Thangalaan Teaser: ವಿಷಸರ್ಪ ತುಂಡರಿಸಿ ಬಿಸಾಕಿದ ಚಿಯಾನ್ ವಿಕ್ರಂ!: ಮೈ ನಡುಗಿಸುವಂತಿದೆ 'ತಂಗಲಾನ್' ಟೀಸರ್

ಕೋಲಾರ ಚಿನ್ನದ ಗಣಿ ಹಿನ್ನೆಲೆಯಲ್ಲಿ ಬಂದ 'KGF' ಸರಣಿ ಸಿನಿಮಾಗಳು ಬಾಕ್ಸಾಫೀಸ್ ಶೇಕ್ ಮಾಡಿದ್ದು ಗೊತ್ತೇಯಿದೆ. ಇದೀಗ 'KGF' ಗಣಿಯ ಕುರಿತು ತಮಿಳಿನಲ್ಲಿ 'ತಂಗಲಾನ್' ಸಿನಿಮಾ ನಿರ್ಮಾಣವಾಗುತ್ತಿದೆ. ಪಾ. ರಂಜಿತ್ ನಿರ್ದೇಶನದ ಈ ಪೀರಿಯಡ್ ಡ್ರಾಮಾ ಚಿತ್ರದಲ್ಲಿ ಚಿಯಾನ್ ವಿಕ್ರಂ ಹೀರೊ ಆಗಿ ಅಬ್ಬರಿಸಿದ್ದಾರೆ.

ಪ್ರಶಾಂತ್ ನೀಲ್ 'KGF' ಚಿತ್ರದಲ್ಲಿ ಒಂದು ಕಾಲ್ಪನಿಕ ಕತೆಯನ್ನು ಹೇಳಿದ್ದರು. ಆದರೆ ಶರಮಾನಗಳ ಹಿಂದೆ 'KGF' ಚಿನ್ನದ ಗಣಿ ಕಾರ್ಮಿಕರ ನಿಜವಾದ ಪರಿಸ್ಥಿತಿ ಹೇಗಿತ್ತು? ಎನ್ನುವುದನ್ನು 'ತಂಗಲಾನ್' ಚಿತ್ರದಲ್ಲಿ ಕಟ್ಟಿಕೊಟ್ಟಿರುವುದಾಗಿ ಚಿತ್ರತಂಡ ಹೇಳಿದೆ. ಸದ್ಯ ಟೀಸರ್ ರಿಲೀಸ್ ಆಗಿ ವಿಕ್ರಂ ಆರ್ಭಟ ನೋಡಿದವರು ದಂಗಾಗಿದ್ದಾರೆ. ಸಿನಿಮಾ ಸೂಪರ್ ಹಿಟ್ ಆಗೋದು ಗ್ಯಾರೆಂಟಿ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ರಾ ರಗಡ್ ಟೀಸರ್ ತಮಿಳು ಸಿನಿರಸಿಕರ ಗಮನ ಸೆಳೆದಿದೆ.

Chiyaan Vikram Starrer Thangalaan Teaser Released

ಅಂದುಕೊಂಡ ರೀತಿಯಲ್ಲೇ 'ತಂಗಲಾನ್' ಸಿನಿಮಾ ಮೂಡಿ ಬಂದರೆ ಆಸ್ಕರ್ ಸಿಗುತ್ತದೆ ಎಂದು ಈ ಹಿಂದೆ ನಟ ವಿಕ್ರಂ ಹೇಳಿದ್ದರು. ಅಷ್ಟರಮಟ್ಟಿಗೆ ವಿಕ್ರಂ ಭರವಸೆಯಿಂದ ಇದ್ದಾರೆ ಅಂದ್ರೆ ಸಿನಿಮಾದಲ್ಲಿ ಅಂತಾದ್ದೇನಿದೆ? ಎನ್ನುವ ಕುತೂಹಲ ಮೂಡಿದೆ. ಬಹುತೇಕ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಮುಂದಿನ ವರ್ಷ ಗಣರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಪ್ರಯತ್ನ ನಡೀತಿದೆ.

