twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರಮಂದಿರಗಳು ಉಚಿತ ನೀರು ಕೊಡಬೇಕು: ಮದ್ರಾಸ್ ಕೋರ್ಟ್ ಸೂಚನೆ

    |

    ಚಿತ್ರಮಂದಿರಗಳಲ್ಲಿ ಮೊದಲಿನಂತೆ ನಿಯಮಗಳು ಈಗಿಲ್ಲ. ಬಹುತೇಕ ಎಲ್ಲಾ ಥಿಯೇಟರ್‌ಗಳು ಹೊರಗಿನಿಂದ ತರುವ ತಿಂಡಿ-ತಿನಿಸು, ಆಹಾರ, ನೀರು ಸಹಿತ ನಿಷೇಧ ಮಾಡಿದೆ. ಸಿನಿಮಾ ನೋಡುವ ಪ್ರೇಕ್ಷಕರಿಗೆ ತಿನ್ನಲು ತಿಂಡಿ ಅಥವಾ ಕುಡಿಯಲು ನೀರು ಬೇಕಿದ್ದಲ್ಲಿ ಥಿಯೇಟರ್ ಒಳಗೆಯೇ ಖರೀದಿ ಮಾಡಬೇಕು. ಬೇಸರದ ಸಂಗತಿ ಅಂದ್ರೆ ಹೊರಗಿನ ಬೆಲೆಗಿಂತ ಥಿಯೇಟರ್‌ ಒಳಗೆ ಬೆಲೆ ಜಾಸ್ತಿ. ಅದರಲ್ಲೂ ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್‌ಗಿಂತ ತಿಂಡಿ ಬೆಲೆಯ ದೊಡ್ಡದು.

    ಚಿತ್ರಮಂದಿರದಲ್ಲಿ ಮಾರಾಟ ಮಾಡುವ ತಿಂಡಿ-ತನಿಸುಗಳ ಬೆಲೆ ಕಡಿಮೆ ಮಾಡಬೇಕು ಎಂಬ ಆಗ್ರಹ ಹೆಚ್ಚಿದೆ. ಈ ಸಂಬಂಧ ನ್ಯಾಯಾಲಯದಲ್ಲಿ ಹಲವು ದೂರುಗಳು ಸಹ ದಾಖಲಾಗಿರುವ ವರದಿಗಳಿವೆ. ಇದೀಗ, ಕುಡಿಯುವ ನೀರಿನ ವಿಚಾರದಲ್ಲಿ ಮದ್ರಾಸ್ ಹೈ ಕೋರ್ಟ್ ಜನಸಾಮಾನ್ಯರ ಪರವಾಗಿ ತೀರ್ಪು ನೀಡುವ ಮೂಲಕ ಥಿಯೇಟರ್ ಸಿಬ್ಬಂದಿಗೆ ಶಾಕ್ ನೀಡಿದೆ.

    ಚಿತ್ರಮಂದಿರ ತೆರೆಯಲು ಮಹಾ ಸರ್ಕಾರ ಗ್ರೀನ್ ಸಿಗ್ನಲ್: ಸಾಲು-ಸಾಲು ಸಿನಿಮಾ ಬಿಡುಗಡೆ ಘೋಷಣೆಚಿತ್ರಮಂದಿರ ತೆರೆಯಲು ಮಹಾ ಸರ್ಕಾರ ಗ್ರೀನ್ ಸಿಗ್ನಲ್: ಸಾಲು-ಸಾಲು ಸಿನಿಮಾ ಬಿಡುಗಡೆ ಘೋಷಣೆ

    ಹೊರಗಿನಿಂದ ತರುವ ಕುಡಿಯುವ ನೀರನ್ನು ನಿಷೇಧಿಸಿದ್ದಲ್ಲಿ ಚಿತ್ರಮಂದಿರದವರೇ ಶುದ್ಧವಾದ ಕುಡಿಯುವ ನೀರನ್ನು ಉಚಿತವಾಗಿ ಜನರಿಗೆ ನೀಡಬೇಕು. ಅದಕ್ಕೆ ದುಡ್ಡು ತೆಗೆದುಕೊಳ್ಳುವಂತಿಲ್ಲ ಎಂದು ಮದ್ರಾಸ್ ನ್ಯಾಯಾಲಯ ಸೋಮವಾರ ಸೂಚಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.

     Cinema halls must give free water if it bans water from outside

    ಅಂದ್ಹಾಗೆ, 2016ರಲ್ಲಿ ತಮಿಳುನಾಡಿನ ಜಿ ದೇವರಾಜನ್ ಎನ್ನುವ ವ್ಯಕ್ತಿ ಚಿತ್ರಮಂದಿರಗಳಲ್ಲಿ ಬೆಲೆ ಏರಿಕೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. 'ಎಸ್ 2 ಚಿತ್ರಮಂದಿರಗಳ ಒಳಗಿರುವ ಆಹಾರ ಮಳಿಗೆಗಳಲ್ಲಿ ಕುಡಿಯುವ ನೀರು, ಜ್ಯೂಸ್ ಮತ್ತು ತಿಂಡಿಗಳ ಬೆಲೆ ಹೊರಗಿನ ಮಾರುಕಟ್ಟೆಯಲ್ಲಿ ಸಿಗುವುದಕ್ಕಿಂತ (ಎಂಆರ್‌ಪಿ) ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ವಿರೋಧಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

