ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯ ಬಾಲ್ಯದ ಫೋಟೊ ವೈರಲ್; ಯಾರೀಕೆ?
ಬಹುಭಾಷಾ ನಟಿ ನಯನತಾರಾ ಕನ್ನಡ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ. ಇತ್ತೀಚೆಗೆ ಬಾಲಿವುಡ್ ಪ್ರವೇಶಿಸಿ ಗೆದ್ದಿದ್ದಾರೆ. ಮದುವೆ ಬಳಿಕವೂ ಸಿನಿಮಾಗಳಲ್ಲಿ ನಯನ್ ಬ್ಯುಸಿಯಾಗಿದ್ದಾರೆ. ಸಾರೋಗಸಿ ಪದ್ಧತಿಯಲ್ಲಿ ನಯನತಾರಾ- ವಿಘ್ನೇಶ್ ಶಿವನ್ ಅವಳಿ ಮಕ್ಕಳನ್ನು ಪಡೆದಿದ್ದಾರೆ.
ಅವಳಿ ಮಕ್ಕಳ ಲಾಲನೆ ಪಾಲನೆಯ ಜೊತೆ ಜೊತೆಗೆ ವಿಕ್ಕಿ-ನಯನ್ ದಂಪತಿ ತಮ್ಮ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ನಯನತಾರ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಿಂದ ದೂರವೇ ಉಳಿದಿದ್ದ ನಯನ್ ಕಲೆದ ವರ್ಷವಷ್ಟೇ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದರು. ಈಗಾಗಲೇ ಆಕೆಯ ಇನ್‌ಸ್ಟಾ ಖಾತೆಗೆ 80 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

20 ವರ್ಷಗಳಿಂದ ನಯನತಾರ ನಾಯಕಿಯಾಗಿ ಸಿನಿಮಾಗಳಲ್ಲಿ ನಟಿಸುತ್ತಾ ಬರುತ್ತಿದ್ದಾರೆ. ಇವತ್ತಿಗೂ ಆಕೆಯ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ತೆಲುಗು, ತಮಿಳಿನ ಹಲವು ಸ್ಟಾರ್ ನಟರ ಜೊತೆಗೆ ತೆರೆ ಹಂಚಿಕೊಂಡು ಗೆದ್ದಿದ್ದಾರೆ. ರಜನಿಕಾಂತ್, ಚಿರಂಜೀವಿ, ವಿಜಯ್ ಅಜಿತ್, ಪ್ರಭಾಸ್ ಸೇರಿದಂತೆ ಸೂಪರ್ ಸ್ಟಾರ್‌ಗಳ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಒಂದ್ಕಾಲದಲ್ಲಿ ಸಖತ್ ಬೋಲ್ಡ್ ಆಗಿಯೂ ನಟಿಸಿ ಗೆದ್ದಿದ್ದ ನಯನ್ ಸದ್ಯ ಪವರ್‌ಫುಲ್ ರೋಲ್‌ಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ.
ಕಳೆದ ವರ್ಷ 'ಜವಾನ್' ಸಿನಿಮಾ ಮೂಲಕ ನಯನತಾರ ಬಾಲಿವುಡ್ ಪ್ರವೇಶಿಸಿದ್ದರು. ಅಟ್ಲಿ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ಕಿಂಗ್ ಖಾನ್ ಜೋಡಿಯಾಗಿ ಮಿಂಚಿದ್ದರು. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಲೇಡಿ ಸೂಪರ್ ಸ್ಟಾರ್ ಸಖತ್ ಆಕ್ಟೀವ್ ಆಗಿದ್ದಾರೆ. ಹೊಸ ಹೊಸ ಫೋಟೊಶೂಟ್ ಜೊತೆಗೆ ಪತಿ ಹಾಗೂ ಮಕ್ಕಳ ಜೊತೆಗಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೇ ಮೊದಲ ಬಾರಿಗೆ ನಯನ್ ತಮ್ಮ ಬಾಲ್ಯದ ಫೋಟೊ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ನಯನತಾರ ತಂದೆ ಕುರಿಯನ್ ಕೋಡಿಯಾಟ್ಟು ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ತಂದೆಗೆ ಶುಭಾಶಯ ಕೋರಿ ನಯನತಾರ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ತಂದೆ ಜೊತೆಗೆ ಬಾಲ್ಯದಲ್ಲಿ ಕ್ಲಿಲ್ಲಿಸಿದ ಫೋಟೊವನ್ನು ಶೇರ್ ಮಾಡಿದ್ದರು. ಸದ್ಯ ಆ ಫೋಟೋ ಸಖತ್ ವೈರಲ್ ಆಗುತ್ತಿದೆ. ತಂದೆ ಕೈಯಲ್ಲಿ ಒಂದೂವರೆ ವರ್ಷ ವಯಸ್ಸಿನ ನಯನತಾರರನ್ನು ನೋಡಬಹುದು. ಅಭಿಮಾನಿಗಳು ಪುಟಾಣಿ ನಯನ್ ನೋಡಿ ಸಖತ್ ಕ್ಯೂಟ್ ಎನ್ನುತ್ತಿದ್ದಾರೆ.

