ವಾರೆವ್ಹಾ.. 'ಜೈಲರ್'-2 ಅಖಾಡಕ್ಕೆ ಮತ್ತೊಬ್ಬ ಖ್ಯಾತ ನಟ ಎಂಟ್ರಿ

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್'-2 ಶೂಟಿಂಗ್ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಕೇರಳದಲ್ಲಿ ಚಿತ್ರೀಕರಣ ಆರಂಭಿಸಲಾಗಿತ್ತು. ಇನ್ನು ಚಿತ್ರದಲ್ಲಿ ಶಿವಣ್ಣ, ಮೋಹನ್ ಲಾಲ್ ನಟಿಸೋದು ಪಕ್ಕಾ ಆಗಿದೆ. ಮತ್ತೊಬ್ಬ ಸ್ಟಾರ್ ನಟ ಕೂಡ ಎಂಟ್ರಿ ಆಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ.

ಎರಡು ವರ್ಷಗಳ ಹಿಂದೆ ನೆಲ್ಸನ್ ನಿರ್ದೇಶನದ 'ಜೈಲರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ಅದರ ಬೆನ್ನಲ್ಲೇ ಸೀಕ್ವೆಲ್ ಬಗ್ಗೆ ಚರ್ಚೆ ಶುರುವಾಗಿತ್ತು. ಇದೇ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಸ್ಪೆಷಲ್ ಪ್ರೋಮೊ ಸಮೇತ ಸಿನಿಮಾ ಘೋಷಣೆ ಆಗಿತ್ತು.

Buzz Popular actor approached for a role in Rajinikanth starrer Jailer-2

ಸೂಪರ್ ಹಿಟ್ ಸಿನಿಮಾ ಸೀಕ್ವೆಲ್ ಅಂದಾಕ್ಷಣ ಸಹಜವಾಗಿಯೇ ಕುತೂಹಲ ಮೂಡುತ್ತದೆ. ಮೊದಲ ಭಾಗಕ್ಕಿಂತ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗುತ್ತದೆ. ಬಜೆಟ್, ಸ್ಟಾರ್‌ಕಾಸ್ಟ್, ಸ್ಕೇಲ್ ಎಲ್ಲವೂ ಹೆಚ್ಚಾಗುತ್ತದೆ. ಅದೇ ರೀತಿ 'ಜೈಲರ್'-2 ಚಿತ್ರವನ್ನು ಕೂಡ ದೊಡ್ಡದಾಗಿ ಕಟ್ಟಿಕೊಡುವ ಪ್ರಯತ್ನ ನಡೀತಿದೆ. ಇತ್ತೀಚೆಗೆ ಚಿತ್ರೀಕರಣಕ್ಕೆ ಹೋಗುವ ಮಾರ್ಗ ಮಧ್ಯೆ ಶಿವನ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ ನೀಡಿದ್ದರು. ಆ ವೀಡಿಯೋ ವೈರಲ್ ಆಗಿತ್ತು.

ಇನ್ನು ಚಿತ್ರೀಕರಣ ಮುಗಿಸಿ ವಾಪಸ್ ಬರುವಾಗ ವಿಮಾನ ಪ್ರಯಾಣದ ವೇಳೆ ರಜನಿಕಾಂತ್ ಎಕಾನಮಿ ಕ್ಲಾಸ್‌ ಆಯ್ಕೆ ಮಾಡಿಕೊಂಡಿದ್ದಾರೆ. ವಿಮಾನದಲ್ಲಿ ತಲೈವಾನನ್ನು ನೋಟಿ ಸಹ ಪ್ರಯಾಣಿಕರು ಶಾಕ್ ಆಗಿದ್ದಾರೆ. ಆ ವೀಡಿಯೋ ಕೂಡ ವೈರಲ್ ಆಗುತ್ತಿದೆ. ಇನ್ನು 'ಜೈಲರ್'-2 ಚಿತ್ರದಲ್ಲಿ ಶಿವಣ್ಣ ಹಾಗೂ ಮೋಹನ್ ಲಾಲ್ ಅತಿಥಿ ಪಾತ್ರದಲ್ಲಿ ನಟಿಸೋದು ಕನ್ಫರ್ಮ್ ಆಗಿದೆ.

Buzz Popular actor approached for a role in Rajinikanth starrer Jailer-2

ಇತ್ತೀಚೆಗೆ ಶಿವಣ್ಣ ಸಂದರ್ಶನವೊಂದರಲ್ಲಿ ಮಾತನಾಡಿ ನರಸಿಂಹ ಪಾತ್ರ ಮತ್ತೆ ಮಾಡುವುದಾಗಿ ಹೇಳಿದ್ದಾರೆ. ಚಿತ್ರತಂಡ ಈ ಬಗ್ಗೆ ಶೀಘ್ರದಲ್ಲೇ ಅವರನ್ನು ಸಂಪರ್ಕಿಸಲು ಸಾಧ್ಯತೆಯಿದೆ. ಇನ್ನುಳಿದಂತೆ ತೆಲುಗು ನಟ ಬಾಲಕೃಷ್ಣ ಕೂಡ ಅತಿಥಿ ಪಾತ್ರದಲ್ಲಿ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ.

