For Quick Alerts
  ALLOW NOTIFICATIONS  
  For Daily Alerts

  ಟಿ.ಆರ್.ಪಿ ಎಂಬ ಮಹಾ ಯುದ್ಧದಲ್ಲಿ ಗೆದ್ದದ್ದು ಚಿರಂಜೀವಿ, ಸೋತದ್ದು ಪ್ರಭಾಸ್.!

  |

  ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಕಳೆದ ಅಕ್ಟೋಬರ್ ತಿಂಗಳಲ್ಲಿ ತೆರೆಗೆ ಬಂದಿತ್ತು. ರಾಯಲಸೀಮಾದ ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡಾ ನರಸಿಂಹ ರೆಡ್ಡಿ ಜೀವನಚರಿತ್ರೆ ಕುರಿತಾದ ಈ ಚಿತ್ರ ತೆಲುಗು, ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿತ್ತು.

  ಬಿಗ್ ಸ್ಕ್ರೀನ್ ಮೇಲೆ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಹೇಳಿಕೊಳ್ಳುವಂಥ ಕಮಾಲ್ ಮಾಡಲಿಲ್ಲ. 300 ಕೋಟಿ ರೂಪಾಯಿ ಬಜೆಟ್ ನಲ್ಲಿ ತಯಾರಾಗಿದ್ದ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಸಿದ್ದು 230 ಕೋಟಿ ರೂಪಾಯಿ ಮಾತ್ರ.

  ಥಿಯೇಟರ್ ಗಳಲ್ಲಿ 'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಲಭ್ಯವಾಗಿತ್ತು. ಆದ್ರೆ, ಕಿರುತೆರೆ ಲೋಕದಲ್ಲಿ ಮಾತ್ರ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ದಾಖಲೆ ಬರೆದಿದೆ. ಟಿ.ಆರ್.ಪಿ ಎಂಬ ಮಹಾಯುದ್ಧದಲ್ಲಿ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಗೆದ್ದಿದೆ. ಪ್ರಭಾಸ್ ಅಭಿನಯದ 'ಬಾಹುಬಲಿ-2' ಸೋತಿದೆ. ಮುಂದೆ ಓದಿರಿ...

  ಕಿರುತೆರೆಯಲ್ಲಿ ಪ್ರಸಾರವಾಗಿದ್ದ 'ಸೈರಾ ನರಸಿಂಹ ರೆಡ್ಡಿ' ಚಿತ್ರ

  ಕಿರುತೆರೆಯಲ್ಲಿ ಪ್ರಸಾರವಾಗಿದ್ದ 'ಸೈರಾ ನರಸಿಂಹ ರೆಡ್ಡಿ' ಚಿತ್ರ

  ಗಾಂಧಿ ಜಯಂತಿ ಪ್ರಯುಕ್ತ ಅದ್ಧೂರಿಯಾಗಿ ಬಿಡುಗಡೆ ಆಗಿದ್ದ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ತಮಿಳು ಡಬ್ಡ್ ವರ್ಷನ್ ಡಿಸೆಂಬರ್ 1 ರಂದು ಸನ್ ಟಿವಿಯಲ್ಲಿ ಪ್ರಸಾರವಾಗಿತ್ತು. ಅಚ್ಚರಿ ಅಂದ್ರೆ, 'ಸೈರಾ ನರಸಿಂಹ ರೆಡ್ಡಿ' ಚಿತ್ರದ ತಮಿಳು ಡಬ್ಡ್ ವರ್ಷನ್ ಟಿ.ಆರ್.ಪಿ ಪಟ್ಟಿಯಲ್ಲಿ ಸೆನ್ಸೇಷನ್ ಸೃಷ್ಟಿಸಿದೆ.

  ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'ಪ್ರಭಾಸ್ ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದ 'ಸೈರಾ ನರಸಿಂಹ ರೆಡ್ಡಿ'

  'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಸಿಕ್ಕ ಟಿ.ಆರ್.ಪಿ ಎಷ್ಟು.?

  'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಸಿಕ್ಕ ಟಿ.ಆರ್.ಪಿ ಎಷ್ಟು.?