    ಕಳೆದ ನಾಲ್ಕೈದು ವರ್ಷದಿಂದ ಈ ಅರ್ಜಿ ವಿಚಾರಣೆಯಲ್ಲಿದ್ದು, ಈ ಸಂಬಂಧ ಸೋಮವಾರ ಮದ್ರಾಸ್ ಏಕ ಪೀಠ ಸದಸ್ಯ ತೀರ್ಪು ಪ್ರಕಟಿಸಿದೆ. 'ಭದ್ರತಾ ಕಾರಣಗಳಿಗಾಗಿ ಚಿತ್ರಮಂದಿರದ ಮಾಲೀಕರು ಹೊರಗಿನಿಂದ ಕುಡಿಯುವ ನೀರು ತರುವುದನ್ನು ನಿಷೇಧಿಸುವುದಾದರೆ, ಅದಕ್ಕೂ ಮುಂಚೆ ಕುಡಿಯಲು ಯೋಗ್ಯವಾದ, ಶುದ್ಧವಾದ ನೀರನ್ನು ಉಚಿತವಾಗಿ ಒದಗಿಸಬೇಕು' ಎಂದು ನ್ಯಾಯಮೂರ್ತಿ ಎಸ್‌ಎಂ ಸುಬ್ರಮಣ್ಯಂ ಸೂಚಿಸಿದ್ದಾರೆ.

    ಮೂರು ಕಾರಣಗಳಿಗಾಗಿ, ಎರಡು ವರ್ಷದ ಬಳಿಕ ಚಿತ್ರಮಂದಿರಕ್ಕೆ ಬಂದ ರವಿಚಂದ್ರನ್ಮೂರು ಕಾರಣಗಳಿಗಾಗಿ, ಎರಡು ವರ್ಷದ ಬಳಿಕ ಚಿತ್ರಮಂದಿರಕ್ಕೆ ಬಂದ ರವಿಚಂದ್ರನ್

    'ಚಿತ್ರಮಂದಿರದ ಆವರಣದಲ್ಲಿ ಎಲ್ಲಾ ಸಮಯದಲ್ಲೂ ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಹೈಕೋರ್ಟ್ ನಿರ್ದೇಶಿಸಿದೆ. ವಾಟರ್ ಕೂಲರ್‌ಗಳ ಒಳಗೆ ವಾಟರ್ ಪ್ಯೂರಿಫೈಯರ್‌ಗಳನ್ನು ಅಳವಡಿಸಬೇಕು ಇದರಿಂದ ಚಿತ್ರಮಂದಿರದಲ್ಲಿ ಲಭ್ಯವಿರುವ ನೀರು ಕಲ್ಮಶಗಳಿಂದ ಮುಕ್ತವಾಗಿರುತ್ತದೆ. ಆ ವಾಟರ್ ಪ್ಯೂರಿಫೈಯರ್‌ಗಳು ಪೂರ್ತಿಯಾಗಿ ಕಾರ್ಯನಿರ್ವಹಿಸುತ್ತಿರಬೇಕು ಮತ್ತು ಕಾಲಕಾಲಕ್ಕೆ ನಿಯಮಿತವಾಗಿ ಸೇವೆ ನೀಡುತ್ತಿರಬೇಕು' ಎಂದು ಕೋರ್ಟ್ ಹೇಳಿದೆ.

    'ಸಿನಿಮಾ ಪ್ರದರ್ಶನ ಪ್ರಾರಂಭವಾಗುವ ಮೊದಲು ಮತ್ತು ಪ್ರದರ್ಶನದ ಉದ್ದಕ್ಕೂ, ಮಧ್ಯಂತರದಲ್ಲಿ ಸೇರಿದಂತೆ ಕುಡಿಯುವ ನೀರು ಲಭ್ಯವಿರಬೇಕು. ಯಾವುದೇ ಕಾರಣಕ್ಕಾಗಿ ನಿರ್ದಿಷ್ಟ ದಿನದಂದು ನೀರು ಪೂರೈಕೆ ಲಭ್ಯವಿಲ್ಲದಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು' ಎಂದು ಆದೇಶದಲ್ಲಿ ತಿಳಿಸಲಾಗಿದೆ.

    ಒಂದು ವೇಳೆ ಈ ಆದೇಶ ನಿರಾಕರಿಸಿದ್ದಲ್ಲಿ ಅಥವಾ ಪಾಲಿಸದೇ ಇದ್ದಲ್ಲಿ ಚಿತ್ರಮಂದಿರದ ಮಾಲೀಕರು ಅದಕ್ಕೆ ಸೂಕ್ತ ದಂಡ ಪಾವತಿಸಬೇಕಾಗುತ್ತದೆ ಎಂದು ಮದ್ರಾಸ್ ಕೋರ್ಟ್ ಎಚ್ಚರಿಸಿದೆ.

    English summary
    Cinema halls must give free water if it bans water from outside: madras high court.
    Tuesday, October 5, 2021, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X