CCL 2025 ; ಅನ್ಶುಮನ್ ಏಕಾಂಗಿ ಹೋರಾಟ ವ್ಯರ್ಥ, ಚೆನ್ನೈ ವಿರುದ್ದ 16 ರನ್‌ಗಳಿಂದ ಸೋತ ಭೋಜ್‌ಪುರಿ ದಬಾಂಗ್ಸ್. !

ಮನೋಜ್ ತಿವಾರಿ ನಾಯಕತ್ವದ ಭೋಜ್‌ಪುರಿ ದಬಾಂಗ್ಸ್ ತಂಡ ಇಂದು ಸೂರತ್‌ನಲ್ಲಿ ಚೆನ್ನೈ ರೈನೋಸ್ ತಂಡದ ವಿರುದ್ಧ ಮುಖಾಮುಖಿಯಾಗಿತ್ತು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭೋಜ್‌ಪುರಿ ದಬಾಂಗ್ಸ್ ತಂಡ ಮೊದಲ ಓವರ್‌ನಲ್ಲಿಯೇ ರಮಣ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯೂ ಆಯಿತು. ಒಂದು ಸಿಕ್ಸ್ ಒಂದು ಬೌಂಡರಿ ನೆರವಿನಿಂದ ಹತ್ತು ರನ್ ಗಳಿಸಿದ್ದ ರಮಣ, ಪರವೇಶ್ ಲಾಲ್ ಯಾದವ್ ಅವರಿಗೆ ವಿಕೆಟ್ ಒಪ್ಪಿಸಿದರು.

ಹನ್ನೊಂದು ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ಚೆನ್ನೈ ತಂಡ ಆ ನಂತರ ಐದು ಓವರ್‌ಗಳಲ್ಲಿ 76 ರನ್ ಕಲೆ ಹಾಕಿತು. ಇದೇ ಸಮಯದಲ್ಲಿ ಆಕ್ರಮಣಕಾರಿ ಆಟವನ್ನು ಆಡುತ್ತಿದ್ದ ಶರಣ್, ಆದಿತ್ಯ ಓಜಾಗೆ ವಿಕೆಟ್ ಒಪ್ಪಿಸಿದರು. ಕೇವಲ 13 ಎಸೆತಗಳಲ್ಲಿ 5 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದ್ದ ಶರಣ್ 35 ರನ್‌ಗಳನ್ನು ಗಳಿಸಿ ಪೆವಿಲಿಯನ್ ಸೇರಿದರು.

chennai-rhinos-defeat-bhojpuri-dabanggs-by-16-runs-in-ccl-2025

ಆ ನಂತರ ಜವಾಬ್ದಾರಿಯನ್ನು ವಹಿಸಿಕೊಂಡ ನಾಯಕ ವಿಕ್ರಾಂತ್ 19 ಎಸೆತಗಳಲ್ಲಿ 47 ರನ್‌ ಗಳಿಸಿದರು. ಇವರಿಗೆ ಇನ್ನೊಂದು ಬದಿಯಲ್ಲಿ ದಸರತಿ ಅತ್ಯುತ್ತಮವಾಗಿ ಸಾಥ್ ನೀಡಿದರು. 12 ಎಸೆತಗಳಲ್ಲಿ 49 ರನ್‌ಗಳಿಸುವ ಮೂಲಕ ಭೋಜ್‌ಪುರಿ ಬೌಲರ್‌ಗಳ ಬೆಂಡೆತ್ತಿದ್ದರು. ವಿಕ್ರಾಂತ್ ಮತ್ತು ದಸರತಿ ಅವರ ಈ ಅಜೇಯ ಆಟದಿಂದ ಚೆನ್ನೈ ತಂಡ ಮೊದಲ ಇನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 167 ರನ್ ಗಳಿಸಿತು.

ಚೆನ್ನೈ ನೀಡಿದ್ದ ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಭೋಜ್‌ಪುರಿ ದಬಾಂಗ್ಸ್‌ ತಂಡ ಕೇವಲ 03 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಈ ಮೂಲಕ ಸಂಕಷ್ಟಕ್ಕೆ ಸಿಲುಕಿತ್ತು. ಅಂತಿಮವಾಗಿ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಕಳೆದುಕೊಂಡು 102 ರನ್‌ ಗಳನ್ನು ಮಾತ್ರ ಭೋಜ್‌ಪುರಿ ತಂಡ ಗಳಿಸಿತು.