ಫೋಟೋ ಶೇರ್ ಮಾಡಿ "ನನ್ನ ಹೀರೊಗೆ ಹುಟ್ಟುಹಬ್ಬದ ಶುಭಾಶಯಗಳು.. ಮೈ ಫಾರ್‌ಎವರ್ ಲವ್.. ಐ ಲವ್ ಯುವ ಅಚ್ಚಾ(ಅಪ್ಪ) ಎಂದು ನಯನ್ ಬರೆದುಕೊಂಡಿದ್ದಾರೆ. 'ಹ್ಯಾಪಿ ಬರ್ತ್‌ಡೇ ಡ್ಯಾಡ್, ಮಿಸ್ಟರ್ ಕುರಿಯನ್' ಎನ್ನುವ ಕ್ಯಾಪ್ಷನ್ ಕೂಡ ಕೊಟ್ಟಿದ್ದಾರೆ.
ಬಳಿಕ ತಂದೆ ಬಗ್ಗೆ "ನಾನು, ನಮ್ಮ ತಾಯಿ ಹಾಗೂ ತಂದೆ ಒಟ್ಟಿಗೆ ಕೂತು ಮಾತನಾಡುವುದು ಬಹಳ ಕಮ್ಮಿ. ನಾನು ಕುಟುಂಬ ಹಾಗೂ ಕೆಲಸ ಎರಡನ್ನೂ ಪ್ರತ್ಯೇಕವಾಗಿ ಇಡಲು ಪ್ರಯತ್ನಿಸುತ್ತೇನೆ. ಕೆಲಸದಲ್ಲಿ ರಾಜಿಯಾಗದೇ ಇರುವುದು, ಸಮಯ ಪಾಲನೆ, ಕ್ರಮಶಿಕ್ಷಣ, ಇದಲ್ಲವೂ ನಮ್ಮ ತಂದೆ ಕುರಿಯನ್ ಅವರಿಂದಲೇ ಬಂದಿದ್ದು. ನನಗೆ ಬುದ್ದಿ ಬಂದ ದಿನದಿಂದಲೂ ನಮ್ಮ ತಂದೆಯನ್ನು ಹೀರೊ ಆಗಿ ನೋಡಿದ್ದೇನೆ. ನಮ್ಮ ತಂದೆಯಿಂದ ಬಹಳ ಕಲಿತಿದ್ದೇನೆ. ಕಷ್ಟದ ಸಮಯದಲ್ಲೇ ಗಟ್ಟಿಯಾಗಿ ನಿಲ್ಲುವುದನ್ನು ರೂಢಿಸಿಕೊಂಡಿದ್ದೇನೆ" ಎಂದಿದ್ದಾರೆ.
ಇನ್ನು ವಿಘ್ನೇಶ್ ಶಿವನ್ ಕೂಡ ಮಾವನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮಕ್ಕಳಾದ ಉಯಿರ್ ಹಾಗೂ ಉಳಗ್ ಹೆಸರಿರುವ ಕೇಕ್ ಫೋಟೊ ಹಂಚಿಕೊಂಡು "ಹ್ಯಾಪಿ ಬರ್ತ್‌ಡೇ ಅಚ್ಚಾ ಮಿ. ಕುರಿಯನ್" ಎಂದು ಬರೆದುಕೊಂಡಿದ್ದಾರೆ. ಸದ್ಯ ವಿಕ್ಕಿ, ನಯನ್ ದಂಪತಿ ಕೇರಳದಲ್ಲಿದ್ದಾರೆ. ಅತ್ತೆ ಬಗೆ ಬಗೆಯ ಭಕ್ಷ್ಯಗಳನ್ನು ಮಾಡಿಕೊಟ್ಟಿದ್ದು ಅದನ್ನು ವಿಘ್ನೇಶ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ನಯನತಾರ ಕನ್ನಡದ 'ಸೂಪರ್' ಚಿತ್ರದಲ್ಲಿ ಉಪೇಂದ್ರ ಜೋಡಿಯಾಗಿ ನಟಿಸಿದ್ದರು. ಸದ್ಯ ಟೆಸ್ಟ್ ಹಾಗೂ 'ಮಣ್ಣನ್‌ಗಟ್ಟಿ' ಎನ್ನುವ ಸಿನಿಮಾಗಳಲ್ಲಿ ಲೇಡಿ ಸೂಪರ್ ಸ್ಟಾರ್ ಬಣ್ಣ ಹಚ್ಚಿದ್ದಾರೆ.


Click it and Unblock the Notifications