ಶಿವಣ್ಣ, ಮೋಹನ್ ಲಾಲ್ ಜೊತೆಗೆ ಮಲಯಾಳಂ ನಟ ಫಹಾದ್ ಫಾಸಿಲ್ ಕೂಡ 'ಜೈಲರ್'-2 ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದೆ. 'ವೆಟ್ಟೆಯಾನ್' ಚಿತ್ರದಲ್ಲಿ ಸೂಪರ್ ಸ್ಟಾರ್ ಜೊತೆ ಫಹಾದ್ ತೆರೆ ಹಂಚಿಕೊಂಡಿದ್ದರು. ಇವರಿಬ್ಬರ ಕಾಂಬಿನೇಷನ್ ಹಿಟ್ ಆಗಿತ್ತು. ಇದೀಗ ಮತ್ತೊಮ್ಮೆ ಜೊತೆಯಾಗುತ್ತಾರೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.

'ಜೈಲರ್' ಸಕ್ಸಸ್ ಬೆನ್ನಲ್ಲೇ ನಿರ್ಮಾಪಕರು ನಟ ರಜನಿಕಾಂತ್, ನಿರ್ದೇಶಕ ನೆಲ್ಸನ್ ಹಾಗೂ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದಿರನ್ ಅವರಿಗೆ ಕಾರುಗಳನ್ನು ಗಿಫ್ಟ್ ಆಗಿ ಕೊಟ್ಟು ಲಾಭದಲ್ಲಿ ಪಾಲು ಕೊಟ್ಟು ಮತ್ತೊಂದು ಚಿತ್ರಕ್ಕೆ ಬುಕ್ ಮಾಡಿದ್ದರು. ಹಾಗಾಗಿ ಈ ಕಾಂಬಿನೇಷನ್ ಬಹಳ ನಿರೀಕ್ಷೆ ಹುಟ್ಟಾಕ್ಕಿದೆ. ಸದ್ಯ ರಜನಿಕಾಂತ್ 'ಕೂಲಿ' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. ಆ ಚಿತ್ರವನ್ನು ಕೂಡ ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡಿದೆ.

ಆಗಸ್ಟ್ 15ಕ್ಕೆ 'ಕೂಲಿ' ಸಿನಿಮಾ ಬಿಡುಗಡೆ ಆಗಲಿದೆ. ಇನ್ನು 'ಜೈಲರ್'-2 ಚಿತ್ರದಲ್ಲಿ ರಜನಿಕಾಂತ್ ನಿವೃತ್ತ ಜೈಲಾಧಿಕಾರಿ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ಮುಂದುವರೆಸಲಿದ್ದಾರೆ. ಅವರ ಪತ್ನಿ ವಿಜಿ ಪಾತ್ರದಲ್ಲಿ ರಮ್ಯಾಕೃಷ್ಣನ್ ನಟಿಸುತ್ತಿದ್ದಾರೆ. ಕೇರಳದಲ್ಲಿ ನಡೆದ ಮೊದಲ ಶೆಡ್ಯೂಲ್‌ನಲ್ಲಿ ರಮ್ಯಾಕೃಷ್ಣ ಸಹ ಭಾಗಿ ಆಗಿದ್ದರು.

ನಟ, ನಿರ್ದೇಶಕ ಎಸ್‌. ಜೆ ಸೂರ್ಯ 'ಜೈಲರ್'-2 ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೀಗೆ ಸ್ಟಾರ್‌ ನಟರನ್ನೆಲ್ಲಾ ಒಟ್ಟಿಗೆ ಸೇರಿಸಿ ಸಿನಿಮಾ ಮಾಡುವುದು ಒಳ್ಳೆ ಲೆಕ್ಕಾಚಾರವೇ. ಆದರೆ ಕೆಲವೊಮ್ಮೆ ಇದು ಉಲ್ಟಾ ಆಗುವ ಸಾಧ್ಯತೆ ಕೂಡ ಇರುತ್ತದೆ. 'ವೆಟ್ಟೆಯಾನ್' ಚಿತ್ರದ ವಿಚಾರದಲ್ಲೇ ಇದೇ ಎಡವಟ್ಟು ನಡೆದಿತ್ತು.

More from Filmibeat

English summary
Is This Famous actor going to play key role in Rajinikanth's Jailer sequel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X