ಸಂಭಾವನೆಯಲ್ಲಿ 'ಕೂಲಿ' ದಾಖಲೆ; ರಜನಿಕಾಂತ್, ನಾಗ್, ಉಪ್ಪಿ ಪಡೆದ ಸಂಭಾವನೆ ಎಷ್ಟು?

ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಮೆಗಾ ಮಲ್ಟಿಸ್ಟಾರರ್ ಸಿನಿಮಾ 'ಕೂಲಿ'. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಆರಂಭವಾಗಿದೆ. ಆಗಸ್ಟ್ 14ಕ್ಕೆ ಸಿನಿಮಾ ತೆರೆಗೆ ಬರಲಿದ್ದು ಈಗಾಗಲೇ ದಿನಗಣನೆ ಶುರುವಾಗಿದೆ. ಸಿನಿಮಾ ಬಿಡುಗಡೆಗೆ 98 ದಿನ ಬಾಕಿಯಿದೆ.

'ಜೈಲರ್' ಬ್ಲಾಕ್‌ಬಸ್ಟರ್ ಹಿಟ್ ಬಳಿಕ ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಅದ್ಧೂರಿ ಸಿನಿಮಾ ಇದು. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತಯಾರಾಗುತ್ತಿದೆ. ಬ್ಲಾಕ್ ಬಸ್ಟರ್ ಸಿನಿಮಾಗಳ ಸರದಾರ ಲೋಕೇಶ್ ಕನಕರಾಜ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಕಾಂಬಿನೇಷನ್ ಇನ್ನಿಲ್ಲದ ಹೈಪ್ ಕ್ರಿಯೇಟ್ ಮಾಡಿದೆ.

Coolie star cast remuneration Know fees charged by Rajinikanth Upendra and oters

'ಕೂಲಿ' ಚಿತ್ರದಲ್ಲಿ ರಜನಿಕಾಂತ್ ಜೊತೆ ಘಟಾನುಘಟಿ ಕಲಾವಿದರು ತೆರೆಹಂಚಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಅಕ್ಕಪಕ್ಕದ ಇಂಡಸ್ಟ್ರಿಗಳಿಂದ ಸ್ಟಾರ್ ನಟರನ್ನು ಕಾಸ್ಟ್ ಮಾಡಲಾಗಿದೆ. ಕನ್ನಡ ನಟ ಉಪೇಂದ್ರ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ನಟ ನಾಗಾರ್ಜುನ ಸಹ ಬಣ್ಣ ಹಚ್ಚಿದ್ದು ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ.

ಅನಿರುದ್ಧ್ ರವಿಚಂದರ್ ಸಂಗೀತ ಚಿತ್ರಕ್ಕಿದೆ. ದೊಡ್ಡ ಕ್ಯಾನ್ವಾಸ್‌ನಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಈಗಾಗಲೇ ಸಣ್ಣ ಸಣ್ಣ ಝಲಕ್ ಬಂದು ಕುತೂಹಲ ಹೆಚ್ಚಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ 'ಕೂಲಿ' ಸಿನಿಮಾ ನಿರ್ಮಾಣವಾಗುತ್ತಿದ್ದು 300 ಕೋಟಿ ರೂ. ಸಂಭಾವನೆ ರೂಪದಲ್ಲೇ ಕಲಾವಿದರು, ತಂತ್ರಜ್ಞರಿಗೆ ಸಿಕ್ಕಿರುವ ಅಂದಾಜಿದೆ. ಸದ್ಯ ರಜನಿಕಾಂತ್, ನಿರ್ದೇಶನ ಲೋಕೇಶ್ ಕನಕರಾಜ್ ಸೇರಿ ಚಿತ್ರತಂಡದ ಸದಸ್ಯರು ಪಡೆದ ಸಂಭಾವನೆ ವಿಚಾರ ಟಾಕ್ ಆಫ್ ದ ಟೌನ್ ಆಗಿದೆ.

