ಸಿಲ್ಲಿ ವಿಚಾರಕ್ಕೆ ಜಗಳ ; ದಿ ವಿಲನ್ ನಟಿ ಶರಣ್ಯ ವಿರುದ್ಧ ಕೊಲೆ ಬೆದರಿಕೆ ದೂರು ದಾಖಲು..!
ಕೆಲವೊಮ್ಮೆ ಸಿಲ್ಲಿ ವಿಚಾರಕ್ಕೆ ಆರಂಭವಾಗುವ ಜಗಳ, ಬೇರೆ ಹಂತಕ್ಕೆ ತಲುಪಿ ಬಿಡುತ್ತೆ. ತಮಿಳು ನಟಿ ಶರಣ್ಯ ವಿಚಾರದಲ್ಲಿ ಸದ್ಯಕ್ಕೆ ಇದೇ ಆಗಿದೆ.
ಹೌದು, ತಮ್ಮ ಅಭಿನಯದಿಂದ ತಮಿಳುನಾಡಿನೆಲ್ಲೆಡೆ ಮನೆ ಮಾತಾದ ಶರಣ್ಯ, ತಾವು ಆಡಿದ್ದ ಮಾತುಗಳಿಂದನೇ ಸದ್ಯಕ್ಕೆ ನೆಮ್ಮದಿ ಕೆಡಿಸಿಕೊಂಡಿದ್ದಾರೆ. ಪಾರ್ಕಿಂಗ್ ವಿಚಾರದಲ್ಲಿ ಆದ ಜಗಳ, ಶರಣ್ಯ ಅವರನ್ನೇ ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸಿದೆ.

ಅಸಲಿಗೆ ಶರಣ್ಯ ಹಾಗೂ ಶ್ರೀದೇವಿ ನೆರೆಹೊರೆಯವರು. ಮೊದಲಿಂದ ಅಕ್ಕ-ಪಕ್ಕದ ಈ ಮನೆಗಳಲ್ಲಿ ಅನ್ಯೋನ್ಯತೆ ಇತ್ತಾ, ಇಲ್ಲವಾ ಗೊತ್ತಿಲ್ಲ. ಆದರೆ ಸದ್ಯಕ್ಕೆ ಪಾರ್ಕಿಂಗ್ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿದೆ.
ಇಷ್ಟೇ ಆಗಿದ್ದರೆ ಸಮಸ್ಯೆ ಉಲ್ಬಣ ವಾಗುತ್ತಿರಲಿಲ್ಲ. ಆದರೆ ಇಷ್ಟಕ್ಕೆ ಸುಮ್ಮನಾಗದ ಶ್ರೀದೇವಿ ಪೊಲೀಸ್ ಠಾಣೆಯ ಮೆಟ್ಟಿಲನ್ನೇರಿದ್ದಾರೆ. ಶರಣ್ಯ ವಿರುದ್ಧ ಕೊಲೆ ಬೆದರಿಕೆಯ ದೂರನ್ನ ದಾಖಲಿಸಿದ್ದಾರೆ. ಸಾಕ್ಷಿಗೆ ಸಿಸಿಟಿವಿ ಫೂಟೇಜ್‌ಗಳನ್ನು ನೀಡಿದ್ದಾರೆ.

ಇನ್ನೂ ಅತ್ತ ಶರಣ್ಯ ವಿರುದ್ಧ ಶ್ರೀದೇವಿ ಪೊಲೀಸ್ ರಿಗೆ ದೂರು ಕೊಟ್ಟ ಬೆನ್ನಲ್ಲಿಯೇ ಶರಣ್ಯ ಮೊದಲಿಂದನೂ ಜಗಳಗಂಟಿ, ಅವರು ಇರುವುದೇ ಹಾಗೇ ಎಂದು ತಮಿಳುನಾಡು ಮಾತನಾಡಿಕೊಳ್ಳುತ್ತಿದೆ. ಇನ್ನೂ ಇತ್ತ ಪಾರ್ಕಿಂಗ್ ವಿಚಾರಕ್ಕೆ ಈ ರೀತಿ ಶರಣ್ಯ ಜಗಳ ಮಾಡಿದ್ದಾರಾ ಎಂದು ಫ್ಯಾನ್ಸ್ ಹುಬ್ಬೇರಿಸಿದ್ದಾರೆ.
ಅಂದ್ಹಾಗೇ ತಾಯಿ ಪಾತ್ರಗಳಿಂದನೇ ಹೆಸರು ವಾಸಿಯಾಗಿರುವ ಶರಣ್ಯ, ಕನ್ನಡದಲ್ಲಿ ದಿ ವಿಲನ್ ಚಿತ್ರದಲ್ಲಿಯೂ ನಟಿಸಿದ್ದರು. ದಿ ವಿಲನ್ ಚಿತ್ರಕ್ಕೂ ಮುನ್ನ 'ಅಪ್ಪಾಜಿ', 'ಬಾಸ್', 'ಸಮಯಕ್ಕೊಂದು ಸುಳ್ಳು', 'ಪೊಲೀಸ್ ಕ್ವಾಟ್ರರ್ಸ್', 'ಯಕ್ಷ', 'ಚಾರುಲತಾ' ಸಿನಿಮಾಗಳಿಗೂ ಕೂಡ ಶರಣ್ಯ ಬಣ್ಣ ಹಚ್ಚಿದ್ದರು.
ಇನ್ನೂ ಥೆನ್‌ಮೆರ್ಕು ಪರುವಕಾಟ್ರು ಸಿನಿಮಾದಲ್ಲಿನ ಅಭಿನಯಕ್ಕೆ ಇವರಿಗೆ ಅತ್ಯುತ್ತಮ ನಟಿ' ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಎರಡು ಬಾರಿ ರಾಜ್ಯ ಪ್ರಶಸ್ತಿ, 5 ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದ ಹೆಗ್ಗಳಿಕೆ ಇವರದ್ದು. ತಮಿಳಿನ ಜೊತೆಗೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಶರಣ್ಯ ಪೊನ್ವಣ್ಣನ್ ನಟಿಸಿದ್ದಾರೆ
ಒಟ್ನಲ್ಲಿ ಸದ್ಯಕ್ಕೆ ಶರಣ್ಯ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದೇನಾಗುತ್ತೆವ ಅನ್ನುವುದನ್ನ ಕಾದು ನೋಡಬೇಕಿದೆ.


Click it and Unblock the Notifications











