ರಾಘವ ಲಾರೆನ್ಸ್ ಅನಾಥಾಶ್ರಮದ ಮಕ್ಕಳಿಗೆ ಕೊರೊನಾ ಪಾಸಿಟಿವ್!
ನಟ, ನಿರ್ದೇಶಕ, ನೃತ್ಯ ನಿರ್ದೇಶಕ ರಾಘವ ಲಾರೆನ್ಸ್ ಸಾಮಾಜಿಕ ಕಾರ್ಯದಲ್ಲಿ ಸದಾ ಮುಂದು. ಅನಾಥರು, ಅಂಗವಿಕರು, ತೃತೀಯ ಲಿಂಗಿಗಳಿಗಾಗಿ ಸಾಕಷ್ಟು ಸೇವಾ ಕಾರ್ಯ ರಾಘವ ಲಾರೆನ್ಸ್ ಮಾಡಿದ್ದಾರೆ, ಮಾಡುತ್ತಿದ್ದಾರೆ.
Recommended Video
ರಾಘವ ಲಾರೆನ್ಸ್ ತಾವು ದುಡಿದ ಹಣದಲ್ಲಿ ಕೆಲವು ಅನಾಥಾಶ್ರಮಗಳನ್ನು ಕಟ್ಟಿ, ಅನಾಥ ಮಕ್ಕಳಿಗೆ ಬದುಕು ಕಲ್ಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಆದರೆ ದುರಾದೃಷ್ಟಕ್ಕೆ ರಾಘವ ಲಾರೆನ್ಸ್ ನಡೆಸುತ್ತಿರುವ ಅನಾಥಾಶ್ರಮದ ಆಶ್ರಿತ ಅನಾಥ ಮಕ್ಕಳಿಗೆ ಕೊರೊನಾ ಪಾಸಿಟಿವ್ ಆಗಿಬಿಟ್ಟಿದೆ.
ರಾಘವ ಲಾರೆನ್ಸ್ ಟ್ರಸ್ಟ್ ಒಂದನ್ನು ನಡೆಸುತ್ತಿದ್ದು, ಅದರಡಿ ಕೆಲವು ಅನಾಥಾಶ್ರಮಗಳನ್ನು ಸಹ ನಿರ್ಮಿಸಿದ್ದಾರೆ. ಚೆನ್ನೈನ ಒಂದು ಅನಾಥಶ್ರಮದಲ್ಲಿರುವ ಕೆಲವು ಮಕ್ಕಳಿಗೆ ಹಾಗೂ ಅಲ್ಲಿನ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಆಗಿದೆ.

ರಾಘವ ಲಾರೆನ್ಸ್ ಅಧಿಕೃತ ಹೇಳಿಕೆ
ಈ ಬಗ್ಗೆ ರಾಘವ ಲಾರೆನ್ಸ್ ಅಧಿಕೃತ ಹೇಳಿಕೆ ನೀಡಿದ್ದು, 'ನನ್ನ ಅನಾಥಾಶ್ರಮದ 18 ಮಕ್ಕಳಿಗೆ ಕೊರೊನಾ ಧೃಡವಾಗಿದೆ. ಜೊತೆಗೆ ಮೂವರು ಸಿಬ್ಬಂದಿಗೂ ಪಾಸಿಟಿವ್ ಆಗಿದೆ, ಅದರಲ್ಲಿ ಇಬ್ಬರು ಅಂಗವಿಕಲ ಸಿಬ್ಬಂದಿ' ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

21 ಮಂದಿಗೆ ಕೊರೊನಾ ಪಾಸಿಟಿವ್
ಕಳೆದ ವಾರ ಕೆಲವು ಮಕ್ಕಳಿಗೆ ಕೊರೊನಾ ಲಕ್ಷಣಗಳು ಕಂಡು ಬಂದವು. ನಂತರ ವೈದ್ಯರನ್ನು ಸಂಪರ್ಕಿಸಿ ಪರೀಕ್ಷೆ ನಡೆಸಲಾಯಿತು. ಆಗ 21 ಮಂದಿಗೆ ಕೊರೊನಾ ಇರುವುದು ಗೊತ್ತಾಯಿತು ಎಂದು ಲಾರೆನ್ಸ್ ಹೇಳಿದ್ದಾರೆ.

ವೈದ್ಯರೊಂದಿಗೆ ಸಂಪರ್ಕದಲ್ಲಿದ್ದೇನೆ: ಲಾರೆನ್ಸ್
ವೈದ್ಯರ ಬಳಿ ಸತತ ಸಂಪರ್ಕದಲ್ಲಿದ್ದು, ಎಲ್ಲಾ ಮಕ್ಕಳು ಮತ್ತು ಸಿಬ್ಬಂದಿ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆಂದು ವೈದ್ಯರು ಹೇಳಿದ್ದಾರೆ ಎಂದು ರಾಘವ ಲಾರೆನ್ಸ್ ಹೇಳಿದ್ದಾರೆ. ನಾನು ಮಾಡಿದ ಸೇವೆಯೇ ನನ್ನ ಮಕ್ಕಳನ್ನು ಬದುಕಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ಮೂರು ಕೋಟಿ ದೇಣಿಗೆ ನೀಡಿದ್ದರು ಲಾರೆನ್ಸ್
ಕೊರೊನಾ ವಿರುದ್ಧ ಹೋರಾಟಕ್ಕೆ ರಾಘವ ಲಾರೆನ್ಸ್ ಮೂರು ಕೋಟಿ ಹಣ ದೇಣಿಗೆ ನೀಡಿದ್ದರು. ಅದರ ಜೊತೆಗೆ ಇನ್ನೂ ಹಲವು ರೀತಿಯ ಸಹಾಯ ಮಾಡುತ್ತಿದ್ದರು. ಆದರೆ ಈಗ ಅವರ ಅನಾಥಾಶ್ರಮದ ಮಕ್ಕಳಿಗೇ ಕೊರೊನಾ ಪಾಸಿಟಿವ್ ಆಗಿದೆ.


Click it and Unblock the Notifications