ಸಾಮಾನ್ಯವಾಗಿ ದೊಡ್ಡ ಸಿನಿಮಾಗಳ ಕಲಾವಿದರು, ತಂತ್ರಜ್ಞರ ಸಂಭಾವನೆ ಲೆಕ್ಕ ಗುಟ್ಟಾಗಿಯೇ ಇರುತ್ತದೆ. ಆಗೊಮ್ಮೆ ಈಗೊಮ್ಮೆ ಇದು ಬಹಿರಂಗವಾಗುತ್ತದೆ. 'ಕೂಲಿ' ಚಿತ್ರದ ಕಲಾವಿದರ ಸಂಭಾವನೆ ಬಗ್ಗೆಯೂ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ನ್ಯೂಸ್18 ಸೇರಿ ಕೆಲ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಇದೇ ವಿಚಾರ ಭಾರೀ ಚರ್ಚೆ ಹುಟ್ಟುಹಾಕಿದೆ.

Coolie star cast remuneration Know fees charged by Rajinikanth Upendra and oters

ಇತ್ತೀಚೆಗೆ ದೊಡ್ಡ ಸಿನಿಮಾಗಳ ಬ್ಯುಸಿನೆಸ್ ವಿಚಾರದಲ್ಲಿ ಓಟಿಟಿ ರೈಟ್ಸ್ ಪ್ರಾಮುಖ್ಯತೆ ಪಡೆದುಕೊಳ್ತಿದೆ. ಕ್ರೇಜ್‌ಗೆ ತಕ್ಕಂತೆ ದೊಡ್ಡ ಸಿನಿಮಾಗಳ ಡಿಜಿಟಲ್ ರೈಟ್ಸ್ ದುಬಾರಿ ಬೆಲೆಗೆ ಬಿಕರಿಯಾಗುತ್ತದೆ. ಇದೇ ಕಾರಣಕ್ಕೆ ಕಲಾವಿದರು ಸಂಭಾವನೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸದ್ಯ ಅಮೇಜಾನ್ ಪ್ರೈಂ ಸಂಸ್ಥೆ 120 ಕೋಟಿ ರೂ.ಗೆ 'ಕೂಲಿ' ಚಿತ್ರದ ಓಟಿಟಿ ರೈಟ್ಸ್ ಕೊಂಡುಕೊಂಡಿದೆ ಎನ್ನಲಾಗ್ತಿದೆ. ಇದೆಲ್ಲದರ ಮಧ್ಯೆ ರಜನಿಕಾಂತ್ ಸಂಭಾವನೆ ವಿಚಾರ ಎಲ್ಲರ ಹುಬ್ಬೇರಿಸಿದೆ.

ರಜನಿಕಾಂತ್ ಸಂಭಾವನೆ?

'ಜೈಲರ್' ಬ್ಲಾಕ್‌ಬಸ್ಟರ್ ಹಿಟ್ ಬೆನ್ನಲ್ಲೇ 'ಕೂಲಿ' ಸಿನಿಮಾ ಮಾತುಕತೆ ನಡೆದಿತ್ತು. ರಜನಿಕಾಂತ್ ಕ್ರೇಜ್ ಎಂಥಾದ್ದು ಎಂದು ಗೊತ್ತಿಯಿದೆ. ಬಹಳ ಹಿಂದೆ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆದು ತಲೈವಾ ದಾಖಲೆ ಬರೆದಿದ್ದರು. ವಯಸ್ಸು 70 ದಾಟಿದ್ರು ಸೂಪರ್ ಸ್ಟಾರ್ ಸ್ಟೈಲ್, ಖದಕ್ ಕಮ್ಮಿ ಆಗಿದೆ. ಅದಕ್ಕೆ ತಕ್ಕಂತೆ ಸಂಭಾವನೆ ಡಿಮ್ಯಾಂಡ್ ಮಾಡುತ್ತಾರೆ. ಕೂಲಿ ಚಿತ್ರಕ್ಕೆ ತಲೈವಾ 280 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ನ್ಯೂಸ್18 ವರದಿ ಮಾಡಿದೆ.

ಏಷ್ಯಾದಲ್ಲೇ ಚಿತ್ರವೊಂದಕ್ಕೆ ನಾಯಕ ನಟನಿಗೆ ಕೊಟ್ಟಿರುವ ಅತಿ ಹೆಚ್ಚು ಸಂಭಾವನೆ ಇದು ಎನ್ನಲಾಗ್ತಿದೆ. ಈ ಮೂಲಕ ದಳಪತಿ ವಿಜಯ್, ಜಾಕಿಚಾನ್ ದಾಖಲೆಗಳನ್ನು ಮುರಿದು ರಜನಿಕಾಂತ್ ಹೊಸ ದಾಖಲೆ ಬರೆದಂತಾಗುತ್ತದೆ. ಸೆನ್ಸೇಷನಲ್ ಡೈರೆಕ್ಟರ್ ಲೋಕೇಶ್ ಕನಕರಾಜ್ ಜೊತೆ ತಲೈವಾ ಕೈ ಜೋಡಿಸಿರುವುದೇ ಇದಕ್ಕೆಲ್ಲಾ ಕಾರಣ ಎನ್ನಲಾಗ್ತಿದೆ.

