For Quick Alerts
  ALLOW NOTIFICATIONS  
  For Daily Alerts

  ಬೆಲೆಕಟ್ಟಲಾಗದ್ದನ್ನು ಕಳೆದುಕೊಂಡ ಸಂಗೀತ ಮಾಂತ್ರಿಕ ಇಳಯರಾಜ: ಪೊಲೀಸರಿಗೆ ದೂರು

  |

  ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ, 'ಬೆಲೆಕಟ್ಟಲಾಗದ ವಸ್ತುಗಳನ್ನು ನನ್ನಿಂದ ವ್ಯಕ್ತಿಯೊಬ್ಬರು ಕದ್ದಿದ್ದಾರೆ' ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ.

  Recommended Video

  ಮದುವೆಗೂ ಮುಂಚೆ ಅಪ್ಪನಾದ ಹಾರ್ದಿಕ್ ಪಾಂಡ್ಯ | Hardik Pandya

  ಖ್ಯಾತ ಪ್ರಸಾದ್ ಸ್ಟುಡಿಯೋದ ಮಾಲೀಕ ಸಾಯಿ ಪ್ರಸಾದ್ ವಿರುದ್ಧ ಇಳಯರಾಜ, ಚೆನ್ನೈನ ಪೊಲೀಸ್ ಕಮೀಷನರ್ ಅವರ ಬಳಿಯೇ ನೇರವಾಗಿ ದೂರು ದಾಖಲಿಸಿದ್ದಾರೆ. ತಮ್ಮ ಬೆಲೆಕಟ್ಟಲಾಗದ ವಸ್ತುವನ್ನು ಸಾಯಿ ಪ್ರಸಾದ್ ಕದ್ದು ಮಾರಾಟ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

  ರಾಜ್‌ಕುಮಾರ್ ಮೊದಲ ಸಿನಿಮಾ ಹಾಡು ಹಾಡುವಂತೆ ಮಾಡಿದ್ದು ಇವರೇರಾಜ್‌ಕುಮಾರ್ ಮೊದಲ ಸಿನಿಮಾ ಹಾಡು ಹಾಡುವಂತೆ ಮಾಡಿದ್ದು ಇವರೇ

  ಕಳೆದ 25 ವರ್ಷದಿಂದ ಇಳಯರಾಜ ಪ್ರಸಾದ್ ಸ್ಟುಡಿಯೋವನ್ನೇ ತಮ್ಮ ಕಚೇರಿಯನ್ನಾಗಿ ಮಾಡಿಕೊಂಡಿದ್ದರು. ಕಳೆದ 25 ವರ್ಷಗಳಿಂದಲೂ ಇಳಯರಾಜ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಆದರೆ ಈಗ ಅದೇ ಸ್ಟುಡಿಯೋದ ಮಾಲೀಕರ ವಿರುದ್ಧವೇ ದೂರು ದಾಖಲಿಸಿದ್ದಾರೆ. ಇಳಯರಾಜ ರಿಂದ ಕದಿಯಲ್ಪಟ್ಟ ಆ ಬೆಲೆಕಟ್ಟಲಾಗದ ವಸ್ತು ಏನೆಂದು ಮುಂದೆ ಓದಿ ತಿಳಿಯಿರಿ...

  25 ವರ್ಷಗಳಿಂದ ಪ್ರಸಾದ್ ಸ್ಟುಡಿಯೋದಲ್ಲಿದ್ದಾರೆ ಇಳಯರಾಜ

  25 ವರ್ಷಗಳಿಂದ ಪ್ರಸಾದ್ ಸ್ಟುಡಿಯೋದಲ್ಲಿದ್ದಾರೆ ಇಳಯರಾಜ

  ಕಳೆದ 25 ವರ್ಷಗಳಿಂದ ಪ್ರಸಾದ್ ಸ್ಟುಡಿಯೋದಲ್ಲಿಯೇ ಕೆಲಸ ಮಾಡಿದ್ದ ಇಳಯರಾಜ, ಅವರು ತಮ್ಮ ರಾಗ ಸಂಯೋಜನೆಗಳ ನೋಟ್‌ಗಳನ್ನು ಅಲ್ಲಿಯೇ ಇಟ್ಟಿದ್ದರು. ನೂರಾರು, ಸಾವಿರಾರು ರಾಗಗಳ ನೋಟ್‌ಗಳು ಅದರಲ್ಲಿದ್ದವು ಅವನ್ನು ಸಾಯಿ ಪ್ರಸಾದ್ ಕದ್ದಿದ್ದಾರೆಂದು ಇಳಯರಾಜ ದೂರು ದಾಖಲಿಸಿದ್ದಾರೆ.

