CCL 2025 ; ಕಳೆದ ಬಾರಿಯ ಚಾಂಪಿಯನ್ ಬೆಂಗಾಲ್‌ಗೆ ಚೆನ್ನೈ ಸವಾಲು, ಹೇಗಿದೆ ಬಲಾಬಲ ?

2011ರಲ್ಲಿ ಸಿಸಿಎಲ್ ಆರಂಭವಾಯ್ತು. ಅಲ್ಲಿಂದ ಇಲ್ಲಿಯವರೆಗೆ ಸಿಸಿಎಲ್ ನಡೆದುಕೊಂಡು ಬಂದಿದೆ. ಈ 13 ವರ್ಷಗಳಲ್ಲಿ ಹಲವು ತಂಡಗಳು ಚಾಂಪಿಯನ್ ಆಗಿವೆ. ಆ ಪೈಕಿ ಮೊದಲ ಎರಡು ಸೀಸನ್‌ನಲ್ಲಿ ಚೆನ್ನೈ ಟ್ರೋಫಿ ಮುಡಿಗೇರಿಸಿಕೊಂಡರೆ ಬೆಂಗಾಲ್ ಟೈಗರ್ಸ್ ಕಳೆದ ವರ್ಷ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ದೊಡ್ಡ ದೊಡ್ಡ ತಂಡಗಳನ್ನು ಹಿಂದಿಕ್ಕಿ ಇತಿಹಾಸ ನಿರ್ಮಾಣ ಮಾಡಿದೆ.

ಇಂಥಾ ಚೆನ್ನೈ ಮತ್ತು ಬೆಂಗಾಲ್ ತಂಡ ಇಂದು ಸಿಸಿಎಲ್‌ನ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಎರಡು ತಂಡಗಳಲ್ಲಿ ಇಂದು ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾದರೂ ಎರಡು ತಂಡಗಳ ಬಲಾಬಲ ಮೇಲ್ನೋಟಕ್ಕೆ ಚೆನ್ನಾಗಿಯೇ ಕಾಣುತ್ತಿದೆ. ಉದಯ್, ಇಂದ್ರಶಿಶ್, ಮೋಹನ್, ಜೋ ಹೀಗೆ ಅನೇಕ ಆಲ್‌ರೌಂಡರ್‌ಗಳು ಬೆಂಗಾಲ್ ತಂಡದಲ್ಲಿದ್ದಾರೆ. ಅದರಲ್ಲಿಯೂ ಜೇಮಿ ಬ್ಯಾನರ್ಜಿ ಯಾವ ಕ್ಷಣದಲ್ಲಾದರೂ ಪಂದ್ಯದ ದಿಕ್ಕನ್ನು ಬದಲಿಸಬಹುದು. ಇದಕ್ಕೆ ಕಳೆದ ವರ್ಷ ಇವರು ಫೈನಲ್‌ನಲ್ಲಿ ಕರ್ನಾಟಕ ಬುಲ್ದೋಜರ್ಸ್ ತಂಡದ ವಿರುದ್ದ ಎರಡನೇ ಇನಿಂಗ್ಸ್‌ನಲ್ಲಿ 18 ಬಾಲ್‌ನಲ್ಲಿ ಸಿಡಿಸಿದ 39ರನಗಳೇ ಸಾಕ್ಷಿ.

CCL 2025 Bengal Tigers vs Chennai Rhinos Who Will Win the First Match Here s How Both Teams Look

ಇನ್ನು ಚೆನ್ನೈ ಕೂಡ ಬಲಿಷ್ಠವಾದ ತಂಡ. ನಿಜಾ. ಮೊದಲ ಎರಡು ವರ್ಷ ಚೆನ್ನೈ ತಂಡದಲ್ಲಿದ್ದ ಉತ್ಸಾಹ ಆ ನಂತರ ಕಡಿಮೆಯಾದಂತೆ ಕಂಡು ಬರುತ್ತಿದೆ. ಇದಕ್ಕೆ ಪೂರಕವಾಗಿ ಆ ನಂತರ ಆರ್ಯ ನಾಯಕತ್ವದ ಚೆನ್ನೈ ತಂಡ ಕಪ್ ಗೆದ್ದಿಲ್ಲ. ಫೈನಲ್ ಹಂತದವರೆಗೆ ಬರುವಲ್ಲಿ ಕೂಡ ಚೆನ್ನೈ ತಂಡ ಎಡವಿದೆ. ನಿಜಾ ಐದನೇ ಸೀಸನ್‌ನಲ್ಲಿ ಚೆನ್ನೈ ತಂಡ ಫೈನಲ್ ತಲುಪಿತ್ತು. ಆದರೆ ತೆಲುಗು ತಂಡದ ವಿರುದ್ದ ಸೋತು ಹೋಗಿತ್ತು. ಅಲ್ಲಿಂದ ಚೆನ್ನೈ ತಂಡದ ಪ್ರದರ್ಶನ ಅಷ್ಟಕಷ್ಟೇ.

