ಅಬ್ಬಬ್ಬಾ ಭಯಂಕರ, ರೋಚಕ: 'KGF' ಮೀರಿಸೋಕೆ ಬರ್ತಿರೋ ವಿಕ್ರಮ್ 'ತಂಗಲಾನ್' ಮೇಕಿಂಗ್ ನೋಡಿದ್ರಾ?

ಕನ್ನಡದ 'KGF' ಸರಣಿ ಸಿನಿಮಾ ಕಾಲ್ಪನಿಕ ಕಥೆ. ನಾವು ನಿಜವಾದ 'KGF' ಕಥೆ ಹೇಳ್ತೀವಿ ಅಂತ 'ಕಬಾಲಿ' ನಿರ್ದೇಶಕ ಪಾ ರಂಜಿತ್ ಹೇಳಿದ್ದರು. ವಿಕ್ರಮ್ ಹೀರೊ ಆಗಿ 'ತಂಗಲಾನ್' ಎನ್ನುವ ಸಿನಿಮಾ ಶುರು ಮಾಡಿದ್ದರು. ವಿಕ್ರಮ್ ಹುಟ್ಟುಹಬ್ಬದ ವಿಶೇಷವಾಗಿ ಇದೀಗ ಚಿತ್ರತಂಡ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ. ಬಹಳ ದೊಡ್ಡಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ಬರ್ತಿದೆ.

ಸದ್ಯ ವಿಕ್ರಮ್ ನಟನೆಯ 'ಪೊನ್ನಿಯಿನ್ ಸೆಲ್ವನ್'- 2 ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಇದರ ಬೆನ್ನಲ್ಲೇ 'ತಂಗಲಾನ್' ಸಿನಿಮಾ ಮೇಕಿಂಗ್ ವಿಡಿಯೋ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿಯಾನ್ ವಿಕ್ರಮ್ ಲುಕ್‌ಗಳಂತೂ ಭಯಂಕರವಾಗಿದೆ. 'ಅನ್ನಿಯನ್', 'ಐ' ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಕ್ರಮ್ ತಮ್ಮ ವಿಭಿನ್ನ ಗೆಟಪ್‌ಗಳಿಂದ ಥ್ರಿಲ್ ಕೊಡುತ್ತಾ ಬರ್ತಿದ್ದಾರೆ. ಈ ಚಿತ್ರದಲ್ಲೂ ಅಂಥದ್ದೇ ಪ್ರಯತ್ನ ಮಾಡಿದ್ದಾರೆ. ಮೇಕಿಂಗ್ ಝಲಕ್‌ನಲ್ಲಿ ಅವರ ಡೆಡಿಕೇಷನ್ ನೋಡಿದವರು ದಂಗಾಗಿದ್ದಾರೆ.

Chiyaan Vikram Birthday: Pa. Ranjith Directed Thangalaan movie Making Video Released

ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತಾ ಈ ಸಿನಿಮಾ ಮೂಡಿ ಬರ್ತಿದೆ. ಮಾಸ್, ರಗಡ್ ಲುಕ್‌ನಲ್ಲಿ ವಿಕ್ರಮ್ 'ತಂಗಲಾನ್' ಆಗಿ ದರ್ಶನ ಕೊಟ್ಟಿದ್ದಾರೆ. ಬರೀ ಮೇಕಿಂಗ್ ವಿಡಿಯೋ ಈ ರೇಂಜಿಗೆ ಇದ್ದರೆ ಸಿನಿಮಾ ಯಾವ ರೀತಿ ಇರುತ್ತೋ ಎಂದು ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ಸ್ಟುಡಿಯೋ ಗ್ರೀನ್ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡ್ತಿದೆ. ನೂರಾರು ಜನ ಕಾರ್ಮಿಕರು ಪ್ರತಿ ದಿನ ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ. KGF, ಹೊಗೆನೇಕಲ್ ಸೇರಿದಂತೆ ಹಲವೆಡೆ ಸಿನಿಮಾ ಚಿತ್ರೀಕರಣ ನಡೀತಿದೆ.

ಪ್ರಶಾಂತ್ ನೀಲ್ ನಿರ್ದೇಶನದ 'KGF'ಗಿಂತಲೂ ರಗಡ್ ಆಗಿ 'ತಂಗಲಾನ್' ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಈಗಾಗಲೇ ಮೇಕಿಂಗ್ ವಿಡಿಯೋದಲ್ಲೇ ಅದು ಗೊತ್ತಾಗುತ್ತಿದೆ. 2ಡಿ ಮಾತ್ರವಲ್ಲದೇ 3ಡಿಯಲ್ಲೂ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಬಹಳ ಹಿಂದೆಯೇ ಪಾ ರಂಜಿತ್ ಈ ಚಿತ್ರಕ್ಕಾಗಿ ಸಂಶೋಧನೆ ನಡೆಸಿದ್ದರು. ಆದರೆ ಕನ್ನಡದಲ್ಲಿ 'KGF' ಸಿನಿಮಾ ಬರೋದು ನೋಡಿ ಸುಮ್ಮನಾಗಿದ್ದರಂತೆ. ಆದರೆ ಪ್ರಶಾಂತ್ ನೀಲ್ ಚಿನ್ನದ ಗಣಿಯ ಹಿನ್ನೆಲೆಯಲ್ಲಿ ಒಂದು ಆಕ್ಷನ್ ಸಿನಿಮಾ ಮಾಡಿದ್ದರು. ಆದರೆ ರಂಜಿತ್ ಅಲ್ಲಿನ ನಿಜವಾದ ಕತೆಯನ್ನು ಹೇಳುತ್ತಾರಂತೆ.

