ನಟ ವಿಶಾಲ್‌ಗೆ 45 ಲಕ್ಷ ವಂಚನೆ ಮಾಡಿದ ಮಹಿಳೆ: ದೂರು ದಾಖಲು
ತಮಿಳಿನ ಖ್ಯಾತ ನಟ ವಿಶಾಲ್ ಅವರಿಗೆ ಭಾರಿ ಮೊತ್ತದ ಹಣ ವಂಚನೆ ಆಗಿದೆ. ಅದೂ ಅವರದ್ದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಓರ್ವ ಮಹಿಳೆಯಿಂದ.
Recommended Video
ವಿಶಾಲ್ ಅವರ ಸಿನಿಮಾ ನಿರ್ಮಾಣ ಸಂಸ್ಥೆ ವಿಶಾಲ್ ಫಿಲಂ ಫ್ಯಾಕ್ಟರಿ ಮೂಲಕ ಹಲವು ಸಿನಿಮಾಗಳನ್ನು ನಿರ್ಮಿಸಲಾಗಿದೆ. ಆದರೆ ಈ ನಿರ್ಮಾಣ ಸಂಸ್ಥೆಯು ತೆರಿಗೆ ಪಾವತಿಸಿಲ್ಲವೆಂದು ಇತ್ತೀಚೆಗೆ ದೂರು ದಾಖಲಾಗಿತ್ತು.
ವಿಶಾಲ್ ಅವರ ನಿರ್ಮಾಣ ಸಂಸ್ಥೆಯು ಟಿಡಿಎಸ್ ಪಾವತಿ ಮಾಡಲಾಗಿಲ್ಲ ಎನ್ನುವ ಸುದ್ದಿಯಾಗಿತ್ತು, ಇದರ ತನಿಖೆ ನಡೆಸಿದಾಗ ಗೊತ್ತಾಗಿದ್ದು ಸಂಸ್ಥೆಯಲ್ಲಿನ ಉದ್ಯೋಗಿಯೇ ಒಬ್ಬರು ತೆರಿಗೆಗೆ ಮೀಸಲಾಗಿದ್ದ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂದು.

ಸಂಸ್ಥೆಯಲ್ಲಿ ಅಕೌಂಟಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮಹಿಳೆಯೇ ಒಬ್ಬರು ಆರು ವರ್ಷದಿಂದ ಟಿಡಿಎಸ್ ಗಾಗಿ ಮೀಸಲಿಟ್ಟಿದ್ದ ಹಣವನ್ನು ನಕಲಿ ದಾಖಲೆ ಸೃಷ್ಟಿಸಿ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆಂಬುದು ಸಂಸ್ಥೆಯ ಆಂತರಿಕ ತನಿನಖೆಯಿಂದ ತಿಳಿದುಬಂದಿದೆಯಂತೆ.
ಬರೋಬ್ಬರಿ 45 ಲಕ್ಷ ರುಪಾಯಿ ಹಣವನ್ನು ವಿಶಾಲ್ ಸಂಸ್ಥೆಗೆ ಆ ಮಹಿಳಾ ಸಿಬ್ಬಂದಿ ವಂಚನೆ ಮಾಡಿದ್ದಾರೆ ಎನ್ನಲಾಗಿದ್ದು, ಆಕೆಯ ಮೇಲೆ ಸಂಸ್ಥೆಯ ಮ್ಯಾನೇಜರ್ ಹರಿ ಮೂಲಕ ಪೊಲೀಸ್ ದೂರು ದಾಖಲಿಸಲಾಗಿದೆ.

ಆ ಮಹಿಳಾ ಸಿಬ್ಬಂದಿಯನ್ನು ಜೂನ್ 28 ರಂದು ಕೆಲಸದಿಂದ ತೆಗೆದು ಹಾಕಲಾಗಿದೆ. ಆಕೆ ತನ್ನ ಸಂಬಂಧಿಯೊಬ್ಬರ ಖಾತೆಗೆ 45 ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾರಂತೆ. ಆ ಹಣ ವಿಶಾಲ್ ಅವರ ನಿರ್ಮಾಣ ಸಂಸ್ಥೆಗೆ ಸೇರಿದ್ದು ಎನ್ನಲಾಗುತ್ತಿದೆ.

ವಿಶಾಲ್ ಅವರ ನಿರ್ಮಾಣ ಸಂಸ್ಥೆಯಿಂದ ಚಕ್ರಂ ಮತ್ತು ತುಪ್ಪರಿವಾಲನ್ 2 ಸಿನಿಮಾ ಬಿಡುಗಡೆ ಆಗುತ್ತಿದೆ. ಚಕ್ರಂ ಸಿನಿಮಾ ಕನ್ನಡದಲ್ಲಿಯೂ ಬಿಡುಗಡೆ ಆಗಲಿದ್ದು, ಅದರ ಪೋಸ್ಟರ್ ಅನ್ನು ಇತ್ತೀಚೆಗೆ ಯಶ್ ಅವರು ಬಿಡುಗಡೆ ಮಾಡಿದರು.


Click it and Unblock the Notifications