ಹೀಗಾಗಿಯೇ ಈ ಬಾರಿ ಎಚ್ಚೆತ್ತುಕೊಂಡಿರುವ ಚೆನ್ನೈ ತಂಡ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದೆ. ಅನುಭವಿ ಆಟಗಾರರ ಜೊತೆ ಹೊಸ ಮುಖಗಳಿಗೆ ಮಣೆ ಹಾಕಿದೆ. ಇನ್ನು ಆರ್ಯ ನಾಯಕತ್ವದ ಚೆನ್ನೈ ರೈನೋಸ್ ಈ ಸೀಸನ್‌ನಲ್ಲಿ ಕೊನೆಯ ಹಂತದವರೆಗೆ ಬರಲು ವಿಕ್ರಾಂತ್ ಮತ್ತು ಭರತ್ ಅವರು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸಬೇಕು. ಅವರು ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸದಲ್ಲಿಯೇ ತಂಡದ ಉಳಿದ ದೌರ್ಬಲ್ಯಗಳ ಕಡೆ ಆರ್ಯ ಗಮನ ವಹಿಸಿದ್ದಾರೆ.

ಬೆಂಗಾಲ್ ಟೈಗರ್ಸ್ ತಂಡ

ಜಿಸ್ಶು ಸೇನ್‌ಗುಪ್ತಾ { ಕ್ಯಾಪ್ಟನ್ } ಇಂದ್ರಶಿಶ್, ಮೋಹನ್, ಸುಮನ್, ಜಾಯ್, ಜೋ, ಯೂಸುಫ್, ಜೀತು ಕಮಲ್, ಜಮ್ಮಿ, ರತ್ನದೀಪ್ ಘೋಷ್, ಆನಂದ್ ಚೌಧರಿ, ಸ್ಯಾಂಡಿ, ಆದಿತ್ಯ ರಾಯ್ ಬ್ಯಾನರ್ಜಿ, ಅರ್ಮಾನ್ ಅಹಮದ್, ಮಾಂಟಿ, ರಾಹುಲ್ ಮಜುಂದಾರ್, ಗೌರವ್ ಚಕ್ರವರ್ತಿ, ಬೋನಿ, ಸೌರವ್ ದಾಸ್

ಚೆನ್ನೈ ತಂಡ

ಆರ್ಯ { ಕ್ಯಾಪ್ಟನ್ } ಭರತ್, ಶಾಮ್, ಬೋಸ್ ವೆಂಕಟ್, ಹೇಮಚಂದ್ರನ್, ಕಲೈಯರಸನ್, ಮಹೇಂದ್ರನ್, ನಂದಾ, ಪೃಥ್ವಿ, ರಮಣ, ಸಂಜಯ್ ಭಾರತಿ, ಶಂತನು, ಶರಣ್, ಉದಯ್ ಕುಮಾರ್, ವಿಕ್ರಾಂತ್, ವಿಷ್ಣು

ಸದ್ಯ ಬೆಂಗಾಲ್ ಮತ್ತು ಚೆನ್ನೈ ನಡುವೆ ಮೊದಲ ಪಂದ್ಯ ಶುರುವಾಗಿದೆ. ಟಾಸ್ ಗೆದ್ದ ಬೆಂಗಾಲ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ನಾಲ್ಕು ಓವರ್‌ಗಳಲ್ಲಿ ಹತ್ತೊಂಬತ್ತು ರನಗಳಿಗೆ ಒಂದು ವಿಕೆಟ್‌ ಕೂಡ ಕಳೆದುಕೊಂಡಿದೆ.

More from Filmibeat

Read more about: ccl 2025 filmibeat news cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X