ಗಣಿ ಕಾರ್ಮಿಕರನ್ನು ಬಳಸಿಕೊಂಡು ದುಷ್ಟಕೂಟವೊಂದು 'KGF'ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದಾಗ ಅಲ್ಲಿಗೆ ಬಂದ ರಾಕಿ ಏನೆಲ್ಲಾ ಮಾಡ್ದ ಎನ್ನುವ ಒಂದು ಕಾಲ್ಪನಿಕ ಕಥೆಯನ್ನು ನೀಲ್ ಕಟ್ಟಿಕೊಟ್ಟಿದ್ದರು. ಆದರೆ 'ತಂಗಲಾನ್' ಚಿತ್ರದಲ್ಲಿ 'KGF'ನಲ್ಲಿ ಚಿನ್ನ ಶೋಧಿಸಿದ್ದು, ಅಲ್ಲಿನ ಬುಡಕಟ್ಟು ಜನರನ್ನು ಬಳಸಿಕೊಂಡು ಗಣಿಗಾರಿಕೆಗೆ ಮುಂದಾಗಿದ್ದು ಬ್ರಿಟೀಷರು ಹಾಗೂ ಆ ಬುಡಕಟ್ಟು ಜನರ ನಡುವೆ ನಡೆದ ಸಂಘರ್ಷದ ಕತೆಯನ್ನು ಪಾ. ರಂಜಿತ್ ಕೊಟ್ಟಿಕೊಡುತ್ತಿದ್ದಾರೆ. ಟೈಟಲ್ ರೋಲ್‌ನಲ್ಲಿ ನಟ ಚಿಯಾನ್ ವಿಕ್ರಂ ಎಲ್ಲರ ಹುಬ್ಬೇರಿಸಿದ್ದಾರೆ. ತುಂಡು ಬಟ್ಟೆಯಲ್ಲಿ ಬಹಳ ರಗಡ್ ಆಗಿ ದರ್ಶನ ಕೊಟ್ಟಿರುವ ವಿಕ್ರಂ ಗಮನ ಸೆಳೆದಿದ್ದಾರೆ.

ಯಾವುದೇ ಡೈಲಾಗ್ ಇಲ್ಲದೇ ಬರೀ ಮಾಂಟೇಜ್ ಶಾಟ್ಸ್ ಜೊತೆ ಬಿಜಿಎಂ ಸೇರಿಸಿ 'ತಂಗಲಾನ್' ಟೀಸರ್ ಕಟ್ ಮಾಡಿದ್ದಾರೆ. ಮಾಳವಿಕಾ ಮೋಹನನ್, ಪಾರ್ವತಿ ತಿರುವೊತ್ತು, ಪಶುಪತಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಬುಡಕಟ್ಟು ಜನಾಂಗದ ನಾಯಕನಾಗಿ ತನ್ನವರ ರಕ್ಷಣೆಗೆ ನಿಲ್ಲುವ ನಾಯಕ 'ತಂಗಲಾನ್' ಕತೆ ಚಿತ್ರದಲ್ಲಿದೆ. ರಕ್ತಸಿಕ್ತ ಅಧ್ಯಾಯವನ್ನು ಬಹಳ ಹಸಿ ಹಸಿಯಾಗಿ ತೋರಿಸುವ ಪ್ರಯತ್ನ ನಡೆದಿದೆ. ಪಾತ್ರಕ್ಕಾಗಿ ವಿಕ್ರಂ ತೂಕ ಇಳಿಸಿಕೊಂಡು ಪರಕಾಯ ಪ್ರವೇಶ ಮಾಡಿದ್ದಾರೆ.

