twitter
    For Quick Alerts
    ALLOW NOTIFICATIONS  
    For Daily Alerts

    50 ಪರ್ಸೆಂಟ್‌ಗಿಂತ ಹೆಚ್ಚು ಪ್ರೇಕ್ಷಕರು: ಚಿತ್ರಮಂದಿರಕ್ಕೆ 5000 ರೂಪಾಯಿ ದಂಡ

    |

    ತಮಿಳು ನಟ ವಿಜಯ್ ನಟಿಸಿರುವ ಮಾಸ್ಟರ್ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಂಡಿತ್ತು. ಜನವರಿ 13 ರಂದು ತಮಿಳು, ತೆಲುಗು, ಕನ್ನಡ ಹಾಗೂ ಹಿಂದಿಯಲ್ಲಿ ಮಾಸ್ಟರ್ ಸಿನಿಮಾ ಬಿಡುಗಡೆಯಾಗಿದೆ.

    ಚಿತ್ರಮಂದಿರದಲ್ಲಿ 50 ಪರ್ಸೆಂಟ್ ಪ್ರೇಕ್ಷಕರಿಗೆ ಮಾತ್ರ ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದೆ. ಆದರೆ, ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ ಹಲವು ಚಿತ್ರಮಂದಿರಗಳು 50 ಪರ್ಸೆಂಟ್‌ಗಿಂತ ಹೆಚ್ಚು ಆಸನ ಭರ್ತಿ ಮಾಡಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದೆ.

    ನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣನಿಯಮ ಉಲ್ಲಂಘಿಸಿ ಮಾಸ್ಟರ್ ಸಿನಿಮಾ ಪ್ರದರ್ಶಿಸಿದ ಚಿತ್ರಮಂದಿರದ ವಿರುದ್ಧ ಪ್ರಕರಣ

    ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ ಧರಿಸಿದ ವ್ಯಕ್ತಿಗಳಿಗೆ ಟಿಕೆಟ್ ನೀಡಿ ನಿಯಮ ಉಲ್ಲಂಘನೆ ಮಾಡಿದ ಕಾಶಿ ಚಿತ್ರಮಂದಿರದ ವಿರುದ್ಧ ಚೆನ್ನೈ ಪೊಲೀಸರು ಕೇಸ್ ದಾಖಲಿಸಿ 5000 ರೂಪಾಯಿ ದಂಡ ವಿಧಿಸಿದ್ದಾರೆ.

    Chennai Police Fined 5 thousand For Admitting more than 50 percent audience to theater

    ಜನವರಿ 13 ರಂದು ಬೆಳಗ್ಗೆ 4 ಗಂಟೆಗೆ ಮಾಸ್ಟರ್ ಸಿನಿಮಾ ಶೋ ಪ್ರದರ್ಶನ ಮಾಡಲಾಗಿದೆ. ಈ ವೇಳೆ 50 ಪರ್ಸೆಂಟ್‌ಗಿಂತ ಹೆಚ್ಚು ಜನರು ಚಿತ್ರಮಂದಿರದಲ್ಲಿ ಕಂಡು ಬಂದಿದ್ದಾರೆ. ಅನೇಕರು ಮಾಸ್ಕ್ ಧರಿಸಿರಲಿಲ್ಲ. ಸಾಮಾಜಿಕ ಅಂತರವೂ ಇರಲಿಲ್ಲ. ಇದೆಲ್ಲವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಮಾಲೀಕರಿಗೆ 5000 ದಂಡ ಹಾಕಿದ್ದಾರೆ.

    'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?'ಮಾಸ್ಟರ್' ಟ್ವಿಟ್ಟರ್ ವಿಮರ್ಶೆ; ಫಸ್ಟ್ ಡೇ ಫಸ್ಟ್ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು?

    ಲೋಕೇಶ್ ಕನಕರಾಜ್ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್, ವಿಜಯ್ ಸೇತುಪತಿ ಹಾಗೂ ಮಾಳವಿಕಾ ಮೋಹನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

    ಮಾಸ್ಟರ್ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆ ಮಾಡಿದಕ್ಕಿಂತ ಹೆಚ್ಚು ಹಣ ಗಳಿಸಿದೆ. ಲಾಕ್‌ಡೌನ್ ಬಳಿಕ ಚಿತ್ರಮಂದಿರಕ್ಕೆ ಬಂದಿದ್ದ ಸ್ಟಾರ್ ನಟನ ಚಿತ್ರ ಇದಾಗಿದೆ.

    Recommended Video

    ರಾಜಮೌಳಿ ತಂದೆ ಗರಡಿಯಲ್ಲಿ ತಯಾರಾಗಿದೆ 'ಕಬ್ಜ'ದ ಕಥೆ | Filmibeat Kannada

    English summary
    Chennai Police Fined 5 thousand rupees For Admitting more than 50 percent audience to theater.
    Friday, January 15, 2021, 17:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X