ತಮಿಳು ನಟ ಸಿಂಬು ಜೊತೆ ತ್ರಿಷಾ ಮದುವೆ: ಪ್ರತಿಕ್ರಿಯೆ ನೀಡಿದ ನಟಿಯ ಆಪ್ತವಲಯ
ತಮಿಳು ನಟಿ ತ್ರಿಷಾ ಕೃಷ್ಣನ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮದುವೆ ವಿಚಾರವಾಗಿ ತ್ರಿಷಾ ಆಗಾಗ ಸುದ್ದಿಯಲ್ಲಿರುತ್ತಾರೆ. ಆದರೆ ಈ ಬಾರಿ ನಿಜಕ್ಕು ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ದೀರ್ಘಕಾಲ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಖ್ಯಾತಿ ಗಳಿಸಿ, ಇಂದಿಗೂ ಬಹುಬೇಡಿಕೆಯಾಗಿ ಉಳಿದುಕೊಂಡಿದ್ದಾರೆ.
Recommended Video
ಅಭಿನಯ ಮತ್ತು ಸೌಂದರ್ಯ ಮೂಲಕ ಅಭಿಮಾನಿಗಳ ಮನಗೆದ್ದಿರುವ ತ್ರಿಷಾಗೆ 37 ವರ್ಷ. ಮದುವೆ ಯಾವಾಗ ಎನ್ನುವ ಪ್ರಶ್ನೆ ಎದುರಾಗುತ್ತಲೆ ಇರುತ್ತೆ. ಆದರೆ ತಮಿಳು ನಟ ಸಿಂಬು ಜೊತೆ ತ್ರಿಷಾ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೆ ಮದುವೆ ತಯಾರಿ ಸಹ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಆದರೆ ಈ ಸುದ್ದಿಯನ್ನು ನಟಿ ತ್ರಿಷಾ ಅವರ ಆಪ್ತವಲಯ ತಳ್ಳಿ ಹಾಕಿದೆ. ಮುಂದೆ ಓದಿ...

ತಮಿಳಿನ ವಿವಾದಾತ್ಮಕ ನಟನ ಜೊತೆ ತ್ರಿಷಾ ಮದುವೆ ?
ತ್ರಿಷಾ ಈಗ ತಮಿಳಿನ ವಿವಾದಾತ್ಮಕ ನಟ ಅಂತಾನೆ ಖ್ಯಾತಿಗಳಿಸಿರುವ ಸಿಂಬು ಜೊತೆ ಹಸೆಮಣೆ ಏರಲಿದ್ದಾರೆ ಎನ್ನುವ ಮಾತು ಹರಿದಾಡುತ್ತಿದೆ. ಲಾಕ್ ಡೌನ್ ಬಳಿಕ ಇಬ್ಬರು ಮದುವೆಯಾಗಲು ನಿರ್ಧರಿಸಿದ್ದಾರಂತೆ. ಇತ್ತೀಚಿಗೆ ಸಿಂಬು ಲಾಕ್ ಡೌನ್ ಬಳಿಕ ಮದುವೆ ಪ್ಲಾನ್ ಇದೆ ಎಂದಿದ್ದರು. ಅಲ್ಲದೆ ತ್ರಿಷಾ ಕೂಡ ಮದುವೆ ವಿಚಾರ ಬಹಿರಂಗಪಡಿಸಿದ್ದರು. ಹಾಗಾಗಿ ಇಬ್ಬರು ಹಸೆಮಣೆ ಏರಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಕೇಳಿಬರುತ್ತಿದೆ. ಅಲ್ಲದೆ ಸಿಂಬು ಮತ್ತು ತ್ರಿಷಾ ನಡುವೆ ಉತ್ತಮ ಬಾಂದವ್ಯವಿದೆ, ಇಬ್ಬರು ಉತ್ತಮ ಸ್ನೇಹಿತರು. ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಮದುವೆ ವಿಚಾರ ತಳ್ಳಿ ಹಾಕಿದ ತ್ರಿಷಾ ಆಪ್ತರು
ನಟಿ ತ್ರಿಷಾ ಮತ್ತು ಸಿಂಬು ಮದುವೆಯಾಗುತ್ತಿದ್ದಾರೆ ಎನ್ನುವ ಮಾಹಿತಿಯನ್ನು ತಳ್ಳಿಹಾಕಿದ್ದಾರೆ. ಸದ್ಯ ಹರಿದಾಡುತ್ತಿರುವ ಸುದ್ದಿ ವದಂತಿ ಅಷ್ಟೆ. ತ್ರಿಷಾ ಮತ್ತು ಸಿಂಬು ಮದುವೆಯಾಗುತ್ತಿಲ್ಲ. ಇಬ್ಬರು ಉತ್ತಮ ಸ್ನೇಹಿತರು ಅಷ್ಟೆ ಎಂದು ತ್ರಿಷಾ ಆಪ್ತ ವಲಯ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.

ಎರಡು ವರ್ಷಗಳ ಹಿಂದೆ ಸಿಂಬು ಬಗ್ಗೆ ತ್ರಿಷಾ ಮಾತು
ಎರಡೂ ವರ್ಷಗಳ ಹಿಂದೆ ತ್ರಿಷಾ ಸಿಂಬ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. "ನಾವಿಬ್ಬರು ಉತ್ತಮ ಸ್ನೇಹಿತರು. ನಾನು ಏಳು ವರ್ಷಗಳಿಂದ ತಿಳಿದಿದ್ದೇನೆ. ಅವನು ನನ್ನ ಹಾಗೆ ಅಲ್ಲ. ಅವರು ನನಗೆ ಉತ್ತಮ ಸ್ನೇಹಿತ. ನಾನು ಅದನ್ನು ನಂಬುತ್ತೇನೆ. ಒಬ್ಬ ಒಳ್ಳೆಯ ಸ್ನೇಹಿತ ಪ್ರೀತಿಸಲು ಸಾಧ್ಯವಿಲ್ಲ" ಎಂದಿದ್ದರು.