60 ಕೋಟಿ ರೂ. ಪಡೆದ ನಿರ್ದೇಶಕ?

'ಕೈದಿ', 'ಮಾಸ್ಟರ್', 'ವಿಕ್ರಂ' ಹಾಗೂ 'ಲಿಯೋ' ರೀತಿಯ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ಲೋಕೇಶ್ ಕನಕರಾಜ್ ಕಟ್ಟಿಕೊಟ್ಟಿದ್ದಾರೆ. 'ಲಿಯೋ' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಬಾಕ್ಸಾಫೀಸ್‌ನಲ್ಲಿ ಗೆಲುವಿನ ದಡ ಸೇರಿತ್ತು. ತಲೈವಾಗೆ ಆಕ್ಷನ್ ಕಟ್ ಹೇಳ್ತಾರೆ ಅಂದ್ರೆ ಸಿನಿಮಾ ಹಿಟ್ ಅಂತ್ಲೇ ಅರ್ಥ. ಅದೇ ಕಾರಣಕ್ಕೆ ಲೋಕೇಶ್ ಕೂಡ ಭಾರೀ ಮೊತ್ತದ ಸಂಭಾವನೆ ಜೇಬಿಗಿಳಿಸಿದ್ದಾರೆ. 60 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

ನಾಗಾರ್ಜುನ ಸಂಭಾವನೆ?

'ಕೂಲಿ' ಚಿತ್ರದಲ್ಲಿ ಸಿಮೊನ್ ಎಂಬ ಪವರ್‌ಫುಲ್ ಪಾತ್ರದಲ್ಲಿ ನಾಗಾರ್ಜುನ ಅಬ್ಬರಿಸಿದ್ದಾರೆ. ನಾಗ್ ಚಿತ್ರಕ್ಕಾಗಿ 24 ಕೋಟಿ ಚಾರ್ಜ್ ಮಾಡಿದ್ದಾರೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವರದಿ ಮಾಡಿದೆ. ತೆಲುಗಿನಲ್ಲಿ ಬಹುಬೇಡಿಕೆಯ ನಟನಾಗಿ ನಾಗಾರ್ಜುನ ಗುರ್ತಿಸಿಕೊಂಡಿದ್ದಾರೆ. ಇನ್ನು 'ಕೂಲಿ' ಸಿನಿಮಾ ತೆಲುಗಿಗೂ ಡಬ್ ಆಗಿ ದೊಡ್ಡದಾಗಿ ಬಿಡುಗಡೆ ಆಗುತ್ತದೆ. ನಾಗ್ ಇರೋದು ಚಿತ್ರಕ್ಕೆ ಬಲ ತುಂಬಿದಂತಾಗುತ್ತದೆ.

ಆಮೀರ್ ಖಾನ್ ಸಂಭಾವನೆ?

ಕೊನೆ ಹಂತದಲ್ಲಿ ಬಾಲಿವುಡ್ ನಟ ಆಮೀರ್ ಖಾನ್ ಕೂಡ 'ಕೂಲಿ' ಚಿತ್ರದಲ್ಲಿ ನಟಿಸುವ ಸುದ್ದಿ ಗೊತ್ತಾಗಿತ್ತು. ಜೈಪುರದಲ್ಲಿ 5 ತಿಂಗಳ ಹಿಂದೆ ಆಮೀರ್ ಖಾನ್ ನಟಿಸಿರುವ ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿತ್ತು. ಚಿತ್ರದಲ್ಲಿ ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಷ್ಟ್ ಎಂಟ್ರಿ ಹಿಂದಿ ಬೆಲ್ಟ್‌ನಲ್ಲಿ ಚಿತ್ರಕ್ಕೆ ಪ್ಲಸ್ ಆಗಲಿದೆ. ಅಂದಹಾಗೆ ಅತಿಥಿ ಪಾತ್ರಕ್ಕಾಗಿ ಆಮೀರ್ 25 ರಿಂದ 30 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗ್ತಿದೆ.

