Chandramukhi-2: ವಿಷ್ಣು, ರಜನಿಕಾಂತ್ ಬಳಿಕ ಅದೇ ಪಾತ್ರದಲ್ಲಿ ರಾಘವ: ನಿರಾಸೆ ಮೂಡಿಸಿದ ವೆಟ್ಟೈಯನ್ ಫಸ್ಟ್ ಲುಕ್

3 ದಶಕಗಳ ಹಿಂದೆ ಬಂದ ಮಲಯಾಳಂನ 'ಮಣಿಚಿತ್ರತ್ತಾಳ್' ಸಿನಿಮಾ ಹಲವು ಸಿನಿಮಾಗಳಿಗೆ ಪ್ರೇರಣೆಯಾಗಿದ್ದು ಗೊತ್ತೇಯಿದೆ. ಕನ್ನಡದಲ್ಲಿ ಆಪ್ತಮಿತ್ರ, ತಮಿಳಿನಲ್ಲಿ ಚಂದ್ರಮುಖಿ, ಹಿಂದಿಯಲ್ಲಿ ಭೂಲ್ ಭುಲಯ್ಯ, ತೆಲುಗಿನಲ್ಲಿ ನಾಗವಲ್ಲಿ ಹೀಗೆ ಹತ್ತು ಹಲವು ಸಿನಿಮಾಗಳಿಗೆ ಆ ಸೈಕಲಾಜಿಕಲ್ ಸಿನಿಮಾ ಸ್ಪೂರ್ತಿಯಾಗಿತ್ತು. ಇದೀಗ ಅದೇ ಹಾದಿಯಲ್ಲಿ 'ಚಂದ್ರಮುಖಿ'- 2 ಸಿನಿಮಾ ತೆರೆಗೆ ಸಿದ್ಧವಾಗಿ ಕುತೂಹಲ ಮೂಡಿಸಿದೆ.

ಪಿ. ವಾಸು ನಿರ್ದೇಶನದ ಕಾಮಿಡಿ ಎಂಟರ್‌ಟೈನರ್ 'ಚಂದ್ರಮುಖಿ'- 2 ಚಿತ್ರದಲ್ಲಿ ರಾಘವ ಲಾರೆನ್ಸ್ ಹಾಗೂ ಕಂಗನಾ ರಾಣಾವತ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಗಣೇಶ ಹಬ್ಬದ ಸಂಭ್ರಮದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಸದ್ಯ ಚಿತ್ರದಲ್ಲಿ ನಾಯಕನ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ರಾಜ ವೆಟ್ಟೈಯನ್ ಅವತಾರದಲ್ಲಿ ರಾಘವ ಲಾರೆನ್ಸ್ ಕಾಣಿಸಿಕೊಂಡಿದ್ದಾರೆ. ಆದರೆ ಪೋಸ್ಟರ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Chandramukhi-2: Raghava Lawrence as Vettaiyan poster leaves netizens disappointed

ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ನಿರ್ಮಾಣವಾಗ್ತಿದೆ. ರಾಧಿಕಾ ಶರತ್ ಕುಮಾರ್, ವಡಿವೇಲು, ಲಕ್ಷ್ಮಿ ಮೆನನ್, ರಾವ್ ರಮೇಶ್ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ. ಇನ್ನು ವೆಟ್ಟೈಯನ್ ಪಾತ್ರದಲ್ಲಿ ರಾಘವ ಲುಕ್ ಚೆನ್ನಾಗಿಲ್ಲ. ನೆಟ್ಟಿಗರು ಕೂಡ ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರುಂಡ ಬೇರೆ.. ಮುಂಡ ಬೇರೆ

ಲೈಕಾ ಸಂಸ್ಥೆ ಚಿತ್ರದಲ್ಲಿ ವೆಟ್ಟೈಯನ್ ಆಗಿ ರಾಘವ ಲಾರೆನ್ಸ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡಿದೆ. 5 ಭಾಷೆಗಳಲ್ಲಿ ಅದೇ ಪೋಸ್ಟರ್ ಬಂದಿದೆ. ಆದರೆ ಪೋಸ್ಟರ್‌ ನೋಡಿ ನೆಟ್ಟಿಗರು ಟೀಕೆಗಳ ಸುರಿಮಳೆಗರೆಯುತ್ತಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಾಕ್ಕಿರುವ ಸಿನಿಮಾ ಪೋಸ್ಟರ್ ಸರಿಯಾಗಿ ಡಿಸೈನ್ ಮಾಡಿಲ್ಲ ಎಂದು ಬೇಸರಗೊಂಡಿದ್ದಾರೆ. ಪೋಸ್ಟರ್‌ನಲ್ಲಿ ರುಂಡ, ಮುಂಡ ಬೇರೆ ಬೇರೆಯಾಗಿ ಇರುವಂತೆ ಕಾಣುತ್ತಿದೆ. ಬೇರೆ ದೇಹಕ್ಕೆ ಲಾರೆನ್ಸ್ ತಲೆಯನ್ನು ಅಂಟಿಸಿದಂತಿದೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ವಿಜಯ ರಾಜೇಂದ್ರ ಬಹದ್ಧೂರ್