ಕಿರುಚಿತ್ರದಲ್ಲಿ ನಟಿಸಿರುವ ಜೋಡಿ
ನಟಿ ತ್ರಿಷಾ ಮತ್ತು ಸಿಂಬು ಇಬ್ಬರು ಗೌತಮ್ ಮೆನನ್ ಅವರ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಈ ಕಿರುಚಿತ್ರವನ್ನು ತಯಾರಿಸಲಾಗಿದೆ. ಮೇ ತಿಂಗಳಲ್ಲಿ ರಿಲೀಸ್ ಮಾಡಲಾಗಿದೆ. 12 ನಿಮಿಷಿದ ಈ ಕಿರುಚಿತ್ರವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆಮಾಡಲಾಗಿದೆ. ಈ ಕಿರುಚಿತ್ರದ ನಂತರ ಇಬ್ಬರ ನಡುವೆ ಇದ್ದ ಮದುವೆ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದೆ.

ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್
ಕಳೆದ ಕೆಲವು ವರ್ಷಗಳಿಂದ ನಟಿ ತ್ರಿಷಾ, ರಾಣಾ ದಗ್ಗುಬಾಟಿ ಜೊತೆ ಡೇಟಿಂಗ್ ನಲ್ಲಿದ್ದರು. ರಾಣಾ ಮತ್ತು ತ್ರಿಷಾ ಇಬ್ಬರ ಪ್ರೀತಿ ಪ್ರೇಮದ ವಿಚಾರ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಅಲ್ಲದೆ ರಾಣಾ ಸಹ ತ್ರಿಷಾ ಜೊತೆಗಿನ ಪ್ರೀತಿ ವಿಚಾರವನ್ನು ಬಹಿರಂಗಪಡಿಸಿದ್ದರು. ಇಬ್ಬರು ಮದುವೆ ಆಗಲಿದ್ದಾರೆ ಅಂತಾನೆ ಎಲ್ಲರೂ ಅಂದುಕೊಂಡಿದ್ದರು. ಅಲ್ಲದೆ ತ್ರಿಷಾ ಮತ್ತು ವರುಣ್ ನಿಶ್ಚಿತಾರ್ಥ ಮುರಿದು ಬೀಳಲು ಕಾರಣನೇ ರಾಣಾ ದಗ್ಗುಬಾಟಿ ಎನ್ನುವ ಮಾತು ಕೇಳಿ ಬರುತ್ತಿತ್ತು. ಆದರೆ ರಾಣಾ, ಗೆಳತಿ ಮಿಹಿಕಾ ಬಜಾಜ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಮಿಹಿಕಾ ಮತ್ತು ರಾಣಾ ಇಬ್ಬರು ಆಗಸ್ಟ್ ನಲ್ಲಿ ಹಸೆಮಣೆ ಏರುತ್ತಿದ್ದಾರೆ.

2015ರಲ್ಲಿ ವರುಣ್ ಮನಿಯನ್ ಜೊತೆ ನಿಶ್ಚಿತಾರ್ಥ
ನಟಿ ತ್ರಿಷಾ 2015ರಲ್ಲಿ ಉದ್ಯಮಿ ಮತ್ತು ಗೆಳೆಯ ವರುಣ್ ಮನಿಯನ್ ಜೊತೆ ಮದುವೆ ಆಗಲು ನಿರ್ಧರಿಸಿದ್ದರು. ಅಲ್ಲದೆ ವರುಣ್ ಜೊತೆ ತ್ರಿಷಾ ನಿಶ್ಚಿತಾರ್ಥ ಸಹ ಮಾಡಿಕೊಂಡಿದ್ದರು. ತೀರಾ ಖಾಸಗಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭರದಲ್ಲಿ ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಆದರೆ ನಿಶ್ಚಿತಾರ್ಥ ನೆರವೇರಿ ಕೆಲವೇ ದಿನಗಳಲ್ಲಿ ತ್ರಿಷಾ ನಿಶ್ಚಿತಾರ್ಥ ಮುರಿದುಬಿತ್ತು. ಅಸಲಿ ಕಾರಣವೇನು ಎನ್ನುವುದು ತಿಳಿದುಬಂದಿಲ್ಲ. ಆದರೆ ಇಬ್ಬರ ನಿಶ್ಚಿತಾರ್ಥ ಮುರಿಯಲು ರಾಣಾ ದಗ್ಗುಬಾಟಿ ಕಾರಣವೆಂದು ಹೇಳಲಾಗುತ್ತಿದೆ.
ಮತ್ತೆ ಮದುವೆ ವಿಚಾರ ಸದ್ದು ಮಾಡುತ್ತಿದೆ. ಆದರೆ ಇದ್ಯಾವುದಕ್ಕು ತಲೆಕೆಡಿಸಿಕೊಳ್ಳದ ನಟಿ ತ್ರಿಷಾ ಸಿನಿಮಾಕಡೆ ಗಮನ ಹರಿಸುತ್ತಿದ್ದಾರೆ. ಸದ್ಯ ತಮಿಳಿನ ಎರಡು ಸಿನಿಮಾದಲ್ಲಿ ತ್ರಿಷಾ ಬ್ಯುಸಿಯಾಗಿದ್ದಾರೆ.


Click it and Unblock the Notifications











