twitter
    For Quick Alerts
    ALLOW NOTIFICATIONS  
    For Daily Alerts

    CAAಯಿಂದ ಮುಸ್ಲಿಮರಿಗೆ ತೊಂದರೆ ಆಗಲ್ಲ ಎಂದ ಸೂಪರ್ ಸ್ಟಾರ್ ರಜನಿಕಾಂತ್

    |

    ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಈ ನಡುವೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಪೌರತ್ವ ಕಾಯ್ದೆ ಮುಸ್ಲಿಂ ಸಮುದಾಯಕ್ಕೆ ಬೆದರಿಕೆಯಾಗಿ ಪರಿಣಮಿಸದು ಎಂದು ಹೇಳಿದ್ದಾರೆ.

    "ಒಂದು ವೇಳೆ ಮುಸ್ಲಿಂ ಸಮುದಾಯಕ್ಕೆ ತೊಂದರೆ ಆಗಿದ್ದೆ ಆದರೆ ಅವರ ಪರ ಧ್ವನಿ ಎತ್ತುವ ಮೊದಲ ವ್ಯಕ್ತಿ ನಾನಾಗಿರುತ್ತೇನೆ" ಎಂದು ರಜನಿಕಾಂತ್ ಹೇಳಿದ್ದಾರೆ. "ವಿಭಜನೆ ನಂತರ ಮುಸ್ಲಿಮರು ಭಾರತದಲ್ಲಿ ಉಳಿಯಲು ನಿರ್ಧರಿಸಿದರು, ಅವರನ್ನು ಹೇಗೆ ದೇಶದಿಂದ ಕಳುಹಿಸಲಾಗುತ್ತೆ" ಎಂದಿದ್ದಾರೆ.

    ದರ್ಬಾರ್ ಸೋಲು, ರಜನಿ ಮನೆ ಬಾಗಿಲು ತಟ್ಟಲು ಮುಂದಾದ ವಿತರಕರುದರ್ಬಾರ್ ಸೋಲು, ರಜನಿ ಮನೆ ಬಾಗಿಲು ತಟ್ಟಲು ಮುಂದಾದ ವಿತರಕರು

    ಇನ್ನು ಈ ಬಗ್ಗೆ ಮಾತನಾಡಿದ ಸೂಪರ್ ಸ್ಟಾರ್ ರಾಷ್ಟ್ರೀಯ ಜನಸಂಖ್ಯೆ ನೋಂದಣಿ(NPR) ಅಗತ್ಯವಿದೆ ಎಂದು ಹೇಳಿದ್ದಾರೆ. ಸಿಎಎ ಸಂಬಂಧಿಸಿದಂತೆ ಭಾರತೀಯ ಜನರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಸಿಎಎ ವಿರುದ್ಧ ಜನರನ್ನು ಪ್ರಚೋದಿಸುತ್ತಿವೆ" ಎಂದರು.

    CAA Is No Threat To Muslims Said Super Star Rajinikanth

    ಈ ಮೊದಲು ಅಂದರೆ ಡಿಸೆಂಬರ್ ನಲ್ಲಿ ಈ ಬಗ್ಗೆ ಮಾತನಾಡಿದ್ದ ರಜನಿಕಾಂತ್ "ಹಿಂಸಾಚಾರ ಹಾಗೂ ದಂಗೆಯಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿರಬೇಕೆಂದು ದೇಶದ ಜನತೆಯಲ್ಲಿ ವಿನಂತಿಸುವೆ. ರಾಷ್ಟ್ರೀಯ ಭದ್ರತೆ ಹಾಗೂ ಕಲ್ಯಾಣಕ್ಕೆ ನಮ್ಮ ಮನಸ್ಸು ಜಾಗೃತವಾಗಿರಬೇಕು" ಎಂದು ಟ್ವೀಟ್ ಮಾಡಿದ್ದರು. ಆ ನಂತರ ಈಗ ಮತ್ತೆ ಪ್ರತಿಕ್ರಿಯೆ ನೀಡಿದ್ದಾರೆ.

    English summary
    Super star Rajinikanth said that "CAA is no threat to Muslims. If they face trouble, I will be the first person to raise voice for them.
    Wednesday, February 5, 2020, 13:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X