ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ

ತಮಿಳು ನಟ ಚಿಯಾನ್ ವಿಕ್ರಂ ಮನೆಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಮನೆ ತಪಾಸಣೆ ನಡೆಸಿದ ಪೊಲೀಸರು, ಇದೊಂದು ಹುಸಿ ಕರೆ ಆಗಿತ್ತು ಎಂದು ಹೇಳಿದ್ದಾರೆ.

ವಿಕ್ರಂ ರವರಿಗೆ ಸೇರಿದ್ದ ಚೆನ್ನೈನ ಬೆಸೆಂಟ್ ನಗರದ ಮನೆಯಲ್ಲಿ ಬಾಂಬ್ ಇಟ್ಟಿರುವುದಾಗಿ ನವೆಂಬರ್ 30 ರ ಮಧ್ಯಾಹ್ನದ ವೇಳೆಗೆ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಬಂದಿತ್ತು.

ಕರೆ ಬಂದ ಕೂಡಲೇ ಪೊಲೀಸರು, ಬಾಂಬ್ ಸ್ಕ್ವಾಡ್ ಹಾಗೂ ಶ್ವಾನ ದಳದ ಸಮೇತ ವಿಕ್ರಂ ನಿವಾಸಕ್ಕೆ ತೆರಳಿ, ಪೂರ್ಣವಾಗಿ ತಪಾಸಣೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳು ವಿಕ್ರಂ ಮನೆಯಲ್ಲಿ ಪೊಲೀಸರಿಗೆ ದೊರಕಲಿಲ್ಲ.

Chiyan Vikrams House Gets Bomb Threat Call

ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ತೊಡಗಿದ್ದು, ತಮಿಳುನಾಡಿನ ವೆಲ್ಲಪುರಂ ಜಿಲ್ಲೆಯಿಂದ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆ ಅಜಿತ್ ಹಾಗೂ ರಜನಿಕಾಂತ್ ಮನೆಗೆ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯೇ ಈಗಲೂ ಕರೆ ಮಾಡಿರುವ ಸಂಭವ ಇದೆಯೆಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆಯಷ್ಟೆ ನಟ ಸೂರ್ಯಾಗೆ ಸೇರಿದ ಅಳ್ವಾರ್ ಪೇಟೆಯ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಬಂದಿತ್ತು. ಅದಕ್ಕೂ ಮುನ್ನಾ ನಟ ರಜನೀಕಾಂತ್, ವಿಜಯ್, ಅಜಿತ್ ಮನೆಗೂ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆಗಳು ಬಂದಿದ್ದವು.

Recommended Video

ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಐಶ್ವರ್ಯಾ ರೈ | FILMIBEAT KANNADA

More from Filmibeat

English summary
Tamil actor Chiyan Vikram's Besent Nagar house gets bomb threat call. police searched house and found nothing.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X