  ಬೆಲೆಕಟ್ಟಲಾಗದ ಸಂಗೀತ ನೋಟ್ಸ್‌ಗಳು: ಇಳಯರಾಜ

  ಬೆಲೆಕಟ್ಟಲಾಗದ ಸಂಗೀತ ನೋಟ್ಸ್‌ಗಳು: ಇಳಯರಾಜ

  'ಬೆಲೆಕಟ್ಟಲಾಗದ ಸ್ವರಚಿತ ಸಂಗೀತದ ಹಲವಾರು ನೋಟ್ಸ್‌ಗಳನ್ನು ನಾನು ಪ್ರಸಾದ್ ಸ್ಟುಡಿಯೋದಲ್ಲಿಟ್ಟಿದ್ದೆ. ನನಗೆ ತಿಳಿದಿರುವ ವ್ಯಕ್ತಿಗಳು ಹೇಳಿದಂತೆ ಅದನ್ನೆಲ್ಲಾ ಸಾಯಿ ಪ್ರಸಾದ್ ತೆಗೆದುಕೊಂಡು ಕಾಳ ಸಂತೆಯಲ್ಲಿ ಸಾಕಷ್ಟು ದೊಡ್ಡ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಇಳಯರಾಜ.

  ಕನ್ನಡ ಕಿರುತೆರೆ ಕಾರ್ಯಕ್ರಮಕ್ಕೆ ಬರ್ತಾರೆ ಇಳಯರಾಜಕನ್ನಡ ಕಿರುತೆರೆ ಕಾರ್ಯಕ್ರಮಕ್ಕೆ ಬರ್ತಾರೆ ಇಳಯರಾಜ

  ದುಬಾರಿ ಸಂಗೀತ ಉಪಕರಣಗಳನ್ನು ಮಾರಿದ್ದಾನೆ: ಇಳಯರಾಜ

  ದುಬಾರಿ ಸಂಗೀತ ಉಪಕರಣಗಳನ್ನು ಮಾರಿದ್ದಾನೆ: ಇಳಯರಾಜ

  ಅಷ್ಟು ಮಾತ್ರವಲ್ಲದೆ ನನ್ನ ಹಲವಾರು ಸಂಗೀತ ಉಪಕರಣಗಳು ಸ್ಟುಡಿಯೋದಲ್ಲಿದ್ದವು. ಅವುಗಳಲ್ಲಿ ಹಲವನ್ನು ಹಾಳು ಮಾಡಿರುವ ಸಾಯಿ ಪ್ರಸಾದ್, ನನಗೆ ಸೇರಿದ ಕೋಟ್ಯಂತರ ಮೌಲ್ಯದ ಹಲವು ಸಂಗೀತ ಉಪಕರಣಗಳನ್ನು ಮಾರಿಬಿಟ್ಟಿದ್ದಾರೆ' ಎಂದು ಹೇಳಿದ್ದಾರೆ.

  ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ

  ನ್ಯಾಯಾಲಯದಲ್ಲಿ ಮೊಕದ್ದಮೆ ನಡೆಯುತ್ತಿದೆ

  ಈ ಮೊದಲಿಗೆ ಪ್ರಸಾದ್ ಸ್ಟುಡಿಯೋ ಎಲ್‌.ವಿ.ಪ್ರಸಾದ್ ಒಡೆತನದಲ್ಲಿತ್ತು. ನಂತರ ಈಗ ಅವರ ಮೊಮ್ಮಗ ಸಾಯಿ ಪ್ರಸಾದ್ ಯಜಮಾನಿಕೆ ವಹಿಸಿಕೊಂಡಿದ್ದು. ಆಗ ಇಳಯರಾಜ ಅನ್ನು ಸ್ಟುಡಿಯೋ ತೊರೆಯಲು ಸೂಚಿಸಲಾಗಿತ್ತು. ಸ್ಟುಡಿಯೋಕ್ಕೆ ಸಮಾನ ಬಂಡವಾಳ ಹೂಡಿದ್ದ ಇಳಯರಾಜ ಇದಕ್ಕೆ ಒಪ್ಪಲಿಲ್ಲ. ಈ ಪ್ರಕರಣ ಸದ್ಯಕ್ಕೆ ನ್ಯಾಯಾಲಯದಲ್ಲಿದೆ.

  ಇಳಯರಾಜಾ ಯಾಕಿಷ್ಟು ನಿರ್ದಯಿಯಾದರು?ಇಳಯರಾಜಾ ಯಾಕಿಷ್ಟು ನಿರ್ದಯಿಯಾದರು?

  English summary
  Noted music composer Ilayaraja gave police complaint on Prasad studio owner Sai Prasad for stealing his things.
  Saturday, August 1, 2020, 17:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X