ಧನುಷ್ ಕರೆದರೂ ಬಂದು ಮಲಗಲ್ವಾ ? ಕನ್ನಡದ ನಟಿಯನ್ನ ಮಂಚಕ್ಕೆ ಕರೆದ ರಜನಿ ಮಾಜಿ ಅಳಿಯನ ಮ್ಯಾನೇಜರ್‌

ಪುರುಷ ಪ್ರಧಾನ ಚಿತ್ರರಂಗದಲ್ಲಿ ಅನೇಕ ಹೆಣ್ಣು ಮಕ್ಕಳು ನಾನಾ ರೀತಿಯಲ್ಲಿ ನರಳಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ.. ಬಣ್ಣದ ಬಣ್ಣದ ಈ ಪ್ರಪಂಚದಲ್ಲಿ ನಡೆದ ಬಗೆ ಬಗೆಯ ಲೈಂ*ಗಿಕ ಪ್ರಕರಣ, ಕಿರುಕುಳ, ದೌರ್ಜನ್ಯ ಕುರಿತ ಸುದ್ದಿಗಳನ್ನೂ ನಾವೆಲ್ಲರೂ ಕೇಳುತ್ತಲೇ ಇರುತ್ತೇವೆ. ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಆದರೆ ಹೀಗೆ ನಡೆದ ಸಾಕಷ್ಟು ಲೈಂ*ಗಿಕ ಪ್ರಕರಣಗಳು ಹೇಳ ಹೆಸರಿಲ್ಲದೇ ಕಾಣದಂತಾಗುತ್ತವೆ.

ಇನ್ನೂ ಕೆಲವೊಮ್ಮೆ ಪ್ರಜ್ಞಾವಂತ ನಾಯಕಿಯರು ತಮ್ಮ ಛಲದಿಂದ ತೆರೆಮರೆಯ ಕಳ್ಳಾಟ ಬಹಿರಂಗ ಪಡಿಸಿದ್ದಾರೆ. ಕಾಮುಕರ ಮುಖವಾಡ ಕಳಚಿದ್ದಾರೆ. ಒಂದರ್ಥದಲ್ಲಿ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎಂಬುದು ಬಟ್ಟೆ ಬದಲಿಸಿದಷ್ಟೇ ಸಾಮಾನ್ಯವಾಗಿದೆ. ಪ್ರತಿಯೊಬ್ಬ ನಟಿಮಣಿಯರೂ ಒಂದಿಲ್ಲೊಂದು ಸಂದರ್ಭಗಳಲ್ಲಿ ಇಂತಹ ಸನ್ನಿವೇಶಗಳಲ್ಲಿ ನಲುಗಿದವರೇ ಆಗಿರುತ್ತಾರೆ.

Casting Couch Storm Hits Kollywood TV Actress Manya Anand Accuses Dhanush s Manager Shreyas

ಇನ್ನು ಮಲಯಾಳಂ ಚಿತ್ರರಂಗದಲ್ಲಿನ ಕಾ*ಮಕಾಂಡದ ಕುರಿತು ಕಳೆದ ವರ್ಷ ಹೇಮಾ ಆಯೋಗ ವರದಿ ನೀಡಿದ ಬೆನ್ನಲ್ಲಿ ಇನ್ನೊಮ್ಮೆ ಈ ಪಾತ್ರಕ್ಕಾಗಿ ಪಲ್ಲಂಗದ ಬಿರುಗಾಳಿ ಎದ್ದಿದೆ. ಕೇವಲ ಮಲಯಾಳಂನಲ್ಲಿ ಅಷ್ಟೇ ಅಲ್ಲ ಭಾರತದ ಬೇರೆ ಬೇರೆ ಭಾ‍ಷೆಯಲ್ಲಿ ಕೂಡ ಕಾ*ಮುಕರು ತುಂಬಿ ತುಳುಕುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ಇದಕ್ಕೆ ಪೂರಕವಾಗಿ ಬೇರೆ ಬೇರೆ ಭಾಷೆಯಲ್ಲಿನ ನಟಿಯರು ತಮಗಾದ ಕಹಿ ಅನುಭವ ಹಂಚಿಕೊಂಡಿದ್ದಾರೆ. ಬಿಕ್ಕಿದ್ದಾರೆ. ಪಾತ್ರದ ಹೆಸರಿನಲ್ಲಿ ತಮ್ಮನ್ನು ಮಂಚಕ್ಕೆ ಕರೆದ ವ್ಯಕ್ತಿಗಳ ಜನ್ಮವನ್ನೂ ಜಾಲಾಡಿದ್ದಾರೆ. ಈ ಸಾಲಿಗೆ ಈಗ ಮಾನ್ಯ ಆನಂದ್ ಸೇರಿಕೊಂಡಿದ್ದಾರೆ.

