'ಕ್ಯಾಪ್ಟನ್ ಮಿಲ್ಲರ್' ಫಸ್ಟ್ ಲುಕ್ ಮೀರಿಸಿದ ಧನುಷ್ ಹೊಸ ಅವತಾರ: ಮೊಟ್ಟೆ ಬಾಸ್ ಲುಕ್ ವೈರಲ್
ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿ ಸಖತ್ ಸದ್ದು ಮಾಡಿತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದು ಸಹಜವಾಗಿಯೇ ಕುತೂಹಲ ಮೂಡಿದೆ. ಆದರೆ 'ಕ್ಯಾಪ್ಟನ್ ಮಿಲ್ಲರ್' ಫಸ್ಟ್ ಲುಕ್‌ಗಿಂತ ಈಗ ಮೊಟ್ಟೈ ಬಾಸ್ ಧನುಷ್ ಹೊಸ ಲುಕ್ ವೈರಲ್ ಆಗ್ತಿದೆ.
ಇತ್ತೀಚೆಗೆ ನಟ ಧನುಷ್ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಈ ವೇಳೆ ದೇವರಿಗೆ ಮುಡಿ ಕೊಟ್ಟು ಬೋಳು ತಲೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇತ್ತೀಚಿನ ವರ್ಷಗಳಲ್ಲಿ ಉದ್ದನೆಯ ಗಡ್ಡ, ಮೀಸೆಯಲ್ಲಿ ಹೆಚ್ಚು ಧನುಷ್ ಕಾಣಿಸಿಕೊಳ್ಳುತ್ತಿದ್ದರು. ಸಿನಿಮಾಗಳಲ್ಲೂ ಅದೇ ರೀತಿ ರಗಡ್ ಲುಕ್‌ನಲ್ಲಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದೀಗ ಏಕಾಏಕಿ ಲುಕ್ ಬದಲಿಸಿದ್ದಾರೆ. ತಲೆ ಬೋಳಿಸಿಕೊಂಡು ಮೀಸೆ ಟ್ರಿಮ್ ಮಾಡಿ ಗಮನ ಸೆಳೆಯುತ್ತಿದ್ದಾರೆ.

ಮತ್ತೊಂದು ಕಡೆ ತಮಿಳು ಚಿತ್ರರಂಗದಿಂದ ಧನುಷ್‌ರನ್ನು ಬ್ಯಾನ್ ಮಾಡ್ತಾರೆ ಎನ್ನುವ ಚರ್ಚೆ ಕೂಡ ನಡೀತಿದೆ. ಇನ್ನು ಕ್ಯಾಪ್ಟನ್ ಮಿಲ್ಲರ್ ಜೊತೆಗೆ ಬಾಲಿವುಡ್‌ನ 'ತೆರೆ ಇಷ್ಕ್ ಮೇನ್' ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಒಂದೆರಡು ಹಿಂದಿ ಸಿನಿಮಾಗಳಲ್ಲಿ ಕಾಲಿವುಡ್ ನಟ ಅಭಿನಯಿಸಿ ಗೆದ್ದಿದ್ದಾರೆ.

