ಸಿಲ್ಕ್ ಸ್ಮಿತಾ ಕುರಿತು ಮತ್ತೊಂದು ಬಯೋಪಿಕ್: ಫಸ್ಟ್ ಲುಕ್ ರಿಲೀಸ್

ಸಿಲ್ಕ್ ಸ್ಮಿತಾ. ಒಂದ್ಕಾಲದಲ್ಲಿ ಪಡ್ಡೆ ಹುಡುಗರ ಹಾಟ್ ಫೇವರಿಟ್ ನಟಿ. ಮಾದಕ ಮೈಮಾಟದಿಂದ ಬರೀ ಐಟಂ ಸಾಂಗ್‌ಗಳಲ್ಲಿ ಕುಣಿದು ಮೋಡಿ ಮಾಡಿದ ಚೆಲುವೆ. ಸಿಲ್ಕ್ ನಿಗೂಢ ಸಾವಿನ ಬಗ್ಗೆ ಇಂದಿಗೂ ಸಾಕಷ್ಟು ಅನುಮಾನಗಳಿವೆ. ಆಕೆ ಇದ್ದಿದ್ದರೆ 63ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಇರುತ್ತಿದ್ದರು.

ಬಡ ಕುಟುಂಬದಿಂದ ಚಿತ್ರರಂಗಕ್ಕೆ ಬಂದು ಮುಂದೆ ಹೆಸರು, ಕೀರ್ತಿ, ಹಣ ಎಲ್ಲಾ ಸಂಪಾದಿಸಿ ದಿಢೀರನೆ ತನ್ನ 36ನೇ ವಯಸ್ಸಿನಲ್ಲಿ ಸಿಲ್ಕ್‌ ಸ್ಮಿತಾ ಬಾರದಲೋಕಕ್ಕೆ ಹೊರಟುಬಿಟ್ಟರು. ಆಂಧ್ರ ಪ್ರದೇಶಬದ ಏಲೂರು ಜಿಲ್ಲೆಯ ಕೊವಲ್ಲಿ ಎನ್ನುವ ಗ್ರಾಮದಲ್ಲಿ ಹುಟ್ಟಿದ ವಿಜಯಲಕ್ಷ್ಮಿ ವಡ್ಲಪಾಟಿ ಮುಂದೆ ಬಣ್ಣದ ಲೋಕದಲ್ಲಿ ಸಿಲ್ಕ್ ಸ್ಮಿತಾ ಆಗಿ ಮರೆದರು. 450ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕಮಾಲ್ ಮಾಡಿದರು.

Chandrika Ravi set to star in the Silk Smitha biopic, and heres the first look

ಸಿಲ್ಕ್ 400ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡರೂ ಬಹುತೇಕ ಸಿನಿಮಾಗಳಲ್ಲಿ ಐಟಂ ಸಾಂಗ್‌ಗಳಲ್ಲಿ ಕುಣಿದಿದ್ದರು. ಕುಟುಂಬದ ಆರ್ಥಿಕ ಸಮಸ್ಯೆಯಿಂದ ವಿಜಯಲಕ್ಷ್ಮಿ 4ನೇ ತರಗತಿಗೆ ಓದು ನಿಲ್ಲಿಸುವಂತಾಯಿತು. ಚಿಕ್ಕ ವಯಸ್ಸಿನಲ್ಲೇ ಮದುವೆ ಆಗುವಂತಾಯಿತು. ಗಂಡನ ಮನೆಯಲ್ಲೂ ಕಷ್ಟ ಹೆಚ್ಚಾದಾಗ ಆಕೆ ಅಲ್ಲಿಂದ ನೇರವಾಗಿ ಚೆನ್ನೈಗೆ ಬಂದಿದ್ದರು. ಸಿನಿಮಾಗಳಲ್ಲಿದ್ದ ಆಸಕ್ತಿಯಿಂದ ಮೊದಲಿನ ಸಿನಿಮಾ ನಟಿಯರಿಗೆ ಮೇಕಪ್ ಹಾಕುತ್ತಿದ್ದರು. 1980ರಲ್ಲಿ 'ವಂದಿಚಕ್ಕರಂ' ಎನ್ನುವ ತಮಿಳು ಚಿತ್ರದಲ್ಲಿ ಸಿಲ್ಕ್ ಎನ್ನುವ ಪಾತ್ರ ಮಾಡಿದ್ದರು. ಆ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಅಲ್ಲಿಂದ ಮುಂದೆ ಆಕೆ ಸಿಲ್ಕ್ ಸ್ಮಿತಾ ಎಂದು ಹೆಸರು ಬದಲಿಸಿಕೊಂಡರು.

