For Quick Alerts
  ALLOW NOTIFICATIONS  
  For Daily Alerts

  ಕೆಲಸದಾಕೆಯ ಮಗನ ಮದುವೆಗೆ ಹಾಜರಾದ ವಿಕ್ರಂ: ಭೇಷ್ ಎಂದ ನೆಟ್ಟಿಗರು

  |

  ಸಿನಿಮಾ ತಾರೆಯರು ತಮ್ಮ ಅನುಕೂಲಕ್ಕೆ ಹಲವು ಕೆಲಸದವರನ್ನು ನೇಮಿಸಿಕೊಂಡಿರುತ್ತಾರೆ. ತಾರೆಯರ ಬಾಡಿಗಾರ್ಡ್, ಡ್ರೈವರ್‌ಗಳು, ಮನೆಗೆಲಸದವರು, ಅಡುಗೆಯವರು ಹೀಗೆ ಅನೇಕರನ್ನು ತಮ್ಮ ಅನುಕೂಲಕ್ಕೆಂದು ಸೆಲೆಬ್ರಿಟಿಗಳು ನೇಮಿಸಿಕೊಂಡಿರುತ್ತಾರೆ.

  ಆದರೆ ಕೆಲವು ಸೆಲೆಬ್ರಿಟಿಗಳು ತಮ್ಮ ಮನೆಯ ಕೆಲಸದವರನ್ನು ತಮ್ಮದೇ ಕುಟುಂಬದವರನ್ನಾಗಿ ಕಾಣುತ್ತಾರೆ. ಅವರಲ್ಲಿ ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಒಬ್ಬರು.

  ಚಿಯಾನ್ ವಿಕ್ರಂ ಇತ್ತೀಚೆಗೆ ತಮ್ಮ ಮನೆಯ ಕೆಲಸದಾಕೆಯ ಮಗನ ಮದುವೆಗೆ ಹಾಜರಾಗಿದ್ದಾರೆ. ವಿಕ್ರಂ ಸರಳ ಉಡುಪಿನಲ್ಲಿ ಮದುವೆಗೆ ಬಂದು ನೂತನ ವಧು-ವರರಿಗೆ ಆಶೀರ್ವಾದ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  ವಿಕ್ರಂ ಮನೆಯಲ್ಲಿ ಒಲಿಮಾರನ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ಅವರು ತೀರಿಕೊಂಡರು. ಒಲಿಮಾರನ್ ಪತ್ನಿ ಮೇರಿ ಸಹ ವಿಕ್ರಂ ಮನೆಯಲ್ಲಿ ಹಲವು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದರು. ಕೆಲವು ದಿನಗಳ ಹಿಂದೆ ಮೇರಿಯ ಪುತ್ರ ದೀಪಕ್, ವರ್ಷಿಣಿ ಜೊತೆ ನಡೆದಿದ್ದು, ಈ ವಿವಾಹ ಸಮಾರಂಭಕ್ಕೆ ವಿಕ್ರಂ ಆಗಮಿಸಿದ್ದರು.

  ಸರಳವಾಗಿ ಬಳಿ ಶರ್ಟ್‌ ಹಾಗೂ ಪಂಚೆ ಧರಿಸಿ ವಿಕ್ರಂ ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಧು-ವರರಿಗೆ ಆಶೀರ್ವಾದ ಮಾಡಿದ್ದಾರೆ. ಸಮಾರಂಭದಲ್ಲಿ ವಿಕ್ರಂರ ಅಭಿಮಾನಿ ಸಂಘದ ಅಧ್ಯಕ್ಷ ಸಹ ಭಾಗಿಯಾಗಿದ್ದರು. ಮೇರಿ ಮಗನ ಮದುವೆಯಲ್ಲಿ ಭಾಗಿಯಾಗಿರುವ ವಿಕ್ರಂರ ಚಿತ್ರಗಳು ಇದೀಗ ವೈರಲ್ ಆಗಿವೆ.

  Chiyaan Vikram Attended His Housekeepings Son Marriage

  ಸಿನಿಮಾ ವಿಷಯಕ್ಕೆ ಮರಳುವುದಾದರೆ ವಿಕ್ರಂ ನಟನೆಯ 'ಕೋಬ್ರಾ' ಸಿನಿಮಾ ಕೆಲ ವಾರಗಳ ಮುಂಚೆ ಬಿಡುಗಡೆ ಆಗಿ ಹಿಟ್ ಆಗಿದೆ. ಆ ಸಿನಿಮಾದಲ್ಲಿ ಕನ್ನಡತಿ ಶ್ರೀನಿಧಿ ಶೆಟ್ಟಿ ಸಹ ನಟಿಸಿದ್ದರು. ವಿಕ್ರಂ ನಟನೆಯ ಭಾರಿ ಬಜೆಟ್ ಸಿನಿಮಾ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಈ ತಿಂಗಳಾಂತ್ಯಕ್ಕೆ ಬಿಡುಗಡೆ ಆಗಲಿದೆ. ಮಣಿರತ್ನಂ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ವಿಕ್ರಂ ಜೊತೆಗೆ ಐಶ್ವರ್ಯಾ ರೈ, ತ್ರಿಶಾ, ಕಾರ್ತಿ, ಜಯಂ ರವಿ ಇನ್ನೂ ಹಲವರು ನಟಿಸಿದ್ದಾರೆ. ಇದರ ಜೊತೆಗೆ ಪಾ ರಂಜಿತ್ ನಿರ್ದೇಶನದ ಕೆಜಿಎಫ್ ಕುರಿತಾದ ಕತೆ ಆಧರಿಸಿದ ಸಿನಿಮಾದಲ್ಲಿ ವಿಕ್ರಂ ನಟಿಸುತ್ತಿದ್ದಾರೆ. ಅದಕ್ಕಾಗಿ ಉದ್ದನೆಯ ಗಡ್ಡ ಬಿಟ್ಟಿದ್ದಾರೆ ವಿಕ್ರಂ.

  English summary
  Chiyaan Vikram attended his housekeeping's son's marriage. Photos of Vikram blessing newly weds goes viral on social media.
  Tuesday, September 13, 2022, 9:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X