Cannes 2023: ನಟರಿಗೆ ಸಮನಾಗಿ ನಟಿಯರಿಗೆ ಸಂಭಾವನೆ ಸಿಗುವ ದಿನ ಯಾವಾಗ ಬರುತ್ತೆ ಎಂದು ಕಾಯುತ್ತಿದ್ಧೇನೆ
ಫ್ರಾನ್ಸ್‌ನಲ್ಲಿ ಅದ್ಧೂರಿಯಾಗಿ ಕಾನ್ ಫಿಲ್ಮ್ ಫೆಸ್ಟಿವಲ್ ನಡೀತಿದೆ. ಬಾಲಿವುಡ್ ಬೆಡಗಿಯರು ಮಾತ್ರವಲ್ಲದೇ ದಕ್ಷಿಣದ ನಟಿಯರು ಕೂಡ ಈ ಬಾರಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿ ರಂಗೇರಿಸಿದ್ದಾರೆ. ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಕೂಡ 76ನೇ ಕಾನ್ ಸಿನಿಉತ್ಸವದಲ್ಲಿ ಭಾಗಿ ಆಗಿದ್ದರು. ಸ್ಟೈಲಿಶ್ ಲುಕ್‌ನಲ್ಲಿ ಪಾಪರಾಜಿಗಳತ್ತ ಕೈ ಬೀಸುತ್ತಾ ಪೋಸ್ ಕೊಟ್ಟಿದ್ದಾರೆ.
ಎರಡು ಬೇರೆ ಬೇರೆ ಲುಕ್‌ನಲ್ಲಿ ಶ್ರುತಿ ಹಾಸನ್ ಕಾನ್ ಫೆಸ್ಟಿವಲ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಡಿಸೈನರ್ ವೈಶಾಲಿ ಡಿಸೈನ್ ಮಾಡಿದ್ದ ಕಾಸ್ಟ್ಯೂಮ್‌ನಲ್ಲಿ ಶ್ರುತಿ ಮಿಂಚಿದ್ಧಾರೆ. ಕಪ್ಪು ಬಣ್ಣದ ಕೋಆರ್ಡ್ ಸೆಟ್ ಡ್ರೆಸ್‌ನಲ್ಲಿ ಶ್ರುತಿ ಗಮನ ಸೆಳೆದಿದ್ದಾರೆ. ಮುಂಭಾಗದಲ್ಲಿ ಕಪ್ಪು ಹಾಗೂ ನೀಲಿ ಮಿಶ್ರಿತ ಬಣ್ಣದ ಹೂವು ಇರುವಂತಹ ಡಿಸೈನ್ ಡ್ರೆಸ್ ಶ್ರುತಿ ಅಂದ ಹೆಚ್ಚಿಸಿದೆ. ಇನ್ನು ಕೆಂಪು ಬಣ್ಣದ ಲಿಪ್‌ಸ್ಟಿಕ್, ಹೈ ಹೀಲ್ಡ್ ಚಪ್ಪಲಿ ತೊಟ್ಟು ಕಮಾಲ್ ಮಾಡಿದ್ದಾರೆ.

