ಬೆಂಗಳೂರಿನಲ್ಲಿ ಕೋಬ್ರಾ ತಂಡದ ಜೊತೆ ಚಿಯಾನ್ ವಿಕ್ರಂ!

ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾರೆ. ದಿಢೀರ್ ಸಿಲಿಕಾನ್ ಸಿಟಿಯಲ್ಲಿ ಪ್ರತ್ಯಕ್ಷ ಆದ ಸ್ಟಾರ್ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿಯಾನ್ ವಿಕ್ರಮ್ ಬೆಂಗಳೂರಿನ ಏರ್ಪೋರ್ಟ್‌ನಿಂದ ಹೊರಬರುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿವೆ.

ಚಿಯಾನ್ ವಿಕ್ರಮ್ ವಿಭಿನ್ನ ಲುಕ್‌ನಲ್ಲಿ ಗಮನ ಸೆಳೆದಿದ್ದಾರೆ. ದಾಡಿ ಬಿಟ್ಟು, ಕ್ಯಾಪ್ ಧರಿಸಿದ್ದಾರೆ. ಬಳಿ ಟೀ ಶರ್ಟ್ ಮತ್ತು ಡೆನಿಮ್ ಕೋಟ್ ಧರಿಸಿರುವ ಚಿಯಾನ್ ವಿಕ್ರಮ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಏರ್ಪೋರ್‌ನಿಂದ ಹೊರಬರುತ್ತಿದ್ದಂತೆ ಸಾಕಷ್ಟು ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು.

ಚಿಯಾನ್ ವಿಕ್ರಮ್ ಸದ್ಯ ಬಹುನಿರೀಕ್ಷೆಯ ಕೋಬ್ರಾ ಸಿನಿಮಾದ ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಹಾಗಾಗಿ ಸಿನಿಮಾ ಪ್ರಚಾರಕ್ಕೆಂದು ಚಿಯಾನ್ ವಿಕ್ರಮ್ ಬೆಂಗಳೂರಿಗೆ ಆಗಮಿಸಿದ್ದಾರೆ. ಸೌತ್ ಸಿನಿಮಾರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾಗಳಲ್ಲಿ ಒಂದಾಗಿರುವ ಕೋಬ್ರಾ ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಗೆ ನಾಯಕಿಯಾಗಿ ಕೆಜಿಎಫ್ ಸುಂದರಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

Chiyaan Vikram in Bangalore for Cobra movie promotion

ಕೋಬ್ರಾ ಸಿನಿಮಾ ವಿಕ್ರಮ್ ನಟನೆಯ 58ನೇ ಸಿನಿಮಾ. ಈ ಸಿನಿಮಾ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಕೋಬ್ರಾ ತಂಡ ಬೆಂಗಳೂರಿಗೆ ಆಗಮಿಸಿದೆ. ಕೋಬ್ರಾ ಸಿನಿಮಾ ಕನ್ನಡಿಗರು ವಿಶೇಷವಾಗಿದೆ. ಸಿನಿಮಾದ ನಾಯಕಿ ಕನ್ನಡತಿ. ಹಾಗಾಗಿ ಕನ್ನಡಿಗರಿಗೂ ಈ ಸಿನಿಮಾ ಮೇಲೆ ವಿಶೇಷವಾದ ಪ್ರೀತಿ ಇದೆ.

Chiyaan Vikram in Bangalore for Cobra movie promotion

ಕೆಜಿಎಫ್ ಸಿನಿಮಾ ಬಳಿಕ ಶ್ರೀನಿಧಿ ನಟಿಸಿದ ಮೊದಲ ಸಿನಿಮಾ ಇದಾಗಿದೆ. ಕೆಜಿಎಫ್ ಮೊದಲ ಭಾಗ ಮುಗಿದ ಬಳಿಕ ಶ್ರೀನಿಧಿ ಕೋಬ್ರಾ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಇನ್ನು ಈ ಸಿನಿಮಾದಲ್ಲಿ ಇರ್ಫಾನ್ ಪಠಾಣ್ ಕೂಡ ನಟಿಸಿದ್ದಾರೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

More from Filmibeat

English summary
Chiyaan Vikram in Bangalore for Cobra movie promotion, know more,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X