twitter
    For Quick Alerts
    ALLOW NOTIFICATIONS  
    For Daily Alerts

    ನಟಿ ವಿಜಯಲಕ್ಷ್ಮಿ ವಿರುದ್ಧ ಲಾಡ್ಜ್ ಮಾಲೀಕನಿಂದ ದೂರು

    |

    ನಟಿ ವಿಜಯಲಕ್ಷ್ಮಿ ವಿವಾದಗಳ ಸುಳಿಯಿಂದ ಹೊರಬರುವ ಲಕ್ಷ್ಣಗಳೇ ಗೋಚರಿಸುತ್ತಿಲ್ಲ. ಒಂದರಹಿಂದೊಂದು ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಲೇ ಇದ್ದಾರೆ ನಟಿ ವಿಜಯಲಕ್ಷ್ಮಿ.

    ಇದೀಗ ಹೊಸ ಸುದ್ದಿಯೆಂದರೆ ನಟಿ ವಿಜಯಲಕ್ಷ್ಮಿ ವಿರುದ್ಧ ಲಾಡ್ಜ್ ಮಾಲೀಕರೊಬ್ಬರು ದೂರು ದಾಖಲಿಸಿದ್ದಾರೆ.

     ನಟಿ ವಿಜಯಲಕ್ಷ್ಮಿ-ರವಿಪ್ರಕಾಶ್ ಪ್ರಕರಣಕ್ಕೆ ಸಖತ್ ಟ್ವಿಸ್ಟ್ ನಟಿ ವಿಜಯಲಕ್ಷ್ಮಿ-ರವಿಪ್ರಕಾಶ್ ಪ್ರಕರಣಕ್ಕೆ ಸಖತ್ ಟ್ವಿಸ್ಟ್

    ಚೆನ್ನೈನ ಲಾಡ್ಜ್ ಮಾಲೀಕರೊಬ್ಬರು ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಜಯಲಕ್ಷ್ಮಿ ತಮಗೆ ಮೂರು ಲಕ್ಷ ರುಪಾಯಿ ಹಣ ನೀಡಬೇಕು, ಅದನ್ನು ವಸೂಲಿ ಮಾಡಿಕೊಡುವಂತೆ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

    ಫೆಬ್ರವರಿಯಿಂದಲೂ ಚೆನ್ನೈನಲ್ಲಿ ವಾಸ

    ಫೆಬ್ರವರಿಯಿಂದಲೂ ಚೆನ್ನೈನಲ್ಲಿ ವಾಸ

    ಬೆಂಗಳೂರಿನಲ್ಲಿದ್ದ ನಟಿ ವಿಜಯಲಕ್ಷ್ಮಿ ಆ ನಂತರ ಫೆಬ್ರವರಿಯಲ್ಲಿ ಚೆನ್ನೈಗೆ ವಾಸ್ತವ್ಯ ಬದಲಾಯಿಸಿದ್ದರು. ಚೆನ್ನೈನ ತಿರುವಾನ್ಮಿಯುರ್ ಎಂಬಲ್ಲಿ ಲಾಡ್ಜ್ ಒಂದರಲ್ಲಿ ಇದೇ ವರ್ಷದ ಫೆಬ್ರವರಿಯಿಂದಲೂ ವಿಜಯಲಕ್ಷ್ಮಿ ವಾಸವಿದ್ದರು.

    ಲಾಡ್ಜ್‌ ಬಾಡಿಗೆ ನೀಡಿಲ್ಲ ವಿಜಯಲಕ್ಷ್ಮಿ

    ಲಾಡ್ಜ್‌ ಬಾಡಿಗೆ ನೀಡಿಲ್ಲ ವಿಜಯಲಕ್ಷ್ಮಿ

    ವಿಜಯಲಕ್ಷ್ಮಿ ಅವರು ಲಾಡ್ಜ್‌ ನ ಬಾಡಿಗೆ ಮೊತ್ತ ನೀಡಿಲ್ಲವೆಂದು ಈಗ ಲಾಡ್ಜ್ ಮಾಲೀಕ ದೂರು ನೀಡಿದ್ದಾರೆ. ಲಾಡ್ಜ್ ರೂಂ ನ ಬಾಡಿಗೆ ಮೂರು ಲಕ್ಷ ರೂಪಾಯಿಯಾಗಿದ್ದು, ಆ ಹಣವನ್ನು ವಿಜಯಲಕ್ಷ್ಮಿ ನೀಡುತ್ತಿಲ್ಲ ಎಂದು ದೂರಿನಲ್ಲಿ ಲಾಡ್ಜ್ ಮಾಲೀಕ ಹೇಳಿದ್ದಾರೆ.

    ವಿಜಯಲಕ್ಷ್ಮಿಯ ಕಿರುಕುಳ ಆರೋಪಕ್ಕೆ ಸ್ಪಷ್ಟನೆ ನೀಡಿದ ನಟವಿಜಯಲಕ್ಷ್ಮಿಯ ಕಿರುಕುಳ ಆರೋಪಕ್ಕೆ ಸ್ಪಷ್ಟನೆ ನೀಡಿದ ನಟ

    ಆತ್ಮಹತ್ಯೆ ಯತ್ನಿಸಿದ್ದ ವಿಜಯಲಕ್ಷ್ಮಿ

    ಆತ್ಮಹತ್ಯೆ ಯತ್ನಿಸಿದ್ದ ವಿಜಯಲಕ್ಷ್ಮಿ

    ಫೆಬ್ರವರಿಯಲ್ಲಿ ಚೆನ್ನೈನ ಲಾಡ್ಜ್‌ಗೆ ತೆರಳಿದ್ದ ವಿಜಯಲಕ್ಷ್ಮಿ ಅಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಕೆ ಪ್ರಾಣಾಪಾಯದಿಂದ ಪಾರಾದರು.

    ರಾಜಕಾರಣಿ ಸಿಮನ್ ವಿರುದ್ಧ ಆರೋಪ

    ರಾಜಕಾರಣಿ ಸಿಮನ್ ವಿರುದ್ಧ ಆರೋಪ

    ನಾಮ್ ತಮಿಜಾರ್ ಕಚ್ಚಿ ನಾಯಕ ಸಿಮನ್ ನನಗೆ ಮೋಸ ಮಾಡಿದ್ದಾನೆ. ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ನನ್ನನ್ನು ಮದುವೆ ಆಗುವುದಾಗಿ ಹೇಳಿ ಮೋಸ ಮಾಡಿದ್ದಾನೆ ಎಂದು ವಿಜಯಲಕ್ಷ್ಮಿ ಆರೋಪ ಮಾಡಿದ್ದರು. ನಟ ರವಿಪ್ರಕಾಶ್ ವಿರುದ್ಧವೂ ಅವರು ಆರೋಪ ಮಾಡಿದ್ದರು.

    ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ದೂರು ನೀಡಿದ ರವಿಪ್ರಕಾಶ್ನಟಿ ವಿಜಯಲಕ್ಷ್ಮಿ ವಿರುದ್ಧ ಪೊಲೀಸ್ ದೂರು ನೀಡಿದ ರವಿಪ್ರಕಾಶ್

    English summary
    Complaint lodged against actress Vijayalakshi by a lodge owner. He accused that Vijayalkshmi refusing to give room rent of 3 lakh rs.
    Saturday, October 24, 2020, 9:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X