ಹಾಲಿವುಡ್ ಕಥೆ ಕದ್ದು ಸಿಕ್ಕಿಬಿತ್ತಾ ಅಜಿತ್ 'ವಿದಾಮುಯರ್ಚಿ' ಟೀಂ?; 150 ಕೋಟಿ ರೂ. ಸಂಕಷ್ಟ!

ರೀಮೇಕ್ ಸಿನಿಮಾಗಳ ಟ್ರೆಂಡ್ ಕಮ್ಮಿ ಆಗಿದ್ದರೂ ಆಗೊಮ್ಮೆ ಈಗೊಮ್ಮೆ ಇಂತಹ ಪ್ರಯತ್ನ ನಡೀತಿದೆ. ಇತ್ತೀಚೆಗೆ ವಿದೇಶದ ಸಿನಿಮಾಗಳಿಂದ ಪ್ರೇರಣೆಗೊಂಡು ಸಿನಿಮಾ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಲಿವುಡ್ ಕಥೆಗಳನ್ನು ಕದ್ದು ಸಿನಿಮಾ ಮಾಡುವವರು ಇದ್ದಾರೆ. ಇದೀಗ ಅಜಿತ್ ನಟನೆಯ 'ವಿದಾಮುಯರ್ಚಿ' ಚಿತ್ರಕ್ಕೆ ಸಂಕಷ್ಟ ಎದುರಾಗಿದೆ ಎನ್ನಲಾಗ್ತಿದೆ.

ಥಲಾ ಅಜಿತ್ ನಟನೆಯ 'ವಿದಾಮುಯರ್ಚಿ' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿತ್ತು. ಸ್ಟೈಲಿಶ್ ಮೇಕಿಂಗ್‌ನಿಂದ ಸಣ್ಣ ಝಲಕ್ ಅಭಿಮಾನಿಗಳ ಮನಗೆದ್ದಿದೆ. ಸಿನಿಮಾ ಮೇಲೆ ಭರವಸೆ ಮೂಡಿದೆ. ಆದರೆ ಟೀಸರ್ ನೋಡಿದಾಗಲೇ ಇದು ಹಾಲಿವುಡ್‌ನ 'ಬ್ರೇಕ್‌ಡೌನ್' ಸಿನಿಮಾ ರೀಮೆಕ್ ರೀತಿ ಇದೆ ಎನ್ನುವ ಚರ್ಚೆ ಶುರುವಾಗಿತ್ತು.

Copyright issue for Ajith s Vidaamuyarchi Is Paramount Pictures sent a notice to makers

ಸಾಕಷ್ಟು ಜನ 90ರ ದಶಕದ 'ಬ್ರೇಕ್‌ಡೌನ್' ಸಿನಿಮಾ ನೋಡಿ ಹೌದಲ್ವಾ? ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ಇದೀಗ ಲೈಕಾ ಸಂಸ್ಥೆಗೆ ಈ ಸಂಬಂಧ ಲೀಗಲ್ ನೋಟಿಸ್ ಬಂದಿದೆ ಎಂದು ತಮಿಳು ವೆಬ್‌ಸೈಟ್‌ಗಳಲ್ಲಿ ವರದಿಯಾಗಿದೆ. ರೀಮೆಕ್ ರೈಟ್ಸ್ ಪಡೆಯದೇ ತಮ್ಮ ಚಿತ್ರವನ್ನು ಕಾಪಿ ಮಾಡಿದ್ದಾರೆ ಎಂದು ಆರೋಪಿಸಿ ಪಾರಮೌಂಟ್ ಪ್ರೊಡಕ್ಷನ್ಸ್ ಲೀಗಲ್ ನೋಟಿಸ್ ಕಳುಹಿಸಿದೆ ಎಂದು ತಮಿಳು ಪತ್ರಕರ್ತ ವಲೈಪೆಚು ಜೆ ಬಿಸ್ಮಿ ಹೇಳಿರುವುದು ವೈರಲ್ ಆಗ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದೆ.

1997ರಲ್ಲಿ ಡಿನೋ ಡಿ ಲಾರೆಂಟಿಸ್ ಕಂಪನಿ ಹಾಗೂ ಸ್ಪೆಲ್ಲಿಂಗ್ ಫಿಲ್ಮ್ಸ್ ಸಂಸ್ಥೆಗಳು 'ಬ್ರೇಕ್‌ಡೌನ್' ಸಿನಿಮಾ ನಿರ್ಮಾಣ ಮಾಡಿದ್ದವು. ಪಾರಮೌಂಟ್ ಪಿಕ್ಚರ್ಸ್ ಸಂಸ್ಥೆ ಚಿತ್ರವನ್ನು ವಿತರಣೆ ಮಾಡಿತ್ತು. ಕರ್ಟ್ ರಸ್ಸೆಲ್, ಜೆ. ಟಿ. ವಾಲ್ಷ್ ಹಾಗೂ ಕ್ಯಾಥ್ಲೀನ್ ಕ್ವಿನ್ಲಾನ್ ಚಿತ್ರದ ಲೀಡ್ ರೋಲ್‌ಗಳಲ್ಲಿ ನಟಿಸಿದ್ದರು. ಸಿಂಪಲ್ ಕಥೆಯನ್ನು ಪರಿಣಾಮಕಾರಿಯಾಗಿ ತೆರೆಗೆ ತರಲಾಗಿತ್ತು.