Chiyaan Vikram Starrer Thangalaan Teaser Released

ಕಾಳಿಂಗ ಸರ್ಪದಂತಹ ಹಾವೊಂದನ್ನು ವಿಕ್ರಂ ತನ್ನ ಕೈಯಲ್ಲಿ ತುಂಡರಿಸಿ ಬಿಸಾಕುವವಂತ ಸನ್ನಿವೇಶ ಇದೆ. ಮತ್ತೊಂದು ಸನ್ನಿವೇಶದಲ್ಲಿ ಎದುರಾಳಿಕ ರುಂಡ ಚೆಂಡಾಡಿದಾಗ ಮುಂಡದಿಂದ ರಕ್ತ ಧಾರೆಯಾಗಿ ಸುರಿದು ತಂಗಲಾನ್‌ಗೆ ರಕ್ತಾಭಿಷೇಕ ಮಾಡುವಂತೆ ತೋರಿಸಲಾಗಿದೆ. ಪಾರ್ವತಿ, ಮಾಳವಿಕಾ ಎಲ್ಲರೂ ಡೀ ಗ್ಲಾಮರಸ್ ರೋಲ್‌ಗಳಲ್ಲೇ ಕಾಣಿಸಿಕೊಂಡಿದ್ದಾರೆ. ಚಿಯಾನ್ ವಿಕ್ರಂ ಮೇಕ್ ಓವರ್ ಅಂತೂ ದಂಗುಬಡಿಸುವಂತಿದೆ.

1870 ರಿಂದ 1940 ನಡುವಿನ ಕಾಲಘಟ್ಟದಲ್ಲಿ 'ತಂಗಲಾನ್' ಸಿನಿಮಾ ಕತೆ ಸಾಗುವಂತೆ ಕಾಣುತ್ತಿದೆ. ಸ್ಟುಡಿಯೋ ಗ್ರೀನ್ ಹಾಗೂ ನೀಲಂ ಪ್ರೊಡಕ್ಷನ್ಸ್ ಸಂಸ್ಥೆ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿವೆ. ಕಿಶೋರ್ ಕುಮಾರ್ ಛಾಯಾಗ್ರಹಣ, ಜಿ. ವಿ ಪ್ರಕಾಶ್ ಕುಮಾರ್ ಸಂಗೀತ ಈ ಚಿತ್ರಕ್ಕಿದೆ.

ಬಹಳ ಹಿಂದೆಯೇ ನಿರ್ದೇಶಕ ಪಾ. ರಂಜಿತ್ 'ತಂಗಲಾನ್' ಸಿನಿಮಾ ಮಾಡಲು ಮುಂದಾಗಿದ್ದರು. ಅಷ್ಟರಲ್ಲಿ 'KGF' ಸಿನಿಮಾ ಘೋಷಣೆ ಆಗಿತ್ತು. ಚಿನ್ನದ ಗಣಿ ಕತೆ ಕುರಿತು ಸಿನಿಮಾ ಕನ್ನಡದಲ್ಲಿ ಮಾಡುತ್ತಿದ್ದಾರೆ ಎಂದು ರಂಜಿತ್ ಸುಮ್ಮನಾಗಿದ್ದರಂತೆ. ಬಳಿಕ ಸಿನಿಮಾ ನೋಡಿ ಇದು ಕಾಲ್ಪನಿಕ ಕತೆ. ನಾನು ಅಲ್ಲಿ ನಡೆದ ನೈಜ ಘಟನೆ ಆಧರಿಸಿ ಸಿನಿಮಾ ಕಟ್ಟಿಕೊಡುತ್ತೇನೆ ಎಂದು ಹೊರಟಿದ್ದಾಗಿ ಹೇಳಿಕೊಂಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ವಿಕ್ರಂ ನಟನೆಯ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಪ್ರಯೋಗಾತ್ಮಕ ಸಿನಿಮಾಗಳಿಗೆ ಸದಾ ಹಾತೊರಿಯುವ ವಿಕ್ರಂ ಈ ಬಾರಿ ಮತ್ತೊಮ್ಮೆ ತಮ್ಮ ಅದ್ಭುತ ನಟನೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಲು ಮುಂದಾಗಿದ್ದಾರೆ. 'ತಂಗಲಾನ್' ಟೀಸರ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು ಸಿನಿಮಾ ನೋಡಲು ಕಾಯುವಂತೆ ಮಾಡಿದೆ.

More from Filmibeat

English summary
Vikram, Pa Ranjith's Thangalaan Teaser out now:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X