200 ಕೋಟಿ ಸಂಭಾವನೆ ಪಡೆಯುತ್ತಿದ್ದ ವಿಜಯ್‌ಗೆ ಈಗ ಸಿಗುವ ಸಂಬಳ ಎಷ್ಟು ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಸರ್ಕಾರದ ಕೆಲಸ ದೇವರ ಕೆಲಸ ಅಂತಾರೆ. ಆದರೆ ಈ ಕೆಲಸವನ್ನು ರಾಜಕಾರಣಿಗಳು ಉಚಿತವಾಗಿ ಮಾಡುವುದಿಲ್ಲ. ಬದಲಿಗೆ ಇವರಿಗೆ ಕೂಡ ಇಂತಿಷ್ಟು ಎಂದು ಸಂಬಳ ನೀಡಲಾಗುತ್ತೆ. ತಿಂಗಳ ಮೊದಲ ತಾರೀಖು ಆಯ್ತು ಅಂದರೆ ಸಾಕು, ಸಾಮಾನ್ಯ ಸರ್ಕಾರಿ ನೌಕರನ ಖಾತೆಗೆ ಹಣ ಜಮೆ ಆದಂತೆ, ಮುಖ್ಯಮಂತ್ರಿ ಅವರನ್ನೊಳಗೊಂಡು ಶಾಸಕರಿಗೆ ಕೂಡ ಹಣ ವರ್ಗಾವಣೆಯಾಗುತ್ತೆ.

ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳಾದ ಮೇಲೆ, ಅವರ ಸೇವೆ ಮಾಡುವ ನಾಯಕನಿಗೆ ಗೌರವಯುತವಾದ ಜೀವನ ನಡೆಸಲು ಈ ವೇತನ ಅತ್ಯಗತ್ಯ. ಈ ವೇತನವನ್ನೇ ನಂಬಿಕೊಂಡು ಕುಂತ ಪ್ರಾಮಾಣಿಕ ರಾಜಕಾರಣಿಗಳು ಎಷ್ಟು..? ಎನ್ನುವುದು ಬೇರೆ ವಿಚಾರವಾದರು ಸದ್ಯ ತಮಿಳುನಾಡಿನ ಮುಖ್ಯಮಂತ್ರಿ ಗದ್ದುಗೆ ಏರಿದ ವಿಜಯ್ 7.5 ಕೋಟಿ ತಮಿಳುನಾಡಿನ ಜನರ ಸೇವೆ ಮಾಡಲು ಪಡೆಯುತ್ತಿರುವ ಸಂಬಳ ಎಷ್ಟು..? ಎನ್ನುವ ಪ್ರಶ್ನೆ ನಿಮ್ಮಲ್ಲೇನಾದರೂ ಇದ್ದರೆ ಉತ್ತರ ಇಲ್ಲಿದೆ.

The 200-Crore Star s New Paycheck CM Vijay s 2 85 Lakh Salary and the Elite Perks of Power Reveal

ಮುಖ್ಯಮಂತ್ರಿಯಾಗಿ ವಿಜಯ್ ಪಡೆಯುವ ತಿಂಗಳ ವೇತನ

ಚಿತ್ರವೊಂದಕ್ಕೆ ₹200 ಕೋಟಿ ಸಂಭಾವನೆ ಪಡೆಯುತ್ತಿದ್ದವರು ವಿಜಯ್. ಆದರೆ ಈಗ ವಿಜಯ ನಾಯಕ ಅಲ್ಲ. ಜನನಾಯಕ. ಹೀಗಾಗಿ ತಿಂಗಳಿಗೆ ₹2.85 ಲಕ್ಷದಿಂದ 3 ಲಕ್ಷದವರೆಗೆ ಸಂಬಳವನ್ನು ಮುಖ್ಯಮಂತ್ರಿಯಾಗಿ ವಿಜಯ್ ಪಡೆಯಲಿದ್ದಾರೆ. ಆ ಪೈಕಿ ₹1.05 ಲಕ್ಷ ಮೂಲ ವೇತನ ಆದರೆ , ₹87,000 ಕ್ಷೇತ್ರ ಭತ್ಯೆ ಮತ್ತು ₹75,000 ಕಚೇರಿ ಭತ್ಯೆಯನ್ನು ಒಳಗೊಂಡಿರುತ್ತದೆ. ಈ ಮೂಲಕ ವರ್ಷಕ್ಕೆ 34 ಲಕ್ಷ ಹಣವನ್ನು ವಿಜಯ್ ದುಡಿಯಲಿದ್ದಾರೆ.


ತೆರಿಗೆ ಲೆಕ್ಕ ಹೇಗೆ ?