Copyright issue for Ajith s Vidaamuyarchi Is Paramount Pictures sent a notice to makers

ಮದುವೆಯಾದ ನಾಯಕ ಹಾಗೂ ನಾಯಕಿ ಪ್ರವಾಸ ಕೈಗೊಳ್ಳುತ್ತಾರೆ. ಈ ಹಾದಿಯಲ್ಲಿ ನಾಯಕನ ಪತ್ನಿಯ ಅಪಹರಣವಾಗುತ್ತದೆ. ತನ್ನ ಚಾಣಾಕ್ಷತನದಿಂದ ಆಕೆಯನ್ನು ನಾಯಕ ಹೇಗೆ ವಾಪಸ್ ಕರೆ ತರುತ್ತಾನೆ ಎನ್ನುವುದು 'ಬ್ರೇಕ್‌ಡೌನ್' ಸಿನಿಮಾ ಕಥೆ. ಸದ್ಯ ತಮಿಳಿನ 'ವಿದಾಮುಯರ್ಚಿ' ಚಿತ್ರದಲ್ಲಿ ಅಜಿತ್ ಹಾಗೂ ತ್ರಿಷಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಅರ್ಜುನ್ ಸರ್ಜಾ, ರೆಗಿನಾ ಕಸೆಂದ್ರ, ಆರವ್ ಚಿತ್ರದ ತಾರಾಗಣದಲ್ಲಿದ್ದಾರೆ. ಮಾಗಿಳ್ ತಿರುಮೇನಿ 'ವಿದಾಮುಯರ್ಚಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಬಹಳ ಅದ್ಧೂರಿಯಾಗಿ ಲೈಕಾ ಸಂಸ್ಥೆ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಸದ್ಯ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಶುರುವಾಗಿದೆ. ಸಂಕ್ರಾಂತಿ ಸಂಭ್ರಮದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿತ್ತು.

ಸದ್ಯ ಪಾರಮೌಂಟ್ ಪಿಕ್ಚರ್ಸ್ ಸಂಸ್ಥೆಯಿಂದ ಲೀಗಲ್ ನೋಟಿಸ್ ಬಂದಿರುವುದರಿಂದ 'ವಿದಾಮುಯರ್ಚಿ' ಸಿನಿಮಾ ರಿಲೀಸ್ ತಡವಾಗುವ ಸಾಧ್ಯತೆಯಿದೆ. 150 ಕೋಟಿ ರೂ. ಪರಿಹಾರ ಕೊಡುವಂತೆ ಕೇಳಿದ್ದಾರೆ ಎನ್ನಲಾಗ್ತಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಹಿನ್ನಡೆ ಆಗಲಿದೆ. ಇನ್ನುಳಿದಂತೆ ದೊಡ್ಡಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ರೆಡ್ ಜೈಂಟ್ ಮೂವೀಸ್ ಸಂಸ್ಥೆ ವಿತರಣೆ ಹಕ್ಕು ಕೊಂಡುಕೊಂಡಿದೆ.

ಇನ್ನು ನೆಟ್‌ಫ್ಲಿಕ್ಸ್‌ ಸಂಸ್ಥೆ 'ವಿದಾಮುಯರ್ಚಿ' ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದೆ. ಅಂದಾಜು 100 ಕೋಟಿ ರೂ.ಗೆ ಡೀಲ್ ಕುದುರಿಸಲಾಗಿದೆ ಎನ್ನಲಾಗ್ತಿದೆ. ಸನ್ ನೆಟ್‌ವರ್ಕ್ ದಾಖಲೆ ಮೊತ್ತಕ್ಕೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಸ್ವಂತಪಡಿಸಿಕೊಂಡಿದೆ. ಚಿತ್ರಕ್ಕೆ ಓಂ ಪ್ರಕಾಶ್ ಹಾಗೂ ನೀರವ್ ಶಾ ಛಾಯಾಗ್ರಹಣವಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಅಜೆರ್ಬೈಜಾನ್ ದೇಶದಲ್ಲಿ 'ವಿದಾಮುಯರ್ಚಿ' ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದೆ. ಸ್ಟಂಟ್ಸ್ ಮಾಡುವ ವೇಳೆ ಚಿತ್ರತಂಡ ಸಂಕಷ್ಟಕ್ಕೂ ಸಿಲುಕಿತ್ತು. ಅದಕ್ಕೆ ಸಂಬಂಧಿಸಿದ ವೀಡಿಯೋಗಳು ಹಿಂದೆ ವೈರಲ್ ಆಗಿದ್ದು ಗೊತ್ತೇಯಿದೆ.

More from Filmibeat

English summary
Is Ajith Starrer Vidaamuyarchi is a remake of Hollywood film breakdown, lyca production faces legal trouble;
Read more about: ajith tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X