ಹೃತಿಕ್ ರೋಷನ್, ಜ್ಯೂ.ಎನ್.ಟಿ.ಆರ್‌ಗೆ ಬೆದರಿದ್ರಾ ರಜಿನಿ ? ಆಗಸ್ಟ್ 14ಕ್ಕೆ ಬಿಡುಗಡೆಯಾಗಲ್ವಾ ತಲೈವಾನ ಕೂಲಿ ?

ಈ ಆಗಸ್ಟ್ 14ಕ್ಕೆ ಕೂಲಿ ಮತ್ತು ವಾರ್ 2 ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಲಿವೆ. ಎರಡು ಚಿತ್ರಗಳಲ್ಲಿ ದೊಡ್ಡ ಸ್ಟಾರ್‌ಗಳಿರುವ ಹಿನ್ನೆಲೆ ಚಿತ್ರರಂಗಕ್ಕೆ ಭಾರೀ ನಿರೀಕ್ಷೆಗಳಿವೆ. ಮತ್ತೊಂದು ಕಡೆ ಎರಡು ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗುವುದರಿಂದ ವ್ಯಾಪಾರ-ವ್ಯವಹಾರದಲ್ಲಿ ನಷ್ಟವಾಗುವ ಭಯ ಕೂಡ ಇದೆ. ಹೀಗಿರುವಾಗ ಇದೀಗ ಸೂಪರ್ ಸ್ಟಾರ್ ರಜಿನಿಕಾಂತ್ ಅಭಿನಯದ ಕೂಲಿ ಚಿತ್ರವನ್ನು ಮುಂದೂಡಲಾಗುತ್ತೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ.

ಕೂಲಿ ಚಿತ್ರತಂಡದಿಂದ ಆದ ಪ್ರಮಾದ ತಮಿಳು ಚಿತ್ರರಂಗದ ತಲೆಯನ್ನು ಕೂಡ ತಗ್ಗಿಸಿದೆ. ಹೌದು.. ಅಸಲಿಗೆ ಇತ್ತೀಚೆಗೆ ಕೂಲಿ ಚಿತ್ರತಂಡ ಆಮಿರ್ ಖಾನ್ ಅವರ ಪಾತ್ರದ ಪರಿಚಯವನ್ನು ಮಾಡಿಸಿತ್ತು. ಪೋಸ್ಟರ್ ಬಿಡುಗಡೆ ಮಾಡಿತ್ತು. ಆದರೆ.. ಈ ಸಮಯದಲ್ಲಿ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಚಿತ್ರವನ್ನು ನೋಡಿ ಎಂದು ಕೂಲಿ ತಂಡ ಐಮ್ಯಾಕ್ಸ್‌ನ ಲೋಗೋ ಬಳಸಿತ್ತು.

COOLIE POSTPONED Rajinikanth amp amp Lokesh Kanagaraj Film Faces IMAX Hurdle

ಇದೀಗ ವಿವಾದಕ್ಕೆ ಕಾರಣವಾಗಿದೆ. ಇದರಿಂದ ಕೂಲಿ ಚಿತ್ರದ ಬಿಡುಗಡೆ ಮುಂದಕ್ಕೋಗುವುದು ಖಚಿತ ಎನ್ನುವ ಮಾತು ಕೇಳಿ ಬರುತ್ತಿದೆ. ಯಾಕೆಂದರೆ.. ಸದ್ಯ ಐಮ್ಯಾಕ್ಸ್‌ ಫಾರ್ಮ್ಯಾಟ್‌ನಲ್ಲಿ ಬಿಡುಗಡೆಯಾಗುತ್ತಿರುವುದು ವಾರ್ 2 ಚಿತ್ರ ಮಾತ್ರ. ಈ ಕುರಿತು ವಾರ್ 2 ತಂಡದ ಜೊತೆ ಐಮ್ಯಾಕ್ಸ್ ಒಪ್ಪಂದ ಮಾಡಿಕೊಂಡಿದೆ.

ಇನ್ನು, ಒಮ್ಮೆ ಒಪ್ಪಂದವಾದರೆ ಒಂದು ಚಿತ್ರ ಐಮ್ಯಾಕ್ಸ್‌ನಲ್ಲಿ ಬಿಡುಗಡೆಯಾದ ಸಂದರ್ಭದಲ್ಲಿ ಭಾರತದೆಲ್ಲೆಡೆ ಬೇರೆ ಯಾವುದೇ ಚಿತ್ರವನ್ನು ಕೂಡ ಐಮ್ಯಾಕ್ಸ್‌ನಲ್ಲಿ ಬಿಡುಗಡೆ ಮಾಡುವಂತೆ ಇಲ್ಲ.

ಆದರೂ ಕೂಡ ಕೂಲಿ ಚಿತ್ರ ಐಮ್ಯಾಕ್ಸ್‌ನ ಲೋಗೋವನ್ನು ಉಪಯೋಗಿಸಿದೆ. ಈ ವಿಚಾರ ಈಗ ಹಲವರ ಅಚ್ಚರಿಗೆ ಕಾರಣವಾಗಿದ್ದು ಕೂಲಿ ಚಿತ್ರತಂಡ ಐಮ್ಯಾಕ್ಸ್‌ ಜೊತೆ ಒಪ್ಪಂದವನ್ನೇ ಮಾಡಿಕೊಳ್ಳದೇ ಪ್ರೇಕ್ಷಕರನ್ನು ಮತ್ತು ಚಿತ್ರರಂಗವನ್ನು ತಪ್ಪು ದಾರಿಗೆಳೆಯುವ ಕೆಲಸ ಮಾಡಿದೆ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಬಾಲಿವುಡ್‌ ಹಂಗಾಮಾ ವೆಬ್ ಸೈಟ್ ಕೂಡ ಕೂಲಿ ಮತ್ತು ಐಮ್ಯಾಕ್ಸ್ ನಡುವೆ ಯಾವುದೇ ಒಪ್ಪಂದವಾಗಿಲ್ಲ ಎಂದು ವರದಿಯನ್ನು ಮಾಡಿದೆ.