ಇನ್ನು ವಿಜಯ್ ತಮ್ಮ ಅಫಿಡವಿಟ್‌ನಲ್ಲಿ ಸುಮಾರು ₹624 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ತಮ್ಮ ವೈಯಕ್ತಿಕ ಆದಾಯ (ಸಿನಿಮಾ-ವ್ಯಾಪಾರಗಳಿಂದ) ಹಾಗೂ ಸರ್ಕಾರದಿಂದ ಪಡೆಯುವ ವೇತನ ಎರಡನ್ನೂ ಪ್ರತ್ಯೇಕವಾಗಿ ಲೆಕ್ಕ ಹಾಕಿ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸಬೇಕು.

ಮಾಲೀಕ ಮತ್ತು ಉದ್ಯೋಗಿ ಸಂಬಂಧ

ಮುಖ್ಯಮಂತ್ರಿಯನ್ನು ''ಉದ್ಯೋಗಿ'' ಎಂದು ಪರಿಗಣಿಸುವ ವಿಶಿಷ್ಟ ತೆರಿಗೆ ನಿಯಮವಿದೆ. ಮುಖ್ಯಮಂತ್ರಿಗೆ ಸಂದಾಯವಾಗುವ ಸಂಭಾವನೆಯನ್ನು ಆದಾಯ ತೆರಿಗೆ ಇಲಾಖೆ ಸಂಬಳ ಎಂದು ಪರಿಗಣಿಸುತ್ತದೆ. ಹಿಂದೆ ಲಾಲು ಪ್ರಸಾದ್ ಯಾದವ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಸ್ಪಷ್ಟಪಡಿಸಿತ್ತು. ಕಾನೂನು ಪ್ರಕಾರ, ಮುಖ್ಯಮಂತ್ರಿ ಮತ್ತು ಸರ್ಕಾರದ ನಡುವೆ ''ಮಾಲೀಕ-ಉದ್ಯೋಗಿ'' ಸಂಬಂಧ ಇದೆ.

ಆದರೆ ಶಾಸಕರಿಗೆ ಮತ್ತು ಸಚಿವರಿಗೆ ಈ ಮಾತು ಅನ್ವಯವಾಗುವುದಿಲ್ಲ. ಯಾಕೆಂದರೆ ತೆರಿಗೆಗೆ ಸಂಬಂಧಿಸಿದಂತೆ ಇವರಿಗೆ ಬೇರೆಯದ್ದೇ ನಿಯಮಗಳಿವೆ. ಇವರು ಸರ್ಕಾರಿ ನೌಕರರು ಅಲ್ಲ, ಬದಲಿಗೆ ಜನರ ಪ್ರತಿನಿಧಿಗಳು. ಈ ಕಾರಣಕ್ಕೆ ಇವರ ವೇತನವನ್ನು ಸಂಬಳ ಬದಲಿಗೆ ಇತರ ಮೂಲಗಳಿಂದ ಬಂದ ಆದಾಯ (Income from Other Sources) ಎಂದು ವರ್ಗೀಕರಿಸಲಾಗುತ್ತದೆ.

cm-vijay-salary-perks-tamil-nadu-chief-minister-details

ಸರ್ಕಾರದ ಜೊತೆ ಇವರದ್ದು ಮಾಲೀಕ-ಉದ್ಯೋಗಿ ಸಂಬಂಧ ಇರುವುದಿಲ್ಲ. ಹಾಗಾಗಿ, ಕಚೇರಿ ವೆಚ್ಚಗಳು, ಸಚಿವಾಲಯದ ಸಹಾಯಕರಿಗೆ ನೀಡುವ ವೇತನದಂತಹ ಖರ್ಚುಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಲು ಶಾಸಕರು ಮತ್ತು ಸಚಿವರಿಗೆ ಅವಕಾಶವಿದೆ.


ಶಾಸಕರಿಗೆ ಮತ್ತು ಸಚಿವರಿಗೆ ಸಂಬಳ ಎಷ್ಟು ?

ಇನ್ನು ವಿಜಯ್ ಸರ್ಕಾರದಲ್ಲಿ ಶಾಸಕರಿಗೆ ₹1,05,000 ರಿಂದ ₹1.15 ಲಕ್ಷದವರೆಗೆ ವೇತನ ಹಾಗೂ ಭತ್ಯೆ ಸಿಗಲಿದೆ. ಇದರಲ್ಲಿ ಮೂಲ ವೇತನ, ಕ್ಷೇತ್ರದ ಭತ್ಯೆ, ದೂರವಾಣಿ-ವೈದ್ಯಕೀಯ ವೆಚ್ಚಗಳು ಸೇರಿವೆ. ಸಚಿವರ ಕೈಗೆ ಬಹುತೇಕ ಮುಖ್ಯಮಂತ್ರಿಗೆ ಸಿಗುವ ಹಣವೇ ಸಿಗುತ್ತೆ. ಆದರೆ ಮುಖ್ಯಮಂತ್ರಿಗಿಂತ ಸ್ವಲ್ಪ ಕಡಿಮೆ. ಅಂದರೆ ಸುಮಾರು ₹2.50 ಲಕ್ಷದವರೆಗೆ ಇವರಿಗೆ ಹಣ ಸಂದಾಯವಾಗುತ್ತದೆ.