ಐಟಂ ಸಾಂಗ್‌ಗಳಿಂದಲೇ ಸಿಲ್ಮ್ ಸ್ಮಿತಾ ದಕ್ಷಿಣ ಭಾರತ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದರು. ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲೂ ಸಿಲ್ಕ್ ಐಟಂ ಸಾಂಗ್ ಬೇಕು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಿಲ್ಕ್ ಐಟಂ ಸಾಂಗ್ ಇದ್ದರೆ ಸಿನಿಮಾ ಹಿಟ್ ಎನ್ನುವಂತಾಗಿತ್ತು. ಹಾಗಾಗಿ ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಆಕೆಯ ಸಾಂಗ್ ಸೇರಿಸುವಂತೆ ಪಟ್ಟು ಹಿಡಿಯುತ್ತಿದ್ದರು. ಪಡ್ಡೆಹುಡುಗರು ಸಿಲ್ಕ್ ಐಟಂ ಸಾಂಗ್‌ಗೆ ಹುಚ್ಚೆದ್ದು ಕುಣಿಯುತ್ತಿದ್ದರು. ಅವತ್ತಿನ ಕಾಲಕ್ಕೆ ಅಭಿಮಾನಿಗಳ ಪಾಲಿಗೆ ಸಿಲ್ಕ್ ಸ್ಮಿತಾ 'ಇಂಡಿಯನ್ ಮರ್ಲಿನ್ ಮನ್ರೋ' ಆಗಿಬಿಟ್ಟಿದ್ದರು. ನಾಯಕ ನಟಿಯರ ಸಮಕ್ಕೆ ಸಿಲ್ಕ್ ಕ್ರೇಜ್ ಸಂಪಾದಿಸಿದ್ದರು. ಕೆಲ ಕನ್ನಡ ಸಿನಿಮಾಗಳಲ್ಲೂ ಆಕೆ ಮಿಂಚಿದ್ದಾರೆ.

Chandrika Ravi set to star in the Silk Smitha biopic, and heres the first look

ಹೀರೊಯಿನ್ ಆಗಬೇಕು ಎಂದು ಚಿತ್ರರಂಗಕ್ಕೆ ಬಂದ ಸಿಲ್ಕ್ ಸ್ಮಿತಾ ಕೊನೆಗೆ ಐಟಂ ಗರ್ಲ್ ಆಗಿಯೇ ಉಳಿದುಬಿಟ್ಟರು. ಸಿನಿಮಾಗಳ ಅವಕಾಶ ಕಮ್ಮಿಯಾದಾಗ ಸಿನಿಮಾ ನಿರ್ಮಾಣಕ್ಕೆ ಇಳಿದರು. ಇದರಿಂದ ಸಾಕಷ್ಟು ನಷ್ಟ ಅನುಭವಿಸುವಂತಾಯಿತು. 1996ರಲ್ಲಿ ಚೆನ್ನೈನ ತಮ್ಮ ನಿವಾಸದಲ್ಲಿ ಆಕೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆಕೆಯ ದಿಢೀರ್ ನಿಧನಕ್ಕೆ ಚಿತ್ರರಂಗ ಶಾಕ್ ಆಗಿತ್ತು. ಆಕೆಯ ಸಾವಿಗೆ ಸಾವಿಗೆ ಕಾರಣ ಏನು? ಎನ್ನುವ ಬಗ್ಗೆ ಇನ್ನು ಚರ್ಚೆ ನಡೆಯುತ್ತಲೇಯಿದೆ.

ಸಿಲ್ಕ್ ಸ್ಮಿತಾ ಜೀವನವನ್ನಾಧರಿಸಿ ಬಾಲಿವುಡ್‌ನಲ್ಲಿ 'ಡರ್ಟಿ ಪಿಕ್ಚರ್' ಸಿನಿಮಾ ಬಂದಿತ್ತು. ಸಿಲ್ಕ್ ಆಗಿ ವಿದ್ಯಾ ಬಾಲನ್ ನಟಿಸಿ ಗೆದ್ದರು. ಇದೀಗ ಆಕೆಯ ಕುರಿತು ಮತ್ತೊಂದು ಬಯೋಪಿಕ್ ಘೋಷಣೆಯಾಗಿದೆ. ಸಿಲ್ಕ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. 'ಸಿಲ್ಕ್ ಸ್ಮಿತಾ' ಹೆಸರಿನಲ್ಲೇ ಸಿನಿಮಾ ನಿರ್ಮಾಣವಾಗಲಿದ್ದು ಚಂದ್ರಿಕಾ ರವಿ ಚಿತ್ರದಲ್ಲಿ ಸಿಲ್ಕ್ ಆಗಿ ನಟಿಸಲಿದ್ದಾರೆ. ಜಯರಾಮ್ ಎಂಬುವವರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. 'ಡರ್ಟಿ ಪಿಕ್ಚರ್' ಚಿತ್ರದಲ್ಲೂ ಹೇಳದ ಸಂಗತಿಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ನಡೀತಿದೆ.

More from Filmibeat

English summary
Chandrika Ravi's First Look As Silk Smitha in Silk Smitha: The Untold Story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X