ರಜನಿಕಾಂತ್ 'ಜೈಲರ್-2' ಚಿತ್ರದಲ್ಲಿ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ? ಯಾವ ಪಾತ್ರ ಗೊತ್ತಾ?

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಕಳೆದ ವರ್ಷ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಚಿತ್ರದ ಪ್ರೀಕ್ವೆಲ್ ಅಥವಾ ಸೀಕ್ವೆಲ್ ಬರುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದ ನಿರ್ದೇಶಕ ನೆಲ್ಸನ್ ಕೂಡ ಆ ಬಗ್ಗೆ ಮಾತನಾಡಿದ್ದಾರೆ. ಆದರೆ ಅಧಿಕೃತವಾಗಿ ಸಿನಿಮಾ ಘೋಷಣೆ ಆಗಿಲ್ಲ.

ಈ ವರ್ಷ ರಜನಿಕಾಂತ್ ಹುಟ್ಟುಹಬ್ಬಕ್ಕೆ 'ಜೈಲರ್'- 2 ಚಿತ್ರ ಘೋಷಣೆ ಆಗುತ್ತದೆ ಎನ್ನುವ ನಿರೀಕ್ಷೆಯಿತ್ತು. ಪ್ರೋಮೊ ಶೂಟ್ ಕೂಡ ಮಾಡಿದ್ದಾರೆ ಎನ್ನಲಾಗಿತ್ತು. ಆದರೆ ಸಿನಿಮಾ ಘೋಷಣೆ ಆಗಲಿಲ್ಲ. ಆದರೆ ಶೀಘ್ರದಲ್ಲೇ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗುತ್ತದೆ ಎನ್ನುವ ನಿರೀಕ್ಷೆಯಿದೆ. ಇದೆಲ್ಲದರ ನಡುವೆ ಚಿತ್ರದ ಪ್ರಮುಖ ಪಾತ್ರದಲ್ಲಿ ಕನ್ನಡ ನಟಿ ನಟಿಸ್ತಾರೆ ಎನ್ನಲಾಗ್ತಿದೆ.

Buzz This Kannada Actress to Play Rajinikanth s Daughter in Jailer-2

ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ 'ಜೈಲರ್' ಸಿನಿಮಾ 600 ಕೋಟಿ ರೂ.ಗೂ ಅಧಿಕ ಗ್ರಾಸ್ ಕಲೆಕ್ಷನ್ ದಾಖಲೆ ಬರೆದಿತ್ತು. ಚಿತ್ರದಲ್ಲಿ ತೆಲುಗು ನಟ ಮೋಹನ್ ಲಾಲ್ ಹಾಗೂ ಕನ್ನಡ ನಟ ಶಿವರಾಜ್‌ಕುಮಾರ್ ಅತಿಥಿ ಪಾತ್ರಗಳಲ್ಲಿ ನಟಿಸಿ ಧೂಳೆಬ್ಬಿಸಿದ್ದರು. ಅದರಲ್ಲೂ ನರಸಿಂಹ ಪಾತ್ರದಲ್ಲಿ ಶಿವಣ್ಣನ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದರು. ಸೆಂಚುರಿ ಸ್ಟಾರ್ ಅಪಿಯರೆನ್ಸ್ ಚಿತ್ರಕ್ಕೆ ದೊಡ್ಡ ಬಲ ತಂದುಕೊಟ್ಟಿತ್ತು.

'ಜೈಲರ್'-2 ಚಿತ್ರದಲ್ಲಿ ಕೂಡ ಶಿವಣ್ಣ, ಮೋಹನ್ ಲಾಲ್ ಪಾತ್ರಗಳು ಇರುತ್ತದೆ ಎನ್ನಲಾಗ್ತಿದೆ. ಇನ್ನು ರಜನಿಕಾಂತ್ ಕೂಡ ಮತ್ತೊಮ್ಮೆ ಮುತ್ತುವೇಲ್ ಪಾಂಡಿಯನ್ ಆಗಿ ನಟಿಸೋಕೆ ಉತ್ಸುಕರಾಗಿದ್ದಾರೆ. ಸದ್ಯ ಲೋಕೇಶ್ ಕನಕರಾಜ್ ನಿರ್ದೇಶನದ 'ಕೂಲಿ' ಚಿತ್ರದಲ್ಲಿ ತಲೈವಾ ನಟಿಸುತ್ತಿದ್ದಾರೆ. ಸನ್‌ ಪಿಕ್ಚರ್ಸ್ ಸಂಸ್ಥೆಯೇ ಈ ಚಿತ್ರವನ್ನು ಪ್ರೇಕ್ಷಕರ ಮುಂದೆ ತರ್ತಿದೆ.