ಇನ್ನು 'ಒನ್ ಇಂಡಿಯಾ' ವೆಬ್ ಸೈಟ್‌ಗೆ ನಿರ್ಮಾಪಕರು ನೀಡಿರುವ ಹೇಳಿಕೆಯ ಪ್ರಕಾರ ಐಮ್ಯಾಕ್ಸ್‌ ಬ್ರ್ಯಾಂಡ್ ಬಳಸಲು ತುಂಬಾನೇ ಕಟ್ಟುನಿಟ್ಟಾದ ನಿಯಮಗಳಿವೆ. ಆ ಪೈಕಿ ಐಮ್ಯಾಕ್ಸ್‌ ಹೆಸರು ಉಪಯೋಗಿಸಿದಾಗ ಬೇರೆಯ ಫಾರ್ಮ್ಯಾಟ್‌ ಗಳ ಹೆಸರನ್ನು ಬಳಸಬಾರದು ಎನ್ನುವುದು ಕೂಡ ಒಂದು. ಆದರೆ ಈ ನಿಯಮವನ್ನು ಕೂಡ ಗಾಳಿಗೆ ತೂರಿರುವ ಕೂಲಿ ಚಿತ್ರತಂಡ ಕೂಲಿ ಪೋಸ್ಟರ್‌ನಲ್ಲಿ ಐಮ್ಯಾಕ್ಸ್ ಜೊತೆಯಲ್ಲಿ ಡಿ-ಬಾಕ್ಸ್ ಮತ್ತು 4DX ಫಾರ್ಮ್ಯಾಟ್‌ಗಳನ್ನು ಕೂಡ ಉಲ್ಲೇಖಿಸಿದೆ. 'Watch it in IMAX' ಎಂಬ ಪದ ಬಳಕೆ ಕೂಡ IMAX ಮಾನದಂಡಕ್ಕೆ ತಕ್ಕಂತೆ ಇಲ್ಲ.

coolie-postponed-rajinikanth-lokesh-kanagaraj-film-faces-imax-hurdle

ಈ ಎಲ್ಲಾ ಕಾರಣಗಳಿಂದ ಸದ್ಯ ಕೂಲಿ ಈ ಆಗಸ್ಟ್ 14ರಂದು ಹೃತಿಕ್ ರೋಷನ್ ಮತ್ತು ಜ್ಯೂ,ಎನ್.ಟಿ.ಆರ್ ಅಭಿನಯದ ವಾರ್ ಚಿತ್ರದ ಎದುರು ಬಿಡುಗಡೆಯಾಗುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನು ಇದೇ ಸಮಯದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಕೂಲಿ ನಿರ್ಮಾಣ ಸಂಸ್ಥೆ ಐಮ್ಯಾಕ್ಸ್ ಸಂಸ್ಥೆ ಜೊತೆ ಮಾತುಕಥೆ ನಡೆಸಿರುವ ಸಾಧ್ಯತೆ ಕೂಡ ಇದ್ದು, ಐಮ್ಯಾಕ್ಸ್‌ ಕೂಲಿಯನ್ನು ಪ್ರದರ್ಶಿಸಲು ಮುಂದಾದರೆ ಬಿಡುಗಡೆ ಮುಂದಕ್ಕೆ ಹೋಗುವುದು ಗ್ಯಾರಂಟಿ. ಹೀಗಾಗಿ ಐಮ್ಯಾಕ್ಸ್ ಆಲೋಚನೆ ಕೈ ಬಿಟ್ಟು ಎಲ್ಲರಂತೆ ಕೂಲಿ ಚಿತ್ರವನ್ನು ಚಿತ್ರತಂಡ ಬಿಡುಗಡೆ ಮಾಡುತ್ತಾ ಎನ್ನುವ ಪ್ರಶ್ನೆ ಕೂಡ ಈಗ ಹಲವರಲ್ಲಿದೆ.

ಒಟ್ನಲ್ಲಿ ಕೂಲಿ ಚಿತ್ರದ ಬಿಡುಗಡೆಯ ವಿಚಾರದಲ್ಲಿ ಸದ್ಯ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ. ಚಿತ್ರತಂಡ ಈ ಕುರಿತು ಸ್ಪಷ್ಟನೆಯನ್ನು ನೀಡುತ್ತಾ ? ಅಂದುಕೊಂಡತೆ ಕೂಲಿ ಈ ಆಗಸ್ಟ್ 14ರಂದು ಬಿಡುಗಡೆಯಾಗುತ್ತಾ ? ಬಿಡುಗಡೆಯಾದರೆ ಬಾಕ್ಸಾಫೀಸ್‌ನ ಈ ಸಮರದಲ್ಲಿ ಗೆಲ್ಲೋದು ಯಾರು ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Coolie postponed? Rajinikanth & Lokesh Kanagaraj's film faces IMAX controversy, sparking delay rumors for its August 2025 release. Latest news on Superstar's next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X