ಅಭಿಮಾನಿ ಎಸೆದ ಹೂವನ್ನು ಬಾಂಬ್‌ ಎಂದುಕೊಂಡು ಎದ್ನೋ ಬಿದ್ನೋ ಎಂದು ಓಡಿ ಹೋದ ವಿಜಯ್

ನಮ್ಮ ದೇಶದಲ್ಲಿ ಚಿತ್ರರಂಗದಲ್ಲಿ ಮಿಂಚುವುದು, ಸೂಪರ್ ಸ್ಟಾರ್ ಸ್ಥಾನಕ್ಕೇರುವುದು ಸುಲಭ ಅಲ್ಲ. ಅದೊಂದು ತಪಸ್ಸು. ಅದೊಂದು ಸಾಹಸ. ಇಲ್ಲಿ ಬೆಳೆಯುವವರೆಗೆ ಒಂದು ಲೆಕ್ಕ ಆದರೆ ಬೆಳೆದ ನಂತರದ್ದು ಮತ್ತೊಂದು ಲೆಕ್ಕ. ಅಭಿಮಾನದ ಅಲೆಗಳ ನಡುವೆ ಈಜುವುದೇ ಇಲ್ಲಿ ಕಷ್ಟ. ಮನೆಯ ಹೊರಗಡೆ ಬಂದರೆ ಸಾಕು, ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಜನ ಮುತ್ತಿಕೊಳ್ಳುತ್ತಾರೆ.

ಕೆಲ ಒಮ್ಮೆ ಈ ಅತಿಯಾದ ಅಭಿಮಾನದಿಂದ ಕೆಲವರಿಗೆ ಕಿರಿಕಿರಿ ಆದರೆ, ಇನ್ನೂ ಕೆಲ ಒಮ್ಮೆ ಈ ಅಭಿಮಾನದ ಅನುಬಂಧದಿಂದ ಮೀಮ್ ಮೆಟೀರಿಯಲ್ ಸೃಷ್ಟಿಯಾಗುತ್ತೆ. ಉದಾಹರಣೆಗೆ ವಿಜಯ್ ರ್‍ಯಾಲಿ ಸಮಯದಲ್ಲಿ ನಡೆದ ಪ್ರಸಂಗವನ್ನೇ ತೆಗೆದುಕೊಳ್ಳಿ.

Chaos The Viral Moment a Bomb Scare Interrupted Thalapathy Vijay s High-Voltage Cycle Rally

ಹೌದು, ಎಲ್ಲರಿಗೆ ಗೊತ್ತಿರುವಂತೆ ವಿಜಯ್ ಈಗ ಕೇವಲ ಆಕ್ಟರ್ ಮಾತ್ರ ಅಲ್ಲ. ಪೊಲಿಟಿಕಲ್ ಲೀಡರ್ ಕೂಡ ಹೌದು. ಟಿವಿಕೆ ಪಕ್ಷವನ್ನು ಸ್ಥಾಪಿಸಿ ಕಣಕ್ಕಿಳಿದಿರುವ ವಿಜಯ್ ಮೊದಲ ಪ್ರಯತ್ನದಲ್ಲಿಯೇ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಉತ್ಸಾಹದಿಂದ ಪ್ರಚಾರವನ್ನು ಕೂಡ ಮಾಡುತ್ತಿದ್ದಾರೆ.

ಹೀಗೆ ಪ್ರಚಾರ ಮಾಡುತ್ತಾ ಮಾಡುತ್ತಾ ವಿಜಯ್ ಕನ್ಯಾಕುಮಾರಿ ಹೈವೇ ತಲುಪಿದ್ದಾರೆ. ಇನ್ನೂ ನಿಮಗೆ ಗೊತ್ತು. ರಾಜಕಾರಣದಲ್ಲಿ ಜನ ಮನ ಗೆಲ್ಲಲು, ಗಮನ ಸೆಳೆಯಲು ನಾನಾ ರೀತಿಯ ಕಸರತ್ತು ಮಾಡಬೇಕು. ಹೀಗಾಗಿಯೇ ವಿಜಯ್ ಕೂಡ ಹೈವೆಯಲ್ಲಿ ಸೈಕಲ್ ಓಡಿಸಿದ್ದಾರೆ.

ಇನ್ನು ವಿಜಯ್ ತಮಿಳುನಾಡಿನ ಚಿತ್ರರಂಗದ ದಳಪತಿ. ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್. ಇಂತಹ ಸ್ಟಾರ್ ಹೈವೆಯಲ್ಲಿ ಕಣ್ಣೆದುರು ಸೈಕಲ್ ಸವಾರಿ ಮಾಡುತ್ತಿದ್ದಾಗ ಅಭಿಮಾನದ ಜಾತ್ರೆ ನಡೆಯದಿರಲು ಹೇಗೆ ಸಾಧ್ಯ..? ಅಭಿಮಾನದ ಹೂಮಳೆ ಬೀಳದಿರಲು ಹೇಗೆ ಸಾಧ್ಯ..?

ಹೀಗಾಗಿಯೇ ಹೈವೆಯಲ್ಲಿ ಕಣ್ಣು ಹಾಯಿಸಿದ ಕಡೆಯೆಲ್ಲಾ ಜನ ಕಂಡು ಬಂದರು. ಸೈಕಲ್ ರೈಡ್ ಮಾಡುತ್ತಿದ್ದ ವಿಜಯ್ ಕಡೆ ನುಗ್ಗುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದರು. ವಿಜಯ್ ಅಭಿಮಾನದ ಈ ಸುಳಿಯಿಂದ ತಪ್ಪಿಸಿಕೊಳ್ಳುತ್ತಾ, ಕೈ ಬೀಸುತ್ತಾ, ಸೈಕಲ್ ಸವಾರಿಯನ್ನು ಮಾಡುತ್ತಿದ್ದರು.

