ದಳಪತಿ ವಿಜಯ್ 100 ಕೋಟಿ ಸಂಭಾವನೆಗೆ ಕತ್ತರಿ?
ಭಾರತ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಎಂದು ಹೇಳಲಾಗುತ್ತೆ. ಒಂದು ಸಿನಿಮಾಗೆ ರಜಿನಿಕಾಂತ್ 80ರಿಂದ 90 ಕೋಟಿ ಪಡೆಯುತ್ತಾರೆ ಎನ್ನುವ ಸುದ್ದಿ ಇದೆ. ಸಂಭಾವನೆ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಬಹಿರಂಗ ಪಡಿಸದಿದ್ದರು ಸೂಪರ್ ಸ್ಟಾರ್ ಸಂಭಾವನೆ ಆಗಾಗ ಸದ್ದು ಮಾಡುತ್ತಲೆ ಇರುತ್ತೆ.
Recommended Video
ಆದರೆ ಸೂಪರ್ ಸ್ಟಾರ್ ಅನ್ನು ಹಿಂದಿಕ್ಕಿ ಅತೀ ಹೆಚ್ಚು ಸಂಭಾವನೆ ಪಡೆಯಲು ಹೊರಟಿದ್ದರು ನಟ ದಳಪತಿ ವಿಜಯ್. ಈ ಮೂಲಕ ವಿಜಯ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲ, ಭಾರತದಲ್ಲಿಯೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎನ್ನುವ ಖ್ಯಾತಿ ಗಳಿಸಿದ್ದರು. ಆದರೀಗ ವಿಜಯ್ ಕನಸು ಕನಸಾಗೆ ಉಳಿಯು ಅನುಮಾನ ಮೂಡಿಸಿದೆ.
ಮಾಸ್ಟರ್ ಸಿನಿಮಾಗೆ ಬರೋಬ್ಬರಿ 80 ಕೋಟಿ ಸಂಭಾವನೆ ಪಡೆದಿದ್ದ ವಿಜಯ್, ಮುಂದಿನ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ವಿಜಯ್ ಈಗಾಗಲೆ ಮುಂದಿನ ಸಿನಿಮಾಗೆ ಮುಂಗಡ ಹಣ ಪಡೆದಿದ್ದಾರಂತೆ. ವಿಜಯ್ ಮುಂದಿನ ಸಿನಿಮಾಗೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದೆ. ಚಿತ್ರಕ್ಕೆ ಸದ್ಯ ವಿಜಯ್ 65 ಎಂದು ಹೆಸರಿಡಲಾಗಿದೆ.

ಈ ಸಿನಿಮಾಗೆ ಖ್ಯಾತ ನಿರ್ದೇಶಕ 'ಅಸುರನ್' ಖ್ಯಾತಿಯ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಮುರುಗದಾಸ್ ಹೆಸರು ಕೂಡ ಕೇಳಿಬರುತ್ತಿದೆ. ಆದರೆ ನಿರ್ದೇಶನ ಮಾಡುತ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೀಗ ವಿಜಯ್ 100 ಕೋಟಿ ಸಂಭಾವನೆಗೆ ಕತ್ತರಿ ಬೀಳಲಿದೆ ಎಂದು ಹೇಳಲಾಗುತ್ತಿದೆ.
ನಿರ್ಮಾಣ ಸಂಸ್ಥೆ ವಿಜಯ್ ಗೆ 100 ಕೋಟಿ ಸಂಭಾವನೆ ನೀಡಲು ನಿರಾಕರಿಸಿದೆಯಂತೆ. ಕೊರೊನಾ ಲಾಕ್ ಡೌನ್ ನಿಂದ ಸಿನಿಮಾರಂಗದ ಲೆಕ್ಕಾಚಾರ ತಲೆಕೆಳಗಾಗಿದೆ. ಈ ಸಮಯದಲ್ಲಿ ಕೋಟಿ ಕೋಟಿ ಹಣ ನೀಡಲು ನಿರ್ಮಾಣ ಸಂಸ್ಥೆ ಹಿಂದೇಟು ಹಾಕುತ್ತಿದೆ. ಹಾಗಾಗಿ ವಿಜಯ್ ಸಂಭಾವನೆಗೆ ಕತ್ತರಿ ಹಾಕುವ ಸಾಧ್ಯತೆ ಇದೆ. ಹಾಗಾಗಿ ವಿಜಯ್ ಮುಂದಿನ ಸಿನಿಮಾಗೆ 100 ಕೋಟಿ ಸಂಭಾವನೆ ಪಡೆಯುವುದು ಅನುಮಾನವಾಗಿದೆ.
ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಈ ಸಿನಿಮಾ ನಂತರ ವಿಜಯ್ ಮುಂದಿನ ಸಿನಿಮಾ ಯಾವುದೆಂದು ಅನೌನ್ಸ್ ಮಾಡಿಲ್ಲ. ಮುರುಗದಾಸ್ ಆಕ್ಷನ್ ಕಟ್ ಹೇಳುತ್ತಾರಾ ಅಥವ ವೆಟ್ರಿಮಾರನ್ ನಿರ್ದೇಶನ ಮಾಡುತ್ತಾರಾ ಎಂದು ಕಾದು ನೋಡಬೇಕು.


Click it and Unblock the Notifications