ಮೊದಲ ಇನಿಂಗ್ಸ್‌ನಲ್ಲಿ 63 ರನ್‌ಗಳ ಮುನ್ನಡೆಯನ್ನು ಪಡೆದ ಚೆನ್ನೈ ತಂಡ ಎರಡನೇ ಇನಿಂಗ್ಸ್‌ನಲ್ಲಿ ಆರಂಭದಲ್ಲಿಯೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಹೀಗಾಗಿ ಮೊದಲ ಇನಿಂಗ್ಸ್‌ನಲ್ಲಿ ಅಬ್ಬರಿಸಿದ್ದ ಚೆನ್ನೈ ಆಟಗಾರರು ನಿಧಾನವಾಗಿ ಆಡಲು ಶುರು ಮಾಡಿದರು. 10 ಓವರ್‌ನಲ್ಲಿ 102 ರನ್‌ಗಳನ್ನು ತಂಡ ಗಳಿಸಿತು. ಈ ಮೂಲಕ ಭೋಜ್‌ಪುರಿ ದಬಾಂಗ್ಸ್‌ ತಂಡಕ್ಕೆ 168ರನ್‌ಗಳ ಗುರಿಯನ್ನು ನೀಡಿತು. ದ್ವೀತಿಯ ಇನಿಂಗ್ಸ್‌ನಲ್ಲಿ ಚೆನ್ನೈ ಪರ ನಾಯಕ ವಿಕ್ರಾಂತ್ 24 ರನ್ ಗಳಿಸಿದೆ, ಶರಣ್ 19, ಪರಿ 17 ಮತ್ತು ಅಜಯ್ 17 ರನ್ ಗಳಿಸಿದ್ದಾರೆ. ಮಿಕ್ಕಂತೆ ಬೇರೆ ಯಾರು ಎರಡಂಕಿಯನ್ನು ದಾಟಲಿಲ್ಲ.

ಚೆನ್ನೈ ನೀಡಿದ 167 ರನ್‌ಗಳ ಗುರಿಯನ್ನು ಬೆನ್ನತ್ತಿದ ಭೋಜ್‌ಪುರಿ ತಂಡ ಮತ್ತೊಮ್ಮೆ ಆರಂಭದಲ್ಲಿಯೇ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ಕೇವಲ 8 ಎಸೆತಗಳಲ್ಲಿ 21 ರನ್ ಬಾರಿಸಿ ಉದಯ್ ತಿವಾರಿ ಔಟಾದರೆ ಅಸ್ಗರ್ ಖಾನ್ 10 ರನ್ ಗಳಿಸಿ ವಿಕೆಟ್ ಚೆಲ್ಲಿದರು. 32 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಭೋಜ್‌ಪುರಿ ದಬಾಂಗ್ಸ್‌ಗೆ ಅನ್ಶುಮನ್ ಆಸರೆಯಾದರು. ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಲು ಏಕಾಂಗಿಯಾಗಿ ಹೋರಾಡಿದರು. 17 ಬಾಲ್‌ಗಳಲ್ಲಿ ತಮ್ಮ ಅರ್ಧ ಶತಕವನ್ನು ಪೂರೈಸಿದ ಅನ್ಶುಮನ್ 27 ಬಾಲ್‌ಗಳಲ್ಲಿ 82 ರನ್ ಗಳಿಸಿ ಅಜೇಯರಾಗಿ ಉಳಿದರು. ಅನ್ಶುಮನ್ ಅವರ ಈ ಆಟದಿಂದ ಭೋಜ್‌ಪುರಿ ತಂಡ 10 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 151 ರನ್‌ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಮೂಲಕ 16 ರನ್‌ಗಳಿಂದ ಸೋಲನ್ನು ಅನುಭವಿಸಿತು. ಆಡಿದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದ ಭೋಜ್‌ಪುರಿ ದಬಾಂಗ್ಸ್ ತಂಡ ಟೂರ್ನಿಯಿಂದ ಕೂಡ ಹೊರ ಬಿತ್ತು.

More from Filmibeat

Read more about: ccl 2025 filmibeat news cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X