Chaos The Viral Moment a Bomb Scare Interrupted Thalapathy Vijay s High-Voltage Cycle Rally

ಇದೇ ಸಮಯದಲ್ಲಿ ಅಭಿಮಾನಿಯೊಬ್ಬರು ಕೈಯಲ್ಲಿ ಹೂವಿನ ಪಕ್ಕಳೆ ಹಿಡಿದುಕೊಂಡು ವಿಜಯ್ ಎದುರು ಓಡಿ ಬಂದಿದ್ದಾರೆ. ವಿಜಯ್ ಕೂಗಳತೆಯ ದೂರದಲ್ಲಿದ್ದಾಗ ತಮ್ಮ ಕೈಯಲ್ಲಿದ್ದ ಹೂವಿನ ಪಕ್ಕಳೆ ಎಸೆದಿದ್ದಾರೆ. ಇದನ್ನು ಕಂಡು ವಿಜಯ್ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. ಅಭಿಮಾನಿ ಎಸೆದಿದ್ದು ಬಾಂಬ್ ಎಂದು ವಿಜಯ್ ಅಂದುಕೊಂಡರಾ ಗೊತ್ತಿಲ್ಲ. ಆದರೆ.. ವಿಜಯ್ ಮಾತ್ರ ಸೈಕಲ್‌ನ ಅಲ್ಲಿಯೇ ಬಿಟ್ಟು ಎದ್ನೋ ಬಿದ್ನೋ ಅಂತಾ ಓಡಿ ಹೋಗಿದ್ದಾರೆ. ಹಿಂದೆ ತಮ್ಮನ್ನು ಹಿಂಬಾಲಿಸುತ್ತಿದ್ದ ವ್ಯಾನ್‌ ಒಳಗೆ ಹೋಗಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಯದ್ವಾ ತದ್ವಾ ವೈರಲ್ ಆಗಿದೆ. ಹಲವರು ವಿಜಯ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಜನರ ನಡುವೆ ಬೆರೆಯಲು ಹಿಂದೇಟು ಹಾಕುವ ಸ್ಟಾರ್ ಗಳು ಜನನಾಯಕನಾಗಲು ಹೇಗೆ ಸಾಧ್ಯ..? ಎಂಬ ಪ್ರಶ್ನೆಯನ್ನು ಹಲವರು ಮಾಡುತ್ತಿದ್ದು ವಿಜಯ್ ಅವರನ್ನು ಆಡಿಕೊಳ್ಳುತ್ತಿದ್ಧಾರೆ.

ಇನ್ನುಳಿದಂತೆ ರಾಜಕೀಯದ ಅಖಾಡಕ್ಕೆ ಧುಮುಕಿರುವ ವಿಜಯ್ ಅವರ ವೈಯಕ್ತಿಕ ಬದುಕು ಸದ್ಯ ಚರ್ಚೆಯಲ್ಲಿದೆ. ಸಂಗೀತಾ ಅವರ ಜೊತೆಗಿನ 27 ವರ್ಷಗಳ ದಾಂಪತ್ಯ ಜೀವನ ಮುರಿದು ಬಿದ್ದಿದೆ. ಈ ವಿಚಾರದಿಂದ ವಿಜಯ್‌ಗೆ ಚುನಾವಣೆಯಲ್ಲಿ ಹಿನ್ನೆಡೆಯಾಗುತ್ತಾ ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಈ ವಿಚ್ಚೇದನ ಪ್ರಕರಣದ ವಿಚಾರಣೆ ಏಪ್ರಿಲ್ 20ರಂದು ನ್ಯಾಯಾಲಯದಲ್ಲಿ ನಡೆಯಲಿದೆ.

ಮತ್ತೊಂದು ಕಡೆ ವಿಜಯ್ ಅಭಿನಯದ ಮಹತ್ವಕಾಂಕ್ಷೆಯ ಚಿತ್ರ ''ಜನನಾಯಗನ್'' ಬಿಡುಗಡೆಗೆ ಮುನ್ನವೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಈ ದುಷ್ಕ್ರತ್ಯದ ಹಿಂದೆ ಯಾರ ಕೈವಾಡ ಇದೆ ಎನ್ನುವ ವಿಚಾರ ಇನ್ನೂ ಗೊತ್ತಾಗದಿದ್ದರು ಕೂಡ ಈ ವಿಚಾರದಲ್ಲಿ ಚಿತ್ರರಂಗ ಒಗ್ಗಟ್ಟಾಗಿದೆ. ಧ್ವನಿ ಎತ್ತಿದೆ. ವಿಜಯ್ ಮತ್ತು ನಿರ್ಮಾಣ ಸಂಸ್ಥೆ ಕೆವಿಎನ್‌ಗೆ ಧೈರ್ಯವನ್ನು ಕೂಡ ತುಂಬಿದೆ.

More from Filmibeat

English summary
Panic gripped the streets during Vijay's cycle campaign when a mysterious object was hurled at the star. Was it a threat or a fan's gift? Get the full story.
Read more about: vijay politics viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X