Buzz This Kannada Actress to Play Rajinikanth s Daughter in Jailer-2

'ಕೂಲಿ' ಚಿತ್ರದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ನಟಿಸುತ್ತಿದ್ದಾರೆ. ರಜನಿಕಾಂತ್ ಸಿನಿಮಾಗಳಲ್ಲಿ ಈ ಹಿಂದೆ ಕೂಡ ಕನ್ನಡ ಕಲಾವಿದರಿಗೆ ಅವಕಾಶ ಸಿಕ್ಕಿದೆ. ಇದೀಗ 'ಜೈಲರ್'-2 ಚಿತ್ರದಲ್ಲಿ 'KGF' ಬೆಡಗಿ ಶ್ರೀನಿಧಿ ಶೆಟ್ಟಿ ನಟಿಸುತ್ತಾರೆ ಎಂದು ಗುಲ್ಲಾಗಿದೆ. ಮುತ್ತುವೇಲ್ ಪಾಂಡಿಯನ್ ಮಗಳ ಪಾತ್ರದಲ್ಲಿ ಕರಾವಳಿ ಸುಂದರಿ ನಟಿಸುತ್ತಾರೆ ಎಂದು ಕಾಲಿವುಡ್‌ ಅಂಗಳದಲ್ಲಿ ಚರ್ಚೆ ಆಗುತ್ತಿದೆ.

ಕಳೆದ ವರ್ಷ ಆಗಸ್ಟ್ 10ಕ್ಕೆ 'ಜೈಲರ್' ಸಿನಿಮಾ ರಿಲೀಸ್ ಆಗಿತ್ತು. ಭಾರೀ ನಿರೀಕ್ಷೆ ಇಲ್ಲದೇ ಬಂದಿದ್ದ ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ನಿಧಾನವಾಗಿ ಕೋಟಿ ಕೋಟಿ ಕೊಳ್ಳೆ ಹೊಡೆದಿತ್ತು. ನೆಲ್ಸನ್ ನಿರ್ದೇಶನ, ರಜನಿಕಾಂತ್- ಶಿವಣ್ಣ ನಟನೆ ಹಾಗೂ ಅನಿರುದ್ಧ್ ರವಿಚಂದನ್ ಬಿಜಿಎಂ ಚಿತ್ರಕ್ಕೆ ಬಲ ತುಂಬಿತ್ತು. ಚಿತ್ರದ ಲಾಭದಲ್ಲಿ ನಿರ್ಮಾಪಕರು ರಜನಿಕಾಂತ್, ನೆಲ್ಸನ್, ಅನಿರುದ್ಧ್‌ಗೆ ಉಡುಗೊರೆ, ಪಾಲು ಕೊಟ್ಟಿದ್ದರು.

'KGF' ರೀನಾ ಶ್ರೀನಿಧಿ ಶೆಟ್ಟಿಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಒಂದೊಳ್ಳೆ ಅವಕಾಶಕ್ಕಾಗಿ ಆಕೆ ಕಾಯುತ್ತಿದ್ದಾರೆ. 'KGF' ಸರಣಿ ಬಳಿಕ ತಮಿಳಿನ 'ಕೋಬ್ರಾ', ತೆಲುಗಿನ 'ತೆಲುಸು ಕಾದಾ', 'ಹಿಟ್-2' ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ. ಸುದೀಪ್ ಮುಂದಿನ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಆದರೆ ಆ ಸಿನಿಮಾ ಇನ್ನು ಶುರುವಾಗಿಲ್ಲ.

ಮಾಡೆಲಿಂಗ್ ಕ್ಷೇತ್ರದಲ್ಲಿ ಗುರ್ತಿಸಿಕೊಂಡಿದ್ದ ಶ್ರೀನಿಧಿ ಬಳಿಕ ಚಿತ್ರರಂಗಕ್ಕೆ ಬಂದರು. 2016ರಲ್ಲಿ ಮಿಸ್ ಸುಪ್ರಾನ್ಯಾಷನಲ್ ಸ್ಪರ್ಧೆ ಕಿರೀಟ ಗೆದ್ದು ಗಮನ ಸೆಳೆದಿದ್ದರು. ಬಳಿಕ ಕೂಡ ಸಾಕಷ್ಟು ಸೌಂದರ್ಯ ಸ್ಪರ್ಧೆಗಳಲ್ಲಿ ಮಿಂಚಿದ್ದರು. ಮಂಗಳೂರಿನ ಬಂಟರ ಮನೆಯ ಹುಡುಗಿ ಶ್ರೀನಿಧಿ ಶೆಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿದ್ದಾರೆ.

More from Filmibeat

English summary
Sandalwood actress to play titular role in Rajinikanth starrer Jailer sequel;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X