'KGF' ನಾಯಕಿ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥದ ಫೋಟೋಗಳು ವೈರಲ್!
ಕೆಜಿಎಫ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಬೆಳೆದಿದ್ದಾರೆ. ಸದ್ಯ ಕೆಜಿಎಫ್-2ನಲ್ಲಿ ಶ್ರೀನಿಧಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಸಿನಿಮಾ ಬಿಟ್ಟರೆ ಶ್ರೀನಿಧಿ ಬೇರೆ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ.
Recommended Video
ಇತ್ತೀಚಿಗೆ ಶ್ರೀನಿಧಿ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಇದೀಗ ನಿಶ್ಚಿತಾರ್ಥ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಂದರೆ ಶ್ರೀನಿಧಿ ಶೆಟ್ಟಿ ಮದುವೆನಾ ಅಂತ ಅಚ್ಚರಿ ಅನಿಸಿದರು ನಿಜ. ಆದರೆ ಅವರು ಮದುವೆ ಆಗುತ್ತಿರುವುದು ರಿಯಲ್ ಆಗಿ ಅಲ್ಲ ರೀಲ್ ನಲ್ಲಿ. ಮುಂದೆ ಓದಿ...

ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು
ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್ ಸಿನಿಮಾವಲ್ಲದೆ ತಮಿಳು ಚಿತ್ರರಂಗಲ್ಲಿಯೂ ಬ್ಯುಸಿಯಾಗಿದ್ದಾರೆ. ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅಭಿನಯದ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹಾಡೊಂದು ರಿಲೀಸ್ ಗೆ ಸಿದ್ಧವಾಗಿತ್ತು. ಹಾಡಿನ ರಿಲೀಸ್ ಗೆ ಸಿನಿಮಾತಂಡ ಆಮಂತ್ರಣ ಪತ್ರಿಕೆ ಮಾಡಿತ್ತು. ಇದೀಗ ಹಾಡಿನ ಒಂದಿಷ್ಟು ಫೋಟೋಗಳನ್ನು ಶ್ರೀನಿಧಿ ಶೆಟ್ಟಿ ಶೇರ್ ಮಾಡಿದ್ದಾರೆ.

ನಿಶ್ಚಿತಾರ್ಥ ಫೋಟೋಗಳು
ಈ ಹಾಡು ನಾಯಕ ಮತ್ತು ನಾಯಕಿಯ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ್ದಾಗೆ. ಈ ಹಾಡಿನ ಒಂದಿಷ್ಟು ಸುಂದರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಸುಂದರ ಫೋಟೋಗಳಿಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ನಿರ್ದೇಶನ
ತುಂಬಿ ತುಳ್ಳಾಲ್ ಸಾಹಿತ್ಯ ವಿರುವ ಈ ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಾಕಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಲಾಕ್ ಡೌನ್ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಿದೆ. ಮತ್ತೆ ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭಿಸಲು ಸಿದ್ಧವಾಗಿದೆ ಸಿನಿಮಾತಂಡ.

ಕೆಜಿಎಫ್-2 ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ
ನಟಿ ಶ್ರೀನಿಧಿ ಶೆಟ್ಟಿ ಕನ್ನಡದಲ್ಲಿ ಸದ್ಯ ಕೆಜಿಎಫ್-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸುರುವ ಶ್ರೀನಿಧಿ ಶೆಟ್ಟಿ ಕೊನೆಯ ಹಂತದ ಚಿತ್ರೀಕರಣ ಬಾಕಿಇದೆ. ಕನ್ನಡದಲ್ಲಿ ಕೆಜಿಎಫ್ ಸಿನಿಮಾ ಬಿಟ್ಟರೆ ಬೇರೆ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಕೆಜಿಎಫ್ ಬಳಿಕ ಶ್ರೀನಿಧಿ ಕನ್ನಡ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಾಗಿದೆ.


Click it and Unblock the Notifications