ಹೌದು, ಮಾನ್ಯ ಆನಂದ್.. ಹಾಸನದ ಚೆಲುವೆ. ಬೆಂಗಳೂರಿನಲ್ಲಿ ಎಂಕಾಮ್ ಪದವಿಯನ್ನು ಪಡೆದ ಮಾನ್ಯ ತೆಲುಗಿನ ''ಡಿ'' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಗಮನ ಸೆಳೆದರು. ಆ ನಂತರ ಕನ್ನಡದಲ್ಲಿ ''ತಿರುಬೋಕಿಗಳು'' ಮತ್ತು ''ರಾಜಾ ರಾಣಿ ರೋರರ್ ರಾಕೆಟ್'' ಚಿತ್ರದಲ್ಲಿ ನಾಯಕಿ ಪಾತ್ರವನ್ನು ನಿರ್ವಹಿಸಿದ ಮಾನ್ಯ ಸದ್ಯ ತೆಲುಗು ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ. ''ವನತೈ ಪೋಲಾ'' ಎಂಬ ಧಾರಾವಾಹಿಯ ಮೂಲಕ ಚೆನ್ನೈನೆಲ್ಲೆಡೆ ಮನೆ ಮಾತಾಗಿದ್ದಾರೆ. ತುಳಸಿ ಎಂದೇ ಜನಪ್ರಿಯರಾಗಿದ್ದಾರೆ.

ಇಂಥಾ ಮಾನ್ಯ ಆನಂದ್ ಅವರ ಮೇಲೆ ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮಾಜಿ ಅಳಿಯ ಧನುಷ್ ಅವರ ಮ್ಯಾನೇಜರ್ ಶ್ರೇಯಸ್ ಕಣ್ಣು ಹಾಕಿದ್ದಾನೆ. ಪಾತ್ರಕ್ಕಾಗಿ ಪಲ್ಲಂಗ ಹತ್ತುವಂತೆ ಹೇಳಿದ್ದಾನೆ. ಖುದ್ದು ಮಾನ್ಯಾ ಆನಂದ್ ಈ ಮಾತುಗಳನ್ನು ಸದ್ಯ ಹೇಳಿದ್ದು ತಮಿಳು ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಯಾಗಿದೆ.

Casting Couch Storm Hits Kollywood TV Actress Manya Anand Accuses Dhanush s Manager Shreyas

