twitter
    For Quick Alerts
    ALLOW NOTIFICATIONS  
    For Daily Alerts

    ವಂಚನೆ ಪ್ರಕರಣ: ನಟ ಶರತ್ ಕುಮಾರ್ ನಟಿ ರಾಧಿಕಾಗೆ ಜೈಲು ಶಿಕ್ಷೆ

    |

    ತಮಿಳು, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಪ್ರಮುಖ ನಟ ಶರತ್ ಕುಮಾರ್ ಹಾಗೂ ಅವರ ಪತ್ನಿ, ನಟಿ ರಾಧಿಕಾ ಅವರಿಗೆ ಚೆನ್ನೈ ವಿಶೇಷ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

    ಶರತ್ ಕುಮಾರ್ ಹಾಗೂ ನಟಿ ರಾಧಿಕಾ ದಂಪತಿಗಳ ಮೇಲೆ ಕೆಲವಾರು ಕೇಸುಗಳಿದ್ದವು. ಇದೀಗ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ವಿಶೇಷ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸಾರಥಿ, ರಾಜಕುಮಾರ, ಸೀತಾರಾಮ ಕಲ್ಯಾಣ, ಸಂತೆಯಲ್ಲಿ ನಿಂತ ಕಬೀರ ಕನ್ನಡ ಸಿನಿಮಾಗಳಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ನಟಿ ರಾಧಿಕಾ ಅವರು ವಿಷ್ಣುವರ್ಧನ್, ದ್ವಾರಕೀಶ್ ಸೇರಿ ಹಲವರ ಜೊತೆ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

    ಶರತ್ ಕುಮಾರ್, ರಾಧಿಕಾ ಹಾಗೂ ಲಿಸ್ಟಿನ್ ಸ್ಪೀಫನ್ ಮೂವರೂ ಪಾಲುದಾರರಾಗಿರುವ 'ಮ್ಯಾಜಿಕ್ ಫ್ರೇಮ್ಸ್ ಪ್ರೊಡಕ್ಷನ್ ಸಂಸ್ಥೆಯ ವಿರುದ್ಧ ರ್ಯಾಡಿಯೆನ್ಸ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಹಣ ವಂಚನೆ ಹಾಗೂ ಚೆಕ್ ಬೌನ್ಸ್ ಪ್ರಕರಣಗಳನ್ನು ದಾಖಲಿಸಿತ್ತು.

    ಏಳು ಚೆಕ್‌ ನೀಡಿದ್ದ ಶರತ್ ಕುಮಾರ್-ರಾಧಿಕಾ

    ಏಳು ಚೆಕ್‌ ನೀಡಿದ್ದ ಶರತ್ ಕುಮಾರ್-ರಾಧಿಕಾ

    ರ್ಯಾಡಿಯೆಂಟ್‌ ಮೀಡಿಯಾ ದೂರಿನ ಪ್ರಕಾರ, ಪಾಲುದಾರರಾದ ಶರತ್ ಕುಮಾರ್, ರಾಧಿಕಾ, ಲಿಸ್ಟಿನ್ ಅವರು ರ್ಯಾಡಿಯೆಂಟ್‌ ಸಂಸ್ಥೆಯಿಂದ 1.50 ಕೋಟಿ ರೂಪಾಯಿ ಹಣ ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತೆಯಾಗಿ ಎರಡು ಚೆಕ್‌ಗಳನ್ನು ನೀಡಿದ್ದರು. ನಂತರ ಶರತ್ ಕುಮಾರ್ 50 ಲಕ್ಷ ರೂಪಾಯಿ ಕೈಸಾಲ ಪಡೆದು ಹತ್ತು ಲಕ್ಷ ಮೌಲ್ಯದ ಐದು ಚೆಕ್‌ಗಳನ್ನು ಭದ್ರತೆಯಾಗಿ ನೀಡಿದ್ದರು. ಆದರೆ ಚೆಕ್‌ಗಳನ್ನು ನಗದು ಮಾಡಿಕೊಳ್ಳಲು ಬ್ಯಾಂಕಿಗೆ ಸಲ್ಲಿಸಿದಾಗ ಏಳೂ ಚೆಕ್‌ಗಳು ಬೌನ್ಸ್ ಆಗಿವೆ. ಹಾಗಾಗಿ ಶರತ್ ಕುಮಾರ್, ರಾಧಿಕಾ ಹಾಗೂ ಲಿಸ್ಟಿನ್ ವಿರುದ್ಧ ಸಿನಿಮಾ ಫೈನ್ಯಾನ್ಸ್ ಸಂಸ್ಥೆಯಾದ ರ್ಯಾರಿಯೆನ್ಸ್ ಮೀಡಿಯಾ ಸಂಸ್ಥೆ ದೂರು ದಾಖಲಿಸಿತ್ತು.