ಧನುಷ್ ಹೊಸ ಲುಕ್
ಈ ವರ್ಷ 'ವಾತಿ' ಸಿನಿಮಾ ಮೂಲಕ ದರ್ಶನ್ ಶುಭಾರಂಭ ಮಾಡಿದ್ದರು. ತಮಿಳು ಹಾಗೂ ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗಿ ಸದ್ದು ಮಾಡಿತ್ತು. ಆ ಚಿತ್ರದಲ್ಲಿ ಕ್ಲೀನ್ ಶೇವ್‌ನಲ್ಲಿ ದರ್ಶನ ಕೊಟ್ಟಿದ್ದ ಧನುಷ್ ನಂತರ ಉದ್ದ ಗಡ್ಡ, ಕೂದಲು ಬಿಟ್ಟು ಸ್ವಾಮೀಜಿ ರೀತಿ ಆಗಿಬಿಟ್ಟಿದ್ದರು. 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಪಾತ್ರಕ್ಕಾಗಿ ಈ ರೀತಿ ಮಾಡಿದ್ದರು ಎನ್ನುವುದು ಈಗ ಗೊತ್ತಾಗ್ತಿದೆ. ಇದೀಗ ಆ ಸಿನಿಮಾ ಶೂಟಿಂಗ್ ಮುಗಿಯುತ್ತಾ ಬಂದಿದ್ದು ಹೊಸ ಅವತಾರ ತಾಳಿದ್ದಾರೆ.
ಹರಕೆ ತೀರಿಸಿದ ಧನುಷ್
ಸೋಮವಾರ ಬೆಳ್ಳಂ ಬೆಳಗ್ಗೆ ನಟ ಧನುಷ್ ತಿರುಪತಿಗೆ ಭೇಟಿ ನೀಡಿದ್ದರು. ಸ್ವಾಮಿಗೆ ನೈವೇದ್ಯ ವಿರಾಮದ ವೇಳೆ ಆಲಯ ಪ್ರವೇಶಿಸಿ ಸ್ವಾಮಿ ಸೇವೆಯಲ್ಲಿ ಭಾಗಿ ಆಗಿ ಹರಕೆ ತೀರಿಸಿದ್ದಾರೆ. ನಂತರ ವೇದ ಪಂಡಿತರ ಆಶೀರ್ವಾದ ಪಡೆದಿದ್ದಾರೆ. ಟಿಡಿಪಿ ಅಧಿಕಾರಿಗಳು ನಟನಿಗೆ ಪಂಚೆ, ಶಲ್ಯ ಕೊಟ್ಟು ಸತ್ಕರಿಸಿ ತೀರ್ಥ, ಪ್ರಸಾದ ನೀಡಿದ್ದಾರೆ. ಅಷ್ಟರಲ್ಲಾಗಲೇ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಲು, ಫೋಟೊ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಆದರೆ ಧನುಷ್ ಬಾಡಿಗಾರ್ಡ್ಸ್ ಎಲ್ಲರನ್ನು ನಿಯಂತ್ರಿಸಿದ್ದಾರೆ.
ಕುತೂಹಲ ಕೆರಳಿಸಿದ ಕ್ಯಾಪ್ಟನ್ ಮಿಲ್ಲರ್
ಅರುಣ್ ಮತ್ತೇಶ್ವರನ್ ನಿರ್ದೇಶನದ 'ಕ್ಯಾಪ್ಟನ್ ಮಿಲ್ಲರ್' ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಚಿತ್ರದಲ್ಲಿ ಪ್ರಿಯಾಂಕ ಅರುಲ್ ಮೋಹನ್ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡ ನಟ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸಿದ್ದಾರ್ಥ ನುನಿ ಛಾಯಾಗ್ರಹಣ, ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಚಿತ್ರಕ್ಕಿದೆ. ಇದು ಧನುಷ್ ನಟನೆಯ 47ನೇ ಸಿನಿಮಾ. ಐತಿಹಾಸಿಕ ಕಥಾಹಂದರ ಚಿತ್ರದಲ್ಲಿದೆ.
'ರಾಯನ್'ಗಾಗಿ ಧನುಷ್ ಹೊಸ ಲುಕ್
ಧನುಷ್ ತಮ್ಮ 50ನೇ ಚಿತ್ರವನ್ನು ತಾವೇ ನಿರ್ದೇಶನ ಮಾಡಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ 'ರಾಯನ್' ಎನ್ನುವ ಟೈಟಲ್ ಪರಿಶೀಲನೆಯಲ್ಲಿದೆ. ಇದೇ ಚಿತ್ರಕ್ಕಾಗಿ ಧನುಷ್ ಈಗ ತಲೆ ಬೋಳಿಸಿಕೊಂಡು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ. ಇತ್ತೀಚೆಗೆ ಪತ್ನಿಗೆ ಡಿವೋರ್ಸ್ ನೀಡಿ ಧನುಷ್ ದೂರಾಗಿದ್ದಾರೆ. 2004ರಲ್ಲಿ ರಜನಿಕಾಂತ್ ಪುತ್ರಿ ಐಶ್ವರ್ಯ ಕೈ ಹಿಡಿದಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ.


Click it and Unblock the Notifications