ಬಾಲಿವುಡ್ ಸಿನಿಮಾಗಳಲ್ಲೂ ಮಿಂಚಿರುವ ಶ್ರುತಿ ಸದ್ಯಕ್ಕೆ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಬಾಯ್‌ಫ್ರೆಂಡ್ ಜೊತೆ ಮುಂಬೈನಲ್ಲಿ ಸೆಟ್ಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಬೆಡಗಿ ಇತ್ತೀಚಿಗೆ ತೆಲುಗು ಎರಡು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸಂಕ್ರಾಂತಿ ಸಂಭ್ರಮದಲ್ಲಿ ಬಿಡುಗಡೆಯಾದ 'ವಾಲ್ತೇರು ವೀರಯ್ಯ' ಹಾಗೂ 'ವೀರ ಸಿಂಹರೆಡ್ಡಿ' ಸಿನಿಮಾಗಳಲ್ಲಿ ಶ್ರುತಿ ನಟಿಸಿದ್ದರು. ಟಾಲಿವುಡ್ ಸೀನಿಯರ್ ನಟರಾದ ಚಿರಂಜೀವಿ ಹಾಗೂ ಬಾಲಕೃಷ್ಣ ಜೊತೆ ಮಿಂಚಿದ್ದರು.
ಸಂಭಾವನೆ ತಾರತಮ್ಯದ ಬಗ್ಗೆ ಮಾತು
76ನೇ ಕಾನ್ ಫಿಲ್ಮ್ ಫೆಸ್ಟಿನಲ್ ಭಾಗವಾಹಿ ರೌಂಡ್ ಟೇಬಲ್ ಚರ್ಚೆಯಲ್ಲಿ ಶ್ರುತಿ ಹಾಸನ್ ಭಾಗಿ ಆಗಿದ್ದಾರೆ. ಈ ವೇಳೆ ಭಾರತದ ಸಿನಿಮಾಗಳಲ್ಲಿ ನಟರಿಗೆ ಹೋಲಿಸಿದರೆ ನಟಿಯರಿಗೆ ಸಂಭಾವನೆ ಕಮ್ಮಿ ಅಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಕಮಲ್ ಹಾಸನ್ ಪುತ್ರಿ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಜೊತೆಗೆ ತಮ್ಮ ಅಭಿಪ್ರಾಯವನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದಲ್ಲಿ ಬದಲಾವಣೆ ಆಗ್ತಿದೆ
"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ವ್ಯತ್ಯಾಸ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲ ಕಡೆಗಳಲ್ಲೂ ಇದೆ. ನಾವೆಲ್ಲರೂ ಲಿಂಗ ಸಮಾನತೆಯ ಬಗ್ಗೆ ಸಾಕಷ್ಟು ಕನಸು ಕಾಣುತ್ತಿದ್ದೇವೆ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಮಹಿಳೆಯರ ಸುರಕ್ಷತೆಯಂತಹ ಸಮಸ್ಯೆಗಳನ್ನೂ ಸಹ ಪರಿಹರಿಸಬೇಕಾಗಿದೆ. ಆದರೆ ಈ ಬದಲಾವಣೆ ಚಿತ್ರರಂಗದಲ್ಲಿ ಈಗಷ್ಟೇ ಪ್ರಾರಂಭವಾಗಿದೆ. ಒಂದು ಕಾಲದಲ್ಲಿ ನಾನು ಕೂಡ ಕಡಿಮೆ ಸಂಭಾವನೆ ಪಡೆದು ನಟಿಸಿದ್ದು ಇದೆ. ಆದರೆ ಎಂದಿಗೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಶ್ರುತಿ ಹೇಳಿದ್ದಾರೆ ತಿಳಿಸಿದರು.
ನಟಿಯರು ಒಗ್ಗಟ್ಟಾಗಿ ಇರಬೇಕು
ಶ್ರುತಿಗೆ ಎಂದಾದರೂ ಈ ತಾರತಮ್ಯ ಅರಿವಿಗೆ ಬಂದಿದ್ಯಾ? ಎನ್ನುವ ಪ್ರಶ್ನೆಗೆ "ನನಗೂ ಕೂಡ ಕಡಿಮೆ ಸಂಭಾವನೆ ಬರುತ್ತದೆ. ಆದರೆ ಮೊದಲಿಗೆ ಹೋಲಿಸಿದರೆ ಪರವಾಗಿಲ್ಲ, ಆದರೂ ಸರಿಯಾದ ಮಟ್ಟದಲ್ಲಿ ಸಿಗುತ್ತಿದೆ ಎನ್ನಲು ಸಾಧ್ಯವಿಲ್ಲ. ಆದರೆ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ, ಇದರಲ್ಲಿ ನನಗೆ ಖುಷಿಯಿದೆ. ಈ ವಿಷಯದಲ್ಲಿ ನಟಿಯರೆಲ್ಲಾ ಒಗ್ಗಟ್ಟಾಗಿ ಒಟ್ಟಿಗೆ ಇರಬೇಕು ಎಂದು ಶ್ರುತಿ ಹೇಳಿರುವ ಹೇಳಿಕೆ ವೈರಲ್ ಆಗ್ತಿದೆ.

ಕಾಸ್ಟ್ಯೂಮ್ ಬಗ್ಗೆ ಚಕಾರ
'ವಾಲ್ತೇರು ವೀರಯ್ಯ' ಚಿತ್ರದ 'ಶ್ರೀದೇವಿ ಚಿರು' ಹಾಡು ಹಿಟ್ ಆಗಿತ್ತು. ಸ್ನೋ ಫಾಲ್ ಇರುವಲ್ಲಿ ಹಾಡಿನ ಚಿತ್ರೀಕರಣ ನಡೆದಿತ್ತು. ಹಾಡಿನಲ್ಲಿ ಶ್ರುತಿ ಹಾಸನ್ ಸೀರೆಯುಟ್ಟು ಮಿಂಚಿದ್ರೆ, ಚಿರಂಜೀವಿ ಜಾಕೆಟ್ ತೊಟ್ಟು ಕಾಣಿಸಿಕೊಂಡಿದ್ದರು. ಈ ಹಾಡಿನ ಬಗ್ಗೆ ಶ್ರುತಿ ಚಕಾರ ಎತ್ತಿದ್ದರು. "ನನಗೆ ಸ್ನೋದಲ್ಲಿ ಡ್ಯಾನ್ಸ್ ಮಾಡೋಕೆ ಇಷ್ಟವಿಲ್ಲ. ಹಿಮವಿದ್ದಲ್ಲಿ ಡ್ಯಾನ್ಸ್ ಮಾಡೋದು ಕಷ್ಟ. ಹೀರೊಗಳಾದರೆ ಜಾಕೆಟ್ ಧರಿಸಬಹುದು. ಅದೇ ಹೀರೊಯಿನ್ ಆದರೆ, ಸೀರೆ, ರವಿಕೆ ಬಿಟ್ಟು ಬೇರೆ ಉಡುಪು ತೊಡುವಂತೆಯೇ ಇಲ್ಲ. ಇಂತಹ ಹಾಡುಗಳನ್ನು ಶೂಟ್ ಮಾಡುವುದನ್ನು ನಿಲ್ಲಿಸಿ" ಎಂದು ವ್ಯಂಗ್ಯವಾಡಿದ್ದರು.


Click it and Unblock the Notifications











