Neel- Ajith: ಕೆಜಿಎಫ್-3 ಚಿತ್ರದಲ್ಲಿ ಅಜಿತ್? ನೀಲ್- ಹೊಂಬಾಳೆ ಕ್ರೇಜಿ ಪ್ಲ್ಯಾನ್
ಭಾರತೀಯ ಚಿತ್ರರಂಗದಲ್ಲೀಗ ಸಿನಿಮ್ಯಾಟಿಕ್ ಯೂನಿವರ್ಸ್ ಟ್ರೆಂಡ್ ಶುರುವಾಗಿದೆ. ತಮಿಳಿನಲ್ಲಿ ಲೋಕೇಶ್ ಕನಕರಾಜ್ ಇದಕ್ಕೆ ಬುನಾದಿ ಹಾಕಿದ್ದಾರೆ. ಇದೀಗ ಪ್ರಶಾಂತ್ ನೀಲ್ ಕೂಡ ಇದೇ ಹಾದಿಯಲ್ಲಿದ್ದಾರೆ ಎನ್ನಲಾಗ್ತಿದೆ. ಈ ಹಿಂದೆ 'KGF' ಯೂನಿವರ್ಸ್‌ನಲ್ಲಿ 'ಸಲಾರ್' ಸಿನಿಮಾ ಬರುತ್ತೆ ಎನ್ನಲಾಗಿತ್ತು. ಬಳಿಕ ಅದು ಸುಳ್ಳಾಗಿತ್ತು.
ಈಗಾಗಲೇ ಪ್ರಶಾಂತ್ ನೀಲ್ ತೆಲುಗು ಚಿತ್ರರಂಗ ಪ್ರವೇಶಿಸಿದ್ದಾರೆ. ಇದೀಗ ಕಾಲಿವುಡ್ ಕಡೆ ಮುಖ ಮಾಡಿದ್ದಾರೆ ಎನ್ನಲಾಗ್ತಿದೆ. ಹೊಂಬಾಳೆ ಕೂಡ ಪ್ರಶಾಂತ್ ನೀಲ್ ಜೊತೆ ಕೈ ಜೋಡಿಸಿದ್ದು ತಮಿಳು ನಟ ಅಜಿತ್ ಜೊತೆ ಕ್ರೇಜಿ ಪ್ರಾಜೆಕ್ಟ್ ಪ್ಲಾನ್ ಮಾಡ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಇತ್ತೀಚೆಗೆ ತಮಿಳು ನಟ ಅಜಿತ್ ಭೇಟಿ ಮಾಡಿ ಪ್ರಶಾಂತ್ ನೀಲ್ ಕಥೆ ಹೇಳಿ ಸಿನಿಮಾ ಬಗ್ಗೆ ಚರ್ಚಿಸಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಅಜಿತ್ 'ವಿಡಾಮುಯರ್ಚಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರಕ್ಕಾಗಿ ಭರ್ಜರಿ ಆಕ್ಷನ್ ಸೀಕ್ವೆನ್ಸ್‌ನಲ್ಲಿ ಭಾಗಿ ಆಗಿದ್ದಾರೆ. ಇತ್ತೀಚೆಗೆ ಅಜಿತ್ ಭೇಟಿ ಮಾಡಿ ಒಂದಲ್ಲ ಎರಡು ಸಿನಿಮಾ ಮಾಡುವ ಬಗ್ಗೆ ನೀಲ್ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಮೊದಲಿಗೆ ಒಂದು ಸೋಲೊ ಸಿನಿಮಾ ಮಾಡುತ್ತಾರಂತೆ. ಬಳಿಕ ಮಾಡುವ ಮತ್ತೊಂದು ಚಿತ್ರಕ್ಕೂ ಕನ್ನಡದ 'KGF' ಸರಣಿಗೂ ಲಿಂಕ್ ಇರಲಿದೆಯಂತೆ. ಅಂದ್ರೆ, ಮುಂದೆ ಯಶ್- ಅಜಿತ್ ಒಂದೇ ಚಿತ್ರದಲ್ಲಿ ಎದಿರುಬದಿರಾಗುವ ಸಾಧ್ಯತೆಯಿದೆ ಎನ್ನುವ ಚರ್ಚೆ ಕಾಲಿವುಡ್‌ನಲ್ಲಿ ಶುರುವಾಗಿದೆ.
'ವಿಡಾಮುಯರ್ಚಿ' ಬಳಿಕ ಅಜಿತ್ 'ಗುಡ್ ಬ್ಯಾಡ್ ಅಗ್ಲಿ' ಸಿನಿಮಾದಲ್ಲಿ ನಟಿಸಲಿದ್ದಾರೆ. ಮುಂದಿನ ವರ್ಷ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ಶುರುವಾಗುತ್ತದೆ ಎನ್ನಲಾಗ್ತಿದೆ. ಈ ಚಿತ್ರಗಳನ್ನು ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ನಿರ್ಮಾಣ ಮಾಡುತ್ತದೆ ಎನ್ನುವ ಚರ್ಚೆ ಜೋರಾಗಿದೆ. ಪ್ರಶಾಂತ್ ನೀಲ್ ಸದ್ಯ 'ಸಲಾರ್-2' ಹಾಗೂ 'NTR31' ಸಿನಿಮಾಗಳನ್ನು ಮುಗಿಸಬೇಕಿದೆ. ಬಳಿಕವೇ ಅಜಿತ್ ಸಿನಿಮಾ ವಿಚಾರ ಮುನ್ನಲೆಗೆ ಬರಲಿದೆ.
