂಗ್ ಟೈಟಲ್ ಒಂದು ಚರ್ಚೆಗೆ ಬಂದಿದೆ.

'ನಾಲೈಯ ತೀರ್ಪು' ಎಂಬ ಟೈಟಲ್ ಅನ್ನು ವಿಜಯ್ ಕೊನೆ ಚಿತ್ರಕ್ಕೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದಕ್ಕೆ 'ನಾಳೆಯ ತೀರ್ಪು' ಎನ್ನುವ ಅರ್ಥ ಇದೆ. ಅಭಿಮಾನಿಗಳು ಈ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರಿಗೆ ಇಷ್ಟವಾಗಿದ್ದರೆ ಮತ್ತೆ ಕೆಲವರು ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ವಿಜಯ್ ಹೀರೊ ಆಗಿ ನಟಿಸಿದ ಮೊದಲ ಸಿನಿಮಾ ಟೈಟಲ್ ಕೂಡ ಇದೇ ಆಗಿತ್ತು.

Buzz Interesting title in consideration for Vijay s Thalapathy 69

ನಟ ವಿಜಯ್ ರಾಜಕೀಯರಂಗಕ್ಕೆ ಧುಮುಕಿದ್ದಾರೆ. ತಮ್ಮ ಕೊನೆಯ ಚಿತ್ರವನ್ನು ತಮ್ಮ ಪೊಲಿಟಿಕಲ್ ಎಂಟ್ರಿಗೆ ವೇದಿಕೆ ಮಾಡಿಕೊಳ್ಳಲಿದ್ದಾರೆ. ಹೊಸ ಕ್ಷೇತ್ರದಲ್ಲಿ ಜನರ ತೀರ್ಪಿಗಾಗಿ ಕಾಯುತ್ತಿದ್ದಾರೆ. ಹಾಗಾಗಿ ಈ ಟೈಟಲ್ ಚೆನ್ನಾಗಿರುತ್ತದೆ ಎನ್ನುವುದು ಕೆಲವರ ವಾದ. ಇನ್ನು ಮೊದಲ ಚಿತ್ರ ಕೊನೆಯ ಚಿತ್ರಕ್ಕೆ ಒಂದೇ ಟೈಟಲ್ ಎನ್ನುವುದು ಇಂಟ್ರೆಸ್ಟಿಂಗ್ ಆಗಿರುತ್ತದೆ ಎನ್ನುವುದು ಕೆಲವರ ವಾದ.

ಅಂದಹಾಗೆ ದಳಪತಿ69 ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಎನ್ನುವ ಗುಮಾನಿಗೂ ಇದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ತೆಲುಗಿನಲ್ಲಿ ಬಾಲಕೃಷ್ಣ, ಶ್ರೀಲೀಲಾ ನಟಿಸಿದ್ದ ಚಿತ್ರದ ಕತೆಯನ್ನು ಕೊಂಚ ಬದಲಿಸಿದೆ ವಿಜಯ್ ಚಿತ್ರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಊಹಾಪೋಹವಿದೆ. ವಿಜಯ್ ಕೊನೆಯ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ದಳಪತಿ ನಟನೆಯ ಚಿತ್ರಗಳು ತಮಿಳಿನಲ್ಲೇ ಭರ್ಜರಿ ಬ್ಯುಸಿನೆಸ್ ಮಾಡುತ್ತವೆ. ನೆಗೆಟಿವ್ ರೆಸ್ಪಾನ್ಸ್ ಸಿಕ್ಕರೂ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತವೆ. ಅದಕ್ಕೆ ತಕ್ಕಂತೆ ಭಾರೀ ಸಂಭಾವನೆ ಪಡೆಯುತ್ತಾರೆ. 'GOAT' ಚಿತ್ರಕ್ಕೆ 200 ಕೋಟಿ ರೂ. ಸಂಭಾವನೆ ಕೊಟ್ಟಿದ್ದಾಗಿ ನಿರ್ಮಾಪಕರೇ ಹೇಳಿದ್ದರು. ಇದೀಗ ದಳಪತಿ69 ಚಿತ್ರಕ್ಕೆ 250 ಕೋಟಿ ರೂ. ಜೇಬಿಗಿಳಿಸುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಚಿತ್ರ ಹೇಗೆ ಸದ್ದು ಮಾಡುತ್ತದೆ ಕಾದು ನೋಡಬೇಕು.

More from Filmibeat

English summary
Crazy title in consideration for Thalapathy Vijay's Last film;
Read more about: tamil vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X