19 ವರ್ಷಗಳ ಹಿಂದೆ ಬಂದಿದ್ದ 'ಆಪ್ತಮಿತ್ರ' ಸಾಹಸಸಿಂಹ ವಿಷ್ಣುವರ್ಧನ್ ವಿಜಯ ರಾಜೇಂದ್ರ ಬಹದ್ಧೂರ್ ಆಗಿ ಮೋಡಿ ಮಾಡಿದ್ದರು. ದಾದಾ ಲುಕ್, ಅಭಿನಯ ಎಲ್ಲವೂ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈ ಸಿನಿಮಾ ಸಕ್ಸಸ್ ಬಳಿಕ ಸೀಕ್ವೆಲ್ ಆಗಿ 'ಆಪ್ತರಕ್ಷಕ' ಸಿನಿಮಾ ಬಂದಿತ್ತು. ಈ ಚಿತ್ರದಲ್ಲೂ ಕೂಡ ವಿಜಯ ರಾಜೇಂದ್ರ ಬಹದ್ಧೂರ್ ಅವತಾರದಲ್ಲಿ ವಿಷ್ಣು ಅಭಿಮಾನಿಗಳ ಮನಗಸೂರೆಗೊಂಡಿದ್ದರು. ಈ ಚಿತ್ರವನ್ನು ಆಗವಲ್ಲಿ ಹೆಸರಿನಲ್ಲಿ ತೆಲುಗಿಗೆ ರೀಮೆಕ್ ಮಾಡಿದಾ ವಿಕ್ಟರಿ ವೆಂಕಟೇಶ್ ಶ್ರೀ ಶ್ರೀ ಶ್ರೀ ನಾಗಭೈರವ ಆಗಿ ಕಾಣಿಸಿಕೊಂಡಿದ್ದರು.

ವೆಟ್ಟೈಯನ್ ರಾಜಾ ಆಗಿ ತಲೈವಾ

ತಮಿಳಿನಲ್ಲಿ 'ಆಪ್ತಮಿತ್ರ' ಸಿನಿಮಾ 'ಚಂದ್ರಮುಖಿ' ಆಗಿ ರೀಮೆಕ್ ಆಗಿತ್ತು. ಅಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವೆಟ್ಟೈಯನ್ ರಾಜಾ ಆಗಿ ಅಬ್ಬರಿಸಿದ್ದರು. ಲಕ ಲಕ ಲಕ ಡೈಲಾಗ್ ಸೂಪರ್ ಹಿಟ್ ಆಗಿತ್ತು. ವೆಟ್ಟೈಯನ್ ರಾಜಾ ಪಾತ್ರಕ್ಕೆ ತಲೈವಾ ಹೊಸ ಖದರ್ ತಂದುಕೊಟ್ಟಿದ್ದರು. ಆ ಸಿನಿಮಾ ಸೀಕ್ವೆಲ್‌ಗೆ ರಜನಿಕಾಂತ್ ಒಪ್ಪಲಿಲ್ಲ. ಇದೀಗ ಅದೇ ವೆಟ್ಟೈಯನ್ ಪಾತ್ರದಲ್ಲಿ ರಾಘವ ಲಾರೆನ್ಸ್ ಮಿಂಚಿದ್ದಾರೆ.

'ಮಣಿಚಿತ್ರತ್ತಾಳ್' ಸ್ಫೂರ್ತಿ

1993ರಲ್ಲಿ ಮಲಯಾಳಂನಲ್ಲಿ ಫಾಸಿಲ್ 'ಮಣಿಚಿತ್ರತ್ತಾಳ್' ಸಿನಿಮಾ ಕಟ್ಟಿಕೊಟ್ಟಿದ್ದರು. ಆ ಚಿತ್ರದಲ್ಲಿ ಮೋಹನ್ ಲಾಲ್ ಸೈಕಿಯಾಟ್ರಿಸ್ಟ್ ಡಾ. ಸನ್ನಿ ಆಗಿ ನಟಿಸಿದ್ದರು. ಆತನ ಸ್ನೇಹಿತನಾಗಿ ಸುರೇಶ್ ಗೋಪಿ ಮಿಂಚಿದ್ದರು. ಆದರೆ ಆ ಚಿತ್ರದಲ್ಲಿ ರಾಜನ ಫ್ಲಾಶ್‌ಬ್ಯಾಕ್ ಕಥೆ ಇರಲಿಲ್ಲ. ಬದಲಿಗೆ ಊರಿನ ಮುಖಂಡನ ಮೇಲೆ ನಾಗವಲ್ಲಿ ಸೇಡು ತೀರಿಸಿಕೊಳ್ಳುವ ಕಥೆ ಇತ್ತು. ಊರಿನ ಮುಖಂಡನಾಗಿ ಸುರೇಶ್ ಗೋಪಿ ನಟಿಸಿದ್ದರು. 'ಆಪ್ತಮಿತ್ರ' ಚಿತ್ರದಲ್ಲಿ ಪಿ. ವಾಸು ಅದನ್ನು ಕೊಂಚ ಬದಲಿಸಿಕೊಂಡು ಟ್ವಿಸ್ಟ್ ಕೊಟ್ಟಿದ್ದರು.

'ಚಂದ್ರಮುಖಿ'ಯಾಗಿ ಕಂಗನಾ

ಈ ಬಾರಿ 'ಚಂದ್ರಮುಖಿ'ಯಾಗಿ ಬಾಲಿವುಡ್ ನಟಿ ಕಂಗನಾ ರಾಣಾವತ್ ನಟಿಸಿದ್ದಾರೆ. ಮಲಯಾಳಂನಲ್ಲಿ ಶೋಭನಾ, ಕನ್ನಡದಲ್ಲಿ ಸೌಂದರ್ಯ ಈ ಪಾತ್ರ ಮಾಡಿದ್ದರು. ಮೊದಲ ಭಾಗದಲ್ಲಿ ಜ್ಯೋತಿಕಾ 'ಚಂದ್ರಮುಖಿ'ಯಾಗಿ ಗೆದ್ದಿದ್ದರು. ಈ ಬಾರಿ ಆ ಅವಕಾಶ ಬಾಲಿವುಡ್ ಕ್ವೀನ್ ಪಾಲಾಗಿದೆ.

More from Filmibeat

English summary
Chandramukhi-2: Raghava Lawrence as Vettaiyan first look poster Released. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X