ಅಜಿತ್ ನಟಿಸುತ್ತಿರುವ 63ನೇ ಸಿನಿಮಾ 'ಗುಡ್ ಬ್ಯಾಡ್ ಅಗ್ಲಿ'. ಹಾಗಾಗಿ 64ನೇ ಚಿತ್ರಕ್ಕೆ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇನ್ನು 65 ಅಥವಾ 66ನೇ ಸಿನಿಮಾ ಕಥೆಯನ್ನು 'KGF'-3ಗೆ ಲಿಂಕ್ ಮಾಡುವ ಸಾಧ್ಯತೆಯಿದೆ ಎನ್ನುವ ಊಹಾಪೋಹ ಶುರುವಾಗಿದೆ. ಈಗಾಗಲೇ ಹೊಂಬಾಳೆ ಸಂಸ್ಥೆ ಕೂಡ ತೆಲುಗು, ಮಲಯಾಳಂನಲ್ಲಿ ಸಿನಿಮಾ ನಿರ್ಮಿಸಿದೆ. ಈ ಹಿಂದೆ ಸುಧಾ ಕೊಂಗರ ಜೊತೆ ಒಂದು ಸಿನಿಮಾ ಘೋಷಣೆ ಆಗಿತ್ತು. ಕಾರಣಾಂತರಗಳಿಂದ ಅದು ತಡವಾಗುತ್ತಿದೆ.

ಪ್ರಶಾಂತ್ ನೀಲ್ ಸದ್ಯಕ್ಕೆ ಯಾವ ಸಿನಿಮಾ ಶುರು ಮಾಡುತ್ತಾರೆ ಎನ್ನುವ ಗೊಂದಲ ಶುರುವಾಗಿದೆ. 'ಸಲಾರ್-2' ಬೇಗ ಮಾಡಿ ಅಂತ ಪ್ರಭಾಸ್ ಫ್ಯಾನ್ಸ್ ಹಾಗೂ 'NTR31' ಬೇಗ ತೆರೆಗೆ ತನ್ನಿ ಎಂದು ತಾರಕ್ ಫ್ಯಾನ್ಸ್ ಪಟ್ಟು ಹಿಡಿದಿದ್ದಾರೆ. ಇದೆಲ್ಲದರ ನಡುವೆ ಅಜಿತ್ ಜೊತೆಗಿನ ಸಿನಿಮಾ ಚರ್ಚೆ ಶುರುವಾಗಿದೆ. ಮಾಸ್ ಸಬ್ಜೆಕ್ಟ್‌ಗಳನ್ನು ತೆರೆಗೆ ತರುವಲ್ಲಿ ನೀಲ್ ನಿಸ್ಸೀಮರು. ನೀಲ್ ಎಲಿವೇಷನ್ಸ್, ಥಲಾ ಪರ್ಫಾರ್ಮೆನ್ಸ್ ಸಿಂಕ್ ಆದ್ರೆ ತೆರೆಮೇಲೆ ಮ್ಯಾಜಿಕ್ ಗ್ಯಾರೆಂಟಿ ಎಂದು ಅಜಿತ್ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ.
ಮುಂದಿನ 5 ವರ್ಷಗಳಲ್ಲಿ 3000 ಕೋಟಿ ರೂಪಾಯಿಯನ್ನು ಮನರಂಜನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ವಿಜಯ್ ಕಿರಗಂದೂರು ಹೇಳಿದ್ದರು. ಅದಕ್ಕೆ ತಕ್ಕಂತೆ ದೊಡ್ಡ ದೊಡ್ಡ ಪ್ರಾಜೆಕ್ಟ್‌ಗಳಿಗೆ ಕೈ ಹಾಕಿದ್ದಾರೆ. ಈಗಾಗಲೇ 'ರಘುತಾತ' ಸಿನಿಮಾ ಆಗಸ್ಟ್ 15ಕ್ಕೆ ತೆರೆಗೆ ಬರಲಿದೆ. 'ಬಘೀರ' ಹಾಗೂ 'ಕಾಂತಾರ-1' ಚಿತ್ರೀಕರಣ ನಡೀತಿದೆ. 'ರಿಚರ್ಡ್ ಆಂಟನಿ' ಸಿನಿಮಾ ಘೋಷಣೆ ಆಗಿದೆ.


Click it and Unblock the Notifications