ಸಂಭಾವನೆ ಹೆಚ್ಚಿಸದ ಉಪ್ಪಿ?

ಸಾಮಾನ್ಯವಾಗಿ ದೊಡ್ಡ ಸಿನಿಮಾ ಅಂದಾಕ್ಷಣ ಕಲಾವಿದರು ಸಂಭಾವನೆ ಹೆಚ್ಚಿಸಿಕೊಳ್ಳುತ್ತಾರೆ. 'ಕೂಲಿ' ಚಿತ್ರದಲ್ಲಿ ಕನ್ನಡ ನಟ ಉಪೇಂದ್ರ ಕೂಡ ಅಬ್ಬರಿಸಿದ್ದಾರೆ. ಕಲೀಶ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಆದರೆ ರಿಯಲ್ ಸ್ಟಾರ್ ತಮ್ಮ ಸಂಭಾವನೆ ಹೆಚ್ಚಿಸಿಕೊಳ್ಳಲಿಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ. ಕನ್ನಡದಲ್ಲಿ ಚಿತ್ರವೊಂದಕ್ಕೆ ಉಪ್ಪಿ 3ರಿಂದ 4 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನುವ ಅಂದಾಜಿದೆ. 'ಕೂಲಿ' ಚಿತ್ರಕ್ಕೂ ಅದೇ ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತಿದೆ.

ಪೂಜಾ ಸ್ಪೆಷಲ್ ಸಾಂಗ್

ಮುಂಬೈ ಬೆಡಗಿ ಪೂಜಾ ಹೆಗ್ಡೆ 'ಕೂಲಿ' ಚಿತ್ರದ ಐಟಂ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಇನ್ನು ಸ್ಪೆಷಲ್ ಸಾಂಗ್‌ಗಾಗಿ ಪೂಜಾ 1.50 ಕೋಟಿ ರೂ.ಯಿಂದ 2 ಕೋಟಿ ರೂ.ವರೆಗೆ ಚಾರ್ಜ್ ಮಾಡಿರುವು ಅಂದಾಜಿದೆ.

ಇತರೆ ಕಲಾವಿದರು

ಶ್ರುತಿ ಹಾಸನ್, ಸತ್ಯರಾಜ್, ರೆಬಾ ಮೋನಿಕಾ ಜಾನ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಎಲ್ಲರೂ ತಮ್ಮ ಮಾಮೂಲಿ ಸಂಭಾವನೆಯನ್ನೇ 'ಕೂಲಿ'ಚಿತ್ರಕ್ಕೂ ಪಡೆದಿದ್ದಾರೆ. ಹೆಚ್ಚು ಡಿಮ್ಯಾಂಡ್ ಮಾಡಲಿಲ್ಲ 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್' ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಬಾಕ್ಸಾಫೀಸ್ ಕ್ಲ್ಯಾಸ್

ಆಗಸ್ಟ್ 14ಕ್ಕೆ 'ಕೂಲಿ' ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಆದರೆ ಅದೇ ದಿನ ಬಾಲಿವುಡ್ 'ವಾರ್'-2 ಸಿನಿಮಾ ತೆರೆಗಪ್ಪಳಿಸುವ ಸಾಧ್ಯತೆಯಿದೆ. ಕನ್ನಡದ '45' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಹಾಗಾಗಿ 3 ಸಿನಿಮಾಗಳ ನಡುವೆ ಬಾಕ್ಸಾಫೀಸ್ ಕ್ಲ್ಯಾಶ್ ಏರ್ಪಡುವ ಸಾಧ್ಯತೆಯಿದೆ. '45' ಚಿತ್ರದಲ್ಲಿ ಉಪೇಂದ್ರ ಕೂಡ ನಟಿಸಿದ್ದು ಬಹಳ ಕುತೂಹಲ ಮೂಡಿಸಿದೆ. ಯಾವುದಾದರೂ ಸಿನಿಮಾ ರಿಲೀಸ್ ಡೇಟ್ ಬದಲಿಸುತ್ತಾ ಕಾದು ನೋಡಬೇಕಿದೆ.

More from Filmibeat

English summary
Coolie Cast Salaries Revealed; Rajininath shocking remuneration for Lokesh kanakaraj directional
Read more about: rajinikanth upendra kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X