ನಟಿ ವಿಜಯಲಕ್ಷ್ಮಿ ವಿರುದ್ಧ ಲಾಡ್ಜ್ ಮಾಲೀಕನಿಂದ ದೂರು
ನಟಿ ವಿಜಯಲಕ್ಷ್ಮಿ ವಿವಾದಗಳ ಸುಳಿಯಿಂದ ಹೊರಬರುವ ಲಕ್ಷ್ಣಗಳೇ ಗೋಚರಿಸುತ್ತಿಲ್ಲ. ಒಂದರಹಿಂದೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ ನಟಿ ವಿಜಯಲಕ್ಷ್ಮಿ.
ಇದೀಗ ಹೊಸ ಸುದ್ದಿಯೆಂದರೆ ನಟಿ ವಿಜಯಲಕ್ಷ್ಮಿ ವಿರುದ್ಧ ಲಾಡ್ಜ್ ಮಾಲೀಕರೊಬ್ಬರು ದೂರು ದಾಖಲಿಸಿದ್ದಾರೆ.
ಚೆನ್ನೈನ ಲಾಡ್ಜ್ ಮಾಲೀಕರೊಬ್ಬರು ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ ತಮಗೆ ಮೂರು ಲಕ್ಷ ರುಪಾಯಿ ಹಣ ನೀಡಬೇಕು, ಅದನ್ನು ವಸೂಲಿ ಮಾಡಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಫೆಬ್ರವರಿಯಿಂದಲೂ ಚೆನ್ನೈನಲ್ಲಿ ವಾಸ
ಬೆಂಗಳೂರಿನಲ್ಲಿದ್ದ ನಟಿ ವಿಜಯಲಕ್ಷ್ಮಿ ಆ ನಂತರ ಫೆಬ್ರವರಿಯಲ್ಲಿ ಚೆನ್ನೈಗೆ ವಾಸ್ತವ್ಯ ಬದಲಾಯಿಸಿದ್ದರು. ಚೆನ್ನೈನ ತಿರುವಾನ್ಮಿಯುರ್ ಎಂಬಲ್ಲಿ ಲಾಡ್ಜ್ ಒಂದರಲ್ಲಿ ಇದೇ ವರ್ಷದ ಫೆಬ್ರವರಿಯಿಂದಲೂ ವಿಜಯಲಕ್ಷ್ಮಿ ವಾಸವಿದ್ದರು.

ಲಾಡ್ಜ್ ಬಾಡಿಗೆ ನೀಡಿಲ್ಲ ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಅವರು ಲಾಡ್ಜ್ ನ ಬಾಡಿಗೆ ಮೊತ್ತ ನೀಡಿಲ್ಲವೆಂದು ಈಗ ಲಾಡ್ಜ್ ಮಾಲೀಕ ದೂರು ನೀಡಿದ್ದಾರೆ. ಲಾಡ್ಜ್ ರೂಂ ನ ಬಾಡಿಗೆ ಮೂರು ಲಕ್ಷ ರೂಪಾಯಿಯಾಗಿದ್ದು, ಆ ಹಣವನ್ನು ವಿಜಯಲಕ್ಷ್ಮಿ ನೀಡುತ್ತಿಲ್ಲ ಎಂದು ದೂರಿನಲ್ಲಿ ಲಾಡ್ಜ್ ಮಾಲೀಕ ಹೇಳಿದ್ದಾರೆ.

ಆತ್ಮಹತ್ಯೆ ಯತ್ನಿಸಿದ್ದ ವಿಜಯಲಕ್ಷ್ಮಿ
ಫೆಬ್ರವರಿಯಲ್ಲಿ ಚೆನ್ನೈನ ಲಾಡ್ಜ್‌ಗೆ ತೆರಳಿದ್ದ ವಿಜಯಲಕ್ಷ್ಮಿ ಅಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಕೆ ಪ್ರಾಣಾಪಾಯದಿಂದ ಪಾರಾದರು.

ರಾಜಕಾರಣಿ ಸಿಮನ್ ವಿರುದ್ಧ ಆರೋಪ
ನಾಮ್ ತಮಿಜಾರ್ ಕಚ್ಚಿ ನಾಯಕ ಸಿಮನ್ ನನಗೆ ಮೋಸ ಮಾಡಿದ್ದಾನೆ. ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನನ್ನನ್ನು ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪ ಮಾಡಿದ್ದರು. ನಟ ರವಿಪ್ರಕಾಶ್ ವಿರುದ್ಧವೂ ಅವರು ಆರೋಪ ಮಾಡಿದ್ದರು.


Click it and Unblock the Notifications











