For Quick Alerts
  ALLOW NOTIFICATIONS  
  For Daily Alerts

  ದಳಪತಿ ವಿಜಯ್‌ ಅವರಲ್ಲಿ ನನಗೆ ಈ ವಿಷಯ ತುಂಬಾ ಇಷ್ಟ ಎಂದು ಹೊಗಳದ ಚಿಯಾನ್ ವಿಕ್ರಮ್!

  |

  'ಕೋಬ್ರಾ' ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟ ವಿಕ್ರಮ್, ದಳಪತಿ ವಿಜಯ್ ಬಗ್ಗೆ ಬಹಿರಂಗವಾಗಿ ಮಾತಾಡಿದ್ದಾರೆ. ದಳಪತಿ ವಿಜಯ್ ಅವರಲ್ಲಿ ನಾನು ಇಷ್ಟ ಪಡುವ ನೆಚ್ಚಿನ ವಿಷಯ ಎಂದು ನಟ ವಿಕ್ರಮ್ ಹೇಳಿಕೊಂಡಿದ್ದಾರೆ. ಮೂರು ವರ್ಷಗಳ ನಂತರ ವಿಕ್ರಮ್ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

  'ಕೋಬ್ರಾ' ಸಿನಿಮಾದಲ್ಲಿ ಚಿಯಾನ್ ವಿಕ್ರಮ್ ಜೊತೆಗೆ 'ಕೆಜಿಎಫ್' ನಾಯಕಿ ಶ್ರೀನಿಧಿ ಶೆಟ್ಟಿ, ಕೆ.ಎಸ್.ರವಿಕುಮಾರ್, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಮಿಯಾ ಜಾರ್ಜ್, ಕನಿಕಾ, ಮೃಣಾಲಿನಿ ಮತ್ತು ಜಾನ್ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ವಿಕ್ರಮ್ 'ಕೋಬ್ರಾ' ಸಿನಿಮಾವನ್ನು ಅಜಯ್ ಜ್ಞಾನಮುತ್ತು ನಿರ್ದೇಶಿಸಿದ್ದಾರೆ. 'ಮಾಸ್ಟರ್' ಚಿತ್ರದ ನಿರ್ಮಾಪಕ ಲಲಿತ್ ಕುಮಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಜಯ್ ಜ್ಞಾನಮುತ್ತು ಇತ್ತೀಚೆಗೆ ವಿಭಿನ್ನ ಸಿನಿಮಾಗಳನ್ನೇ ನಿರ್ಮಾಣ ಮಾಡುತ್ತಿದ್ದಾರೆ ನೀಡುತ್ತಿದ್ದಾರೆ. ಹಾಗಾಗಿ 'ಕೋಬ್ರಾ' ಕೂಡ ವಿಭಿನ್ನ ಸಿನಿಮಾವಾಗಿ ನಿಲ್ಲುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.

  'ಕೋಬ್ರಾ' ಬಿಡುಗಡೆಗೂ ಮುನ್ನವೇ ಭರ್ಜರಿ ಪ್ರಚಾರ ಮಾಡಲಾಗಿದೆ. ಬೆಂಗಳೂರು, ತಿರುಚ್ಚಿ, ಕೊಯಮತ್ತೂರು, ಚೆನ್ನೈ, ಹೈದರಾಬಾದ್‌ಗೆ ಹೋಗಿದ್ದರು. ಅಲ್ಲೆಲ್ಲಾ ಚಿಯಾನ್ ವಿಕ್ರಮ್‌ಗೆ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಅಲ್ಲದೇ ಇತ್ತೀಚೆಗಷ್ಟೇ ರಿಲೀಸ್ ಆದ ನಾಗರಹಾವು ಹಾಡಿಗೂ ಭಾರೀ ಪ್ರತಿಕ್ರಿಯೆ ಸಿಕ್ಕಿದೆ.

  'ಕೋಬ್ರಾ' ಸಿನಿಮಾದ ಮತ್ತೊಂದು ಹಾಡು ನಾಳೆ (ಆಗಸ್ಟ್ 31) ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ವಿಕ್ರಮ್, ಶ್ರೀನಿಧಿ ಶೆಟ್ಟಿ, ಕ್ರಿಕೆಟಿಗ ಇರ್ಫಾನ್ ಪಠಾಣ್, ಮಿಯಾ ಜಾರ್ಜ್, ಮೃಣಾಲಿನಿ ಮತ್ತು ಅಜಯ್ ಜ್ಞಾನಮುತ್ತು ಟ್ವಿಟ್ಟರ್‌ನಲ್ಲಿ 'ಕೋಬ್ರಾ' ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಆಗ ದಳಪತಿ ವಿಜಯ್‌ ಅವರಲ್ಲಿ ನೀವು ಇಷ್ಟ ಪಡುವ ವಿಷಯ ಯಾವುದು ಎಂದು ಪ್ರಶ್ನೆ ಮಾಡಲಾಗಿತ್ತು.

  Cobra Starrer Chiyaan Vikram Talks About Thalapathy Vijay Dance On Twitter

  ಈ ಪ್ರಶ್ನೆಗೆ ಉತ್ತರಿಸಿದ ವಿಕ್ರಮ್ "ಯಾವುದೇ ಸಂದರ್ಭದಲ್ಲೂ ದಳಪತಿ ವಿಜಯ್ ತುಂಬಾ ಕೂಲ್ ಆಗಿರುತ್ತಾರೆ. ಅದು ನನಗೆ ಇಷ್ಟ. ಇದೆಲ್ಲದರ ಹೊರತಾಗಿ ಅವರೊಬ್ಬ ಅದ್ಭುತ ನಟ. ದಖಪತಿ ಡ್ಯಾನ್ಸ್ ಅಂದರೆ ನನಗೆ ತುಂಬಾ ಇಷ್ಟ. ಸೈಲೆಂಟ್‌ ಆಗಿ ಡ್ಯಾನ್ಸ್ ನೋಡಿ ಹೆಜ್ಜೆ ಹಾಕುತ್ತೇನೆ ಎಂದು ಹೇಳುವ ಮೂಲಕ ನಟ ವಿಕ್ರಮ್, ನಟ ವಿಜಯ್ ಡ್ಯಾನ್ಸ್ ಬಗ್ಗೆ ವಿವರಿಸಿದ್ದಾರೆ. ಇದು ವಿಜಯ್ ಅಭಿಮಾನಿಗಳಿಗೆ ಸಖತ್ ಖುಷಿಕೊಟ್ಟಿದೆ.

  English summary
  Cobra Starrer Chiyaan Vikram Talks About Thalapathy Vijay Dance On Twitter, Know More.
  Tuesday, August 30, 2022, 23:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X