    ಸಿನಿಮಾ ನಿರ್ಮಾಣಕ್ಕೆ ಪಡೆದಿದ್ದ ಸಾಲ

    ಸಿನಿಮಾ ನಿರ್ಮಾಣಕ್ಕೆ ಪಡೆದಿದ್ದ ಸಾಲ

    2015 ರಲ್ಲಿ ಶರತ್ ಕುಮಾರ್, ರಾಧಿಕಾ ಒಡೆತನದ 'ಮ್ಯಾಜಿಕ್ ಫ್ರೇಮ್ಸ್' ಸಂಸ್ಥೆಯಿಂದ 'ಇದು ಎನ್ನ ಮಾಯಂ' ಹೆಸರಿನ ತಮಿಳು ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ಎ.ಎಲ್.ವಿಜಯ್ ನಿರ್ದೇಶಿಸಿದ್ದರು. ಸಿನಿಮಾದಲ್ಲಿ ಕೀರ್ತಿ ಸುರೇಶ್, ನಟ ವಿಕ್ರಂ ಪ್ರಭು, ಕನ್ನಡದ ನಟಿ ಕಾವ್ಯಾ ಶೆಟ್ಟಿ, ನಾಸರ್ ಅವರುಗಳು ನಟಿಸಿದ್ದರು. ಈ ಸಿನಿಮಾ ನಿರ್ಮಾಣಕ್ಕಾಗಿಯೇ ಶರತ್ ಕುಮಾರ್ ರ್ಯಾಡಿಯೆಂಟ್ ಸಂಸ್ಥೆಯಿಂದ 2 ಕೋಟಿ ಹಣ ಸಾಲ ಪಡೆದಿದ್ದರು.

    ಹೈಕೋರ್ಟ್ ಮೆಟ್ಟಿಲೇರಿದ್ದ ಶರತ್ ಕುಮಾರ್-ರಾಧಿಕಾ

    ಹೈಕೋರ್ಟ್ ಮೆಟ್ಟಿಲೇರಿದ್ದ ಶರತ್ ಕುಮಾರ್-ರಾಧಿಕಾ

    ಈ ಮೊದಲು ಮೇ 2019 ರಲ್ಲಿ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮೆಟ್ಟಿಲೇರಿದ್ದ ಶರತ್ ಕುಮಾರ್, ರಾಧಿಕಾ, ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಮನವಿ ಮಾಡಿದ್ದರು. ಆದರೆ ಅರ್ಜಿಯನ್ನು ತಳ್ಳಿಹಾಕಿದ ಹೈಕೋರ್ಟ್, ಈ ಪ್ರಕರಣವನ್ನು ಶೀಘ್ರವಾಗಿ ಇತ್ಯರ್ಥಗೊಳಿಸುವಂತೆ ಕೆಳನ್ಯಾಯಾಲಯಕ್ಕೆ ಸೂಚಿಸಿತ್ತು.

    Recommended Video

    ಕಾಲು ಲಕ್ಷದ ಮಾಸ್ಕ್ ಹಾಕಿರೋ ಸೆಲ್ಫೀ ಫೋಟೋ ಶೇರ್ ಮಾಡಿದ ನಟಿ ಕರೀನಾ ಕಪೂರ್ | Filmibeat Kannada
    ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ

    ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ

    ಆ ನಂತರ ಈ ಪ್ರಕರಣವು ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗಿ ಅಲ್ಲಿ ವಿಚಾರಣೆ ನಡೆದು ಇದೀಗ ಶರತ್ ಕುಮಾರ್, ರಾಧಿಕಾ ಅವರುಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡಿಕೊಳ್ಳುವುದಾಗಿ ಶರತ್ ಕುಮಾರ್ ಅರ್ಜಿ ಸಲ್ಲಿಸಿದ್ದು, ಅರ್ಜಿ ಮಾನ್ಯವಾಗುತ್ತದೆಯೇ ಇಲ್ಲವೆ ನೋಡಬೇಕಿದೆ.

    English summary
    Famous actor Sharathkumar and his wife and actress Raadhika were sentenced to one year imprisonment in a cheque bounce case.
    Wednesday, April 7, 2021, 16:17
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X