  ಮೆಗಾ ಸ್ಟಾರ್ ಚಿರಂಜೀವಿ, ನಯನತಾರಾ, ತಮನ್ನಾ, ಸುದೀಪ್, ಅಮಿತಾಬ್ ಬಚ್ಚನ್, ಅನುಷ್ಕಾ ಶೆಟ್ಟಿ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ 'ಸೈರಾ ನರಸಿಂಹ ರೆಡ್ಡಿ' ಚಿತ್ರದ ತಮಿಳು ಅವತರಣಿಕೆಯ ಟಿವಿ ಪ್ರೀಮಿಯರ್ ಗೆ 15.44 ಟಿ.ಆರ್.ಪಿ ಸಿಕ್ಕಿದೆ.

  ಹಿಂದಿಯಲ್ಲಿ 'ಸೈರಾ' ಸೋತಿದ್ದು ಯಾಕೆ ಎಂಬ ಕಾರಣ ಬಿಚ್ಚಿಟ್ಟ ಸುದೀಪ್ಹಿಂದಿಯಲ್ಲಿ 'ಸೈರಾ' ಸೋತಿದ್ದು ಯಾಕೆ ಎಂಬ ಕಾರಣ ಬಿಚ್ಚಿಟ್ಟ ಸುದೀಪ್

  'ಬಾಹುಬಲಿ' ಚಿತ್ರವನ್ನು ಹಿಂದಿಕ್ಕಿದ 'ಸೈರಾ'

  'ಬಾಹುಬಲಿ' ಚಿತ್ರವನ್ನು ಹಿಂದಿಕ್ಕಿದ 'ಸೈರಾ'

  ತಮಿಳಿಗೆ ಡಬ್ ಆಗಿರುವ ಜನಪ್ರಿಯ ತೆಲುಗು ಚಿತ್ರಗಳ ಟಿ.ಆರ್.ಪಿ ರೇಟಿಂಗ್ ಪಟ್ಟಿಯಲ್ಲಿ ಎಸ್.ಎಸ್.ರಾಜಮೌಳಿ ನಿರ್ದೇಶನದ ಪ್ರಭಾಸ್ ಅಭಿನಯದ 'ಬಾಹುಬಲಿ-2' ಚಿತ್ರವನ್ನ ಚಿರಂಜೀವಿ ಅಭಿನಯದ 'ಸೈರಾ ನರಸಿಂಹ ರೆಡ್ಡಿ' ಚಿತ್ರ ಹಿಂದಿಕ್ಕಿದೆ. ದಾಖಲೆಗಳ ಸರಮಾಲೆಯನ್ನೇ ಸೃಷ್ಟಿಸಿದ 'ಬಾಹುಬಲಿ' ಚಿತ್ರವನ್ನ ಟಿ.ಆರ್.ಪಿ ರೇಸ್ ನಲ್ಲಿ 'ಸೈರಾ ನರಸಿಂಹ ರೆಡ್ಡಿ' ಕೆಳಗೆ ತಳ್ಳಿದೆ.

  'ಬಾಹುಬಲಿ-2'ಗೆ ಸಿಕ್ಕಿದ್ದ ಟಿ.ಆರ್.ಪಿ ಎಷ್ಟು.?

  'ಬಾಹುಬಲಿ-2'ಗೆ ಸಿಕ್ಕಿದ್ದ ಟಿ.ಆರ್.ಪಿ ಎಷ್ಟು.?

  'ಬಾಹುಬಲಿ-2' ತಮಿಳು ಡಬ್ಡ್ ವರ್ಷನ್ ಗೆ 10.33 ಟಿ.ಆರ್.ಪಿ ಸಿಕ್ಕಿತ್ತು. ಈಗ 15.44 ಟಿ.ಆರ್.ಪಿ ಪಡೆಯುವ ಮೂಲಕ 'ಸೈರಾ ನರಸಿಂಹ ರೆಡ್ಡಿ' ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದೆ.

  English summary
  Mega Star Chiranjeevi starrer Sye Raa Narasimha Reddy movie tamil dubbed version gets Highest TRP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X