For Quick Alerts
  ALLOW NOTIFICATIONS  
  For Daily Alerts

  ಇಂಟರ್ ನೆಟ್ ನಲ್ಲಿ ಸಂಚಲನ ಸೃಷ್ಟಿಸುತ್ತಿರುವ ಈ ಹುಡುಗಿ ಯಾರು?

  |

  ಸಾಮಾಜಿಕ ಜಾಲತಾಣದ ಮೂಲಕ ಯಾರು ಬೇಕಾದರು ಸ್ಟಾರ್ ಗಳಾಗಬಹುದು. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ಸಖತ್ ಪವರ್ ಫುಲ್. ರಾತ್ರೋರಾತ್ರಿ ಸ್ಟಾರ್ ಆದರು ಆನೇಕರಿದ್ದಾರೆ. ಸದ್ಯ ಇಂಟರ್ ನೆಟ್ ನಲ್ಲಿ ಈ ಹುಡುಗಿಯ ಫೋಟೋ ವೈರಲ್ ಆಗಿದೆ. ಯಾರಿಕೆ ಅಂತ ಅನೇಕರು ತಲೆಕೆಸಿಕೊಂಡಿದ್ದಾರೆ.

  ಅಂದ್ಹಾಗೆ ಈಗ ಇಂಟರ್ ಮೂಲಕ ಸ್ಟಾರ್ ಆದ ಸುಂದರಿ ಅಲ್ಲ. ಈಕೆ ಖ್ಯಾತ ಬಾಲ ನಟಿ ಬೇಬಿ ಸಾರಾ. ಬೇಬಿ ಸಾರಾ ಈ ಫೋಟೋ ನೋಡಿದರೆ ಯಾರು ಅಂತ ತಕ್ಷಣಕ್ಕೆ ಗೊತ್ತಾಗಲಿಕ್ಕಿಲ್ಲ. ಆದರೆ ತಮಿಳಿನ ಸೂಪರ್ ಹಿಟ್ 'ದೇವ ತಿರುಮಗಲ್' ಚಿತ್ರದಲ್ಲಿ ನಟ ವಿಕ್ರಮ್ ಮಗಳಾಗಿ ಕಾಣಿಸಿಕೊಂಡಿದ್ದ ಬಾಲನಟಿ ಎಂದರೆ ಎಲ್ಲರಿಗೂ ಗೊತ್ತಾಗುತ್ತೆ.

  ಬಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ 'ಅರ್ಜುನ್ ರೆಡ್ಡಿ' ನಟಿ ಶಾಲಿನಿಬಾಲಿವುಡ್ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾದ 'ಅರ್ಜುನ್ ರೆಡ್ಡಿ' ನಟಿ ಶಾಲಿನಿ

  'ದೇವ ತಿರುಮಗಲ್' ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ಸಾರಾ ತಮಿಳಿನ ಮೊದಲ ಚಿತ್ರದಲ್ಲಿಯೆ ಚಿತ್ರಾಭಿಮಾನಿಗಳ ಮನಗೆದ್ದಿರು. ಸಾರಾ ಮುಗ್ದ ಅಭಿನಯನಕ್ಕೆ ಚಿತ್ರಪ್ರಿಯರ ಕಣ್ಣಂಚು ಒದ್ದೆಯಾಗಿತ್ತು. ದೇವ ತಿರುಮಗಲ್ ಸಾರಾ ಅಭಿನಯದ ತಮಿಳು ಸಿನಿಮಾ. ಚಿತ್ರದಲ್ಲಿ ವಿಕ್ರಮ್ ಮಾನಸಿಕ ಅಸ್ವಸ್ಥ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಸಾರಾ ಮೂಲತಹ ಮಹಾರಾಷ್ಟ್ರದವರು. ಆದರೆ ಬಾಲನಟಿಯಾಗಿ ಗುರುತಿಸಿಕೊಂಡಿದ್ದು ತಮಿಳು ಚಿತ್ರರಂಗದಿಂದ. ತಮಿಳು ಸೇರಿದಂತೆ ಬಾಲಿವುಡ್ ಸಿನಿಮಾಗಳಲ್ಲಿಯೂ ಮಿಂಚಿದ್ದಾರೆ. 6ನೇ ವರ್ಷಕ್ಕೆ ಸಿನಿಮಾ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಬಾಲಿವುಡ್ ನ 404 ಸಿನಿಮಾದ ಮೂಲಕ ಬಾಲನಟಿಯಾಗಿ ಮಿಂಚುತ್ತಾರೆ. ಆದರೆ ಸಾರಾಗೆ ಖ್ಯಾತಿ ತಂದು ಕೊಟ್ಟಿದ್ದು ದೇವ ತಿರುಮಗಲ್ ಸಿನಿಮಾ.

  'ದೇವ ತಿರುಮಗಲ್' ಸಿನಿಮಾ ನಂತರ ಸಾರಾ ಸಾಕಷ್ಟು ಜಾಹಿರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳು ಸೇರಿದಂತೆ ತೆಲುಗು, ಮಲಯಾಳಂ ಸಿನಿಮಾರಂಗದಲ್ಲೂ ಕಾಣಿಸಿಕೊಂಡಿದ್ದಾರೆ. ಬೇಬಿ ಸಾರಾಗೆ ಈಗ 14 ವರ್ಷ. ವಿದ್ಯಾಭ್ಯಾಸದ ಜೊತೆಗೆ ಸಿನಿಮಾಗಳಲ್ಲಿಯೂ ಅಭಿನಯಿಸುತ್ತಿದ್ದಾರೆ.

  English summary
  Child Actress Sara Arjun photo viral in social media. She is famous in Vikram starrer deiva thirumagal film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X