ನಟ ವಿಕ್ರಮ್ ಚಿತ್ರದಲ್ಲಿ ಬಹುತೇಕ ಒಂದು ಸಣ್ಣ ಕಚ್ಚೆ ಉಟ್ಟು ಕಾಣಿಸಿಕೊಂಡಿದ್ದಾರೆ. ಭಿನ್ನ, ವಿಭಿನ್ನ ಲುಕ್‌ಗಳನ್ನು ಟ್ರೈ ಮಾಡಿದ್ದಾರೆ. ಪಾರ್ವತಿ ತಿರುವೋತ್, ಮಾಳವಿಕಾ ಮೋಹನನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪಶುಪತಿ, ಹರಿಕೃಷ್ಣನ್ ಅನ್ಬುದುರೈ, ಪ್ರೀತಿ ಕರಣ್, ಮುತ್ತುಕುಮಾರ್ ತಾರಾಗಣದಲ್ಲಿದ್ದಾರೆ. ಎ. ಕಿಶೋರ್ ಸಿನಿಮಾಟೋಗ್ರಫಿ, ಜಿ. ವಿ ಪ್ರಕಾಶ್ ಕುಮಾರ್ ಸಂಗೀತ 'ತಂಗಲಾನ್' ಚಿತ್ರಕ್ಕಿದೆ.

Chiyaan Vikram Birthday: Pa. Ranjith Directed Thangalaan movie Making Video Released

KGF ಚಿನ್ನದ ಗಣಿಗಳಲ್ಲಿ ದಶಕಗಳು ಹಿಂದೆ ನಿಜಕ್ಕೂ ಏನಾಗಿತ್ತು. ಚಿನ್ನ ಅಗೆದು ತೆಗೆಯುತ್ತಿದ್ದ ಅಲ್ಲಿನ ಕಾರ್ಮಿಕರ ಕಥೆ ಏನು? ಅಲ್ಲಿನ ಸಮುದಾಯಗಳ ನಡುವಿನ ಸಂಘರ್ಷಗಳು ಎಂಥದ್ದು ಅಲ್ಲಿನ ಪ್ರಾದೇಶಿಕ ರಾಜಕೀಯ ವಿಷಯಗಳ ಹಿನ್ನೆಲೆಯಲ್ಲಿ 'ತಂಗಲಾನ್' ಕಥೆಯನ್ನು ಹೆಣೆಯಲಾಗಿದೆಯಂತೆ. ನಿಜಕ್ಕೂ ಕಥೆ ಚೆನ್ನಾಗಿದೆ. ಇದನ್ನು ಚೆನ್ನಾಗಿ ಮಾಡಿದರೆ ಆಸ್ಕರ್ ಪ್ರಶಸ್ತಿ ಕೂಡ ಬರುವ ಸಾಧ್ಯತೆಯಿದೆ ಎಂದು ಈ ಹಿಂದೆ ನಟ ವಿಕ್ರಮ್ ಬೆಂಗಳೂರಿನಲ್ಲಿ ಹೇಳಿದ್ದರು.

ವಿಕ್ರಮ್ ಮಾತು ಕೇಳಿದವರು ನಿಜಕ್ಕೂ ಪಾ. ರಂಜಿತ್ 'ತಂಗಲಾನ್' ಚಿತ್ರದಲ್ಲಿ ಏನು ಕಥೆ ಹೇಳುತ್ತಿದ್ದಾರೆ? ಹೇಗೆ ಹೇಳುತ್ತಿದ್ದಾರೆ? ಎನ್ನುವ ಕುತೂಹಲದಿಂದ ಕಾಯುವಂತಾಗಿದೆ. KGF ರೀತಿಯಲ್ಲೇ ಮಣ್ಣು, ಧೂಳಿನಲ್ಲೇ ದೃಶ್ಯಗಳನ್ನು ಸೆರೆಹಿಡಿಯಲಾಗುತ್ತಿದೆ. ಮುಂದಿನ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ಈ ಐತಿಹಾಸಿಕ ಹಿನ್ನೆಲೆಯ ಆಕ್ಷನ್ ಎಂಟರ್‌ಟೈನರ್ ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Chiyaan Vikram Birthday: Pa. Ranjith Directed Thangalaan movie Making Video Released. Thangalaan is set in 19th century KGF. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X