ಇನ್ನಿತರ ಸೌಲಭ್ಯಗಳು

ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿರುವ ವಿಜಯ್‌ಗೆ ಚೆನ್ನೈನಲ್ಲಿ ಸುಸಜ್ಜಿತ ಸರ್ಕಾರಿ ಬಂಗಲೆಯನ್ನು ನೀಡಲಾಗುತ್ತೆ. Z+ ಶ್ರೇಣಿಯ ಭದ್ರತೆ ಒದಗಿಸಲಾಗುತ್ತೆ. ವಿಜಯ್ ಸುತ್ತ ಮುತ್ತ ಖಾಸಗಿ ಬಾಡಿಗಾರ್ಡ್‌ಗಳ ಜಾಗದಲ್ಲಿ ಶಸ್ತ್ರ ಸಜ್ಜಿತ ಪಡೆ ಇರಲಿದೆ. ಹೋದಲ್ಲಿ..ಬಂದಲ್ಲಿ.. ಬೆಂಗಾವಲು ವಾಹನಗಳು ಇವರನ್ನು ಹಿಂಬಾಲಿಸಲಿವೆ. ಇದರ ಜೊತೆ ಬುಲೆಟ್ ಪ್ರೂಫ್ ಎಸ್‌ಯುವಿಯನ್ನು ಕೂಡ ನೀಡಲಾಗುತ್ತೆ. ಇವರ ಭದ್ರತೆಯ ಜವಾಬ್ಧಾರಿ ಪೊಲೀಸ್ ಮತ್ತು ಗುಪ್ತಚರ ಇಲಾಖೆಗಳದ್ದು.

ಇನ್ನು ಇವರ ಪ್ರಯಾಣಕ್ಕೆ ವಿಮಾನ ಮತ್ತು ಹೆಲಿಕಾಪ್ಟರ್ ಸಜ್ಜಾಗಿರುತ್ತವೆ. ಪ್ರಯಾಣದ ಎಲ್ಲ ವೆಚ್ಚ ಸರ್ಕಾರವೇ ಭರಿಸುತ್ತದೆ. ಮುಖ್ಯಮಂತ್ರಿಯಾದ ವಿಜಯ್ ಅವರಿಗೆ ಮಾತ್ರವಲ್ಲದೇ ಕುಟುಂಬದ ಸದಸ್ಯರಿಗೆ ಕೂಡ ವೈದ್ಯಕೀಯ ಸವಲತ್ತುಗಳು ಸಿಗಲಿವೆ. ಇದರ ವೆಚ್ಚವನ್ನು ಕೂಡ ಸರ್ಕಾರವೇ ಭರಿಸುತ್ತದೆ.

ವಿಜಯ್ ಅವರಿಗೆ ವೈಯಕ್ತಿಕ ಕಾರ್ಯದರ್ಶಿ, ಆಡಳಿತಾಧಿಕಾರಿ, ಚಾಲಕ, ಅಡುಗೆಯವರು, ಭದ್ರತಾ ಸಿಬ್ಬಂದಿ ಮತ್ತು ಕಚೇರಿ ಸಹಾಯಕರಿರುತ್ತಾರೆ. ಇವರ ವೇತನ ಮತ್ತು ವೆಚ್ಚಗಳ ಜವಾಬ್ದಾರಿ ಕೂಡ ರಾಜ್ಯ ಸರ್ಕಾರದ್ದೇ.

ಒಟ್ನಲ್ಲಿ ಚಿತ್ರರಂಗದಲ್ಲಿ ಕೋಟಿ ಕೋಟಿ ದುಡಿಯುತ್ತಿದ್ದ ದಳಪತಿ ವಿಜಯ್ ಈಗ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸಲಿದ್ದಾರೆ. ಮುಖ್ಯಮಂತ್ರಿಯಾಗಿ 3 ಲಕ್ಷ ಸಂಬಳ ಪಡೆಯಲಿದ್ದಾರೆ. ಪ್ರತಿ ಪೈಸೆಗೆ ಲೆಕ್ಕ ನೀಡಿ ತೆರಿಗೆಯನ್ನು ಕೂಡ ಪಾವತಿಸಲಿದ್ದಾರೆ. ಇದು ಪ್ರಜಾಪ್ರಭುತ್ವದ ಪ್ರಮುಖ ವೈಶಿಷ್ಟ್ಯ ಅಂದರೆ ಅದು ತಪ್ಪಾಗಲಿಕ್ಕಿಲ್ಲ.

English summary
From a ₹200-crore movie salary to a ₹2.85 lakh CM paycheck—how much will Thalapathy Vijay actually earn as Tamil Nadu's Chief Minister? Discover the monthly salary breakdown, Z+ security details, and the elite perks of the CM's office.
Read more about: vijay politics remuneration
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X