ಈ ಕುರಿತು ''ಸಿನಿಉಳಗಂ'' ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮಾನ್ಯಾ ಆನಂದ್, ನನಗೆ ಧನುಷ್ ಅವರ ಮ್ಯಾನೇಜರ್ ಶ್ರೇಯಸ್ ಚಿತ್ರವೊಂದಕ್ಕೆ ಸಂಪರ್ಕಿಸಿದ್ದರು ಎಂದು ಹೇಳಿದ್ದಾರೆ. ಕಥೆ ಇದೆ, ಈ ಚಿತ್ರದಲ್ಲಿ ನೀವು ಅಭಿನಯಿಸಬೇಕು ಎಂದು ನನಗೆ ಮೊದಲು ಅವರು ಹೇಳಿದರು. ಆದರೆ ಆ ನಂತರ ಹೀರೋ ಜೊತೆ ಕಮಿಟ್ಮೆಂಟ್ ಮಾಡಿಕೊಳ್ಳಬೇಕು ಎಂದು ಹೇಳಿದರು ಎಂದಿರುವ ಮಾನ್ಯಾ ಆಗ ನಾನು
ಕಮಿಟ್‌ಮೆಂಟ್ ಅಂದ್ರೆ ಏನು? ನಾನು ಯಾಕೆ ಅವರಿಗೆ ಕಮಿಟ್‌ಮೆಂಟ್ ನೀಡಬೇಕು ? ಎಂದು ಪ್ರಶ್ನೆ ಮಾಡಿದ್ದೇ ಎಂದು ಹೇಳಿದ್ದಾರೆ.

ಮುಂದುವರೆದು ನಾನು ಮಲಗಲು ನಿರಾಕರಿಸಿದರು ಕೂಡ ಒಪ್ಪದ ಶ್ರೇಯಸ್, ಈ ಚಿತ್ರಕ್ಕೆ ಧನುಷ್ ನಾಯಕನಾಗಿದ್ದರೂ ಕೂಡ ನೀವು ಇದೇ ಮಾತು ಮಾತನಾಡುತ್ತೀರಾ..? ಆಗ ಮಲಗಲ್ವಾ..? ಎಂದು ಕೇಳಿದ್ದ ಎಂದು ಹೇಳಿರುವ ಮಾನ್ಯಾ ನಾನು ಧನುಷ್ ಆದರೂ ಇರಲಿ.. ಯಾರೇ ಇರಲಿ.. ನನ್ನಿಂದ ಇದೆಲ್ಲಾ ಸಾಧ್ಯ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದೇ ಎಂದು ನೆನಪು ಮಾಡಿಕೊಂಡಿದ್ದಾರೆ.

ಇಷ್ಟೆಲ್ಲಾ ಹೇಳಿದರೂ ಕೂಡ ಮತ್ತೆ ನನ್ನನ್ನೂ ಸಂಪರ್ಕ ಮಾಡಿ, ಧನುಷ್ ಅವರ ನಿರ್ಮಾಣ ಸಂಸ್ಥೆಯಾದ ವಂಡರ್‌ಬಾರ್‌ ಫಿಲ್ಮ್ಸ್‌ನ ಅಡ್ರೆಸ್ ಮತ್ತು ಚಿತ್ರದ ಕಥೆ ನನಗೆ ಕಳುಹಿಸಿದ್ದರು ಎಂದು ಹೇಳಿರುವ ಮಾನ್ಯಾ ಆನಂದ್, ನಾನು ಆ ಕಥೆ ಓದಲಿಲ್ಲ, ಯಾಕೆಂದರೆ ನಾನು ಆ ಸಿನಿಮಾ ಮಾಡಲ್ಲ ಎಂದ ಮೇಲೆ ಓದಿ ಪ್ರಯೋಜನವೇನು ಎಂದು ಪ್ರಶ್ನೆ ಮಾಡಿದ್ದಾರೆ. ನಮ್ಮಿಂದ ಬೇಕಾದ ಕೆಲಸ ಮಾಡಿಸಿಕೊಳ್ಳಿ ಆದರೆ ಪ್ರತಿಯಾಗಿ ನಮ್ಮಿಂದ ನಿರೀಕ್ಷೆ ಮಾಡಬೇಡಿ ಎಂದು ಹೇಳಿದ್ದಾರೆ.

More from Filmibeat

English summary
A major controversy hits Kollywood as serial actress Manya Anand accuses Dhanush's manager, Shreyas, of demanding favors. Get the latest on the high-profile allegations.
Read more about: casting couch dhanush kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X