CCL 2025: ಚೆನ್ನೈ ರೈನೋಸ್ ಎದುರು ಬೆಂಗಾಲ್ ಟೈಗರ್ಸ್ 10 ರನ್‌ಗಳ ಗೆಲುವು
ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಸೀಸನ್ 11 ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಚೆನ್ನೈ ರೈನೋಸ್ ತಂಡವನ್ನು ಬೆಂಗಾಲ್ ಟೈಗರ್ಸ್ ತಂಡ ಎದುರಿಸಿತ್ತು. 4 ಇನ್ನಿಂಗ್ಸ್‌ಗಳ ಪಂದ್ಯದಲ್ಲಿ ಅಂತಿಮವಾಗಿ ಬೆಂಗಾಲ್ ಟೈಗರ್ಸ್ ತಂಡ ಚೆನ್ನೈ ರೈನೋಸ್ ಎದುರು 10 ರನ್‌ಗಳ ಗೆಲುವು ಸಾಧಿಸಿತು.
ಟಾಸ್ ಗೆದ್ದು ಬೆಂಗಾಲ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಆದರೆ ಮೊದಲ ಇನ್ನಿಂಗ್ಸ್ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲು ಸಾಧ್ಯವಾಗಲಿಲ್ಲ. 10 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿತ್ತು.

ಚೆನ್ನೈ ರೈನೋಸ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ತಕ್ಕ ಪ್ರತ್ಯುತ್ತರ ನೀಡಿತ್ತು. 4 ವಿಕೆಟ್ ಕಳೆದುಕೊಂಡು 90 ರನ್ ಗಳಿಗೆ 11 ರನ್‌ಗಳ ಮುನ್ನಡೆ ಕಾಯ್ದುಕೊಂಡಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬೆಂಗಾಲ್ ಟೈಗರ್ಸ್ ತಂಡ ಹೋರಾಟ ಪ್ರದರ್ಶನ ತೋರಿತು. ಅಂತಿಮವಾಗಿ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಚೆನ್ನೈ ತಂಡಕ್ಕೆ ಒಟ್ಟು 101 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ರನ್ ಚೇಸ್ ಮಾಡಲು ಮುಂದಾಗಿದ್ದ ಚೆನ್ನೈ ಅಂತಿಮವಾಗಿ 5 ವಿಕೆಟ್ ಕಳೆದುಕೊಂಡು 88 ರನ್ ಮಾತ್ರ ಗಳಿಸಿತು.
ಬೆಂಗಾಲ್ ಟೈಗರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ ಜಾಮ್ಮಿ 21 ಎಸೆತಗಳಲ್ಲಿ 22 ರನ್ ಮೂಲಕ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದರು. ಚೆನ್ನೈ ತಂಡದ ಕಾಲೈ 2 ಓವರ್‌ಗಳಲ್ಲಿ 6 ರನ್ ನೀಡಿ 2 ವಿಕೆಟ್ ಕಬಳಿಸಿ ಅತ್ಯುತ್ತಮ ಪ್ರದರ್ಶನ ತೋರಿದ್ದರು. ಇನ್ನು ಚೆನ್ನೈ ತಂಡದ ಪರ ಮೊದಲ ಇನ್ನಿಂಗ್ಸ್‌ನಲ್ಲಿ ರಮಣ 28 ರನ್ ಗಳಿಸಿದ್ದು ಹೆಚ್ಚು. ಬೆಂಗಾಲ್ ಟೈಗರ್ಸ್ ಬೌಲರ್ ರತ್ನದೀಪ್ 2 ವಿಕೆಟ್ ಪಡೆದಿದ್ದರು.
ಎರಡನೇ ಇನ್ನಿಂಗ್ಸ್‌ನಲ್ಲಿ ಬೆಂಗಾಲ್ ಟೈಗರ್ ಪರ ರಾಹುಲ್ 38 ರನ್ ಗಳಿಸಿ ತಂಡಕ್ಕೆ ಬಲ ತುಂಬಿದ್ದರು. ಚೆನ್ನೈ ತಂಡದ ಶರಣ್ 2 ಓವರ್‌ಗಳಲ್ಲಿ 14 ರನ್ ನೀಡಿ 1 ವಿಕೆಟ್ ಪಡೆದಿದ್ದು ಶ್ರೇಷ್ಠ ಪ್ರದರ್ಶನ ಎನಿಸಿತು.


Click it and Unblock the Notifications










