ಅಶ್ಲೀಲ ಮಾತನಾಡಿ ಕೋಟಿಗಟ್ಟಲೆ ಹಣ ಗಳಿಸಿದ್ದ ದಂಪತಿಯ ಬಂಧನ

ಯೂಟ್ಯೂಬ್‌ನಲ್ಲಿ ಗೇಮ್‌ ಸ್ಟ್ರೀಮ್ ಮಾಡುತ್ತಾ ಯುವಕ-ಯುವತಿಯರೊಟ್ಟಿಗೆ ಅನುಚಿತವಾಗಿ ಮಾತನಾಡಿಯೇ ಕೋಟ್ಯಂತರ ಗಳಿಸಿದ್ದ ಜೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚೆನ್ನೈನ ಮದನ್ ಹಾಗೂ ಆತನ ಪತ್ನಿ ಯೂಟ್ಯೂಬ್‌ನಲ್ಲಿ ಪಬ್‌ಜಿ ಹಾಗೂ ಇನ್ನಿತರೆ ಗೇಮ್‌ಗಳನ್ನು ಆನ್‌ಲೈನ್ ಸ್ಟ್ರೀಮ್ ಮಾಡುತ್ತಿದ್ದರು. ಇತರ ಬಳಕೆದಾರರನ್ನು ಗೇಮ್‌ಗೆ ಕರೆಯುತ್ತಿದ್ದ ಈ ದಂಪತಿ ಇತರ ಗೇಮರ್‌ಗಳೊಂದಿಗೆ ಕೆಟ್ಟದಾಗಿ ಮಾತನಾಡಿ ಭಾರಿ ಜನಪ್ರಿಯತೆ ಗಳಿಸಿದ್ದರು.

ಮದನ್‌ನ 'ಟಾಕ್ಸಿಕ್ ಮದನ್ 18+' ಯೂಟ್ಯೂಬ್ ಚಾನೆಲ್‌ಗೆ ಎಂಟು ಲಕ್ಷಕ್ಕೂ ಹೆಚ್ಚು ಮಂದಿ ಸಬ್‌ಸ್ಕ್ರೈಬರ್‌ಗಳಿದ್ದರು. ಯೂಟ್ಯೂಬ್‌ನಲ್ಲಿ ವಿಡಿಯೋ ಗೇಮ್ ಸ್ಟ್ರೀಮ್ ಮಾಡುವ ಜೊತೆಗೆ ವಿಡಿಯೋ ಗೇಮ್‌ಗಳ ಚೀಟ್‌ ಕೋಡ್‌ಗಳನ್ನು ಹೇಳಿಕೊಡುವುದು ಇತರೆ ಕಾರ್ಯಗಳನ್ನು ಮಾಡುತ್ತಿದ್ದ. ಜೊತೆಗೆ ಅಸಭ್ಯವಾಗಿ ಮಾತನಾಡಿ 'ರಂಜಿಸುತ್ತಿದ್ದ'.

Couple Arrested For Obscene Talks On YouTube

ಭಾರತದಲ್ಲಿ ಪಬ್‌ಜಿ ಬ್ಯಾನ್ ಆಗಿದ್ದರೂ ಸಹ ವಿಪಿಎನ್‌ ಮೂಲಕ ಪಬ್‌ಜಿ ಲೈವ್‌ಸ್ಟ್ರೀಮ್ ಮಾಡುತ್ತಿದ್ದ ಮತ್ತು ಪಬ್‌ಜಿ ಬ್ಯಾನ್ ಮಾಡಿದ್ದಕ್ಕೆ ಸರ್ಕಾರವನ್ನು ಕೆಟ್ಟದಾಗಿ ಬೈದಿದ್ದ. ಆತನ ವಿರುದ್ಧ ಹಲವು ದೂರುಗಳು ನೀಡಲಾಗಿದ್ದವು. ಹಾಗಾಗಿ ಸಿಸಿಬಿ ಪೊಲೀಸರು ಆತನ ಹಿಂದೆ ಬಿದ್ದಿದ್ದರು.

ಆತನಿಗೆ ಮೊದಲು ಕೆಲವು ನೊಟೀಸ್‌ಗಳನ್ನು ಕಳುಹಿಸಲಾಗಿತ್ತು. ಅವಕ್ಕೆ ಆತ ಉತ್ತರಿಸಿದಿದ್ದಾಗ ಆತನನ್ನು ಬಂಧಿಸಲು ಮುಂದಾಗಿದ್ದರು. ಆದರೆ ಆತ ತಪ್ಪಿಸಿಕೊಂಡಿದ್ದ. ಆಗ ಆತನ ಪತ್ನಿ ಕಿರುತಿಕಾ ಅನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಾನೂ ಸಹ ಸ್ಟ್ರೀಮ್‌ಗಳಲ್ಲಿ ಭಾಗವಹಿಸಿದ್ದಾಗಿ, ಲೈಂಗಿಕತೆ ವಿಷಯಗಳನ್ನು ಮಾತನಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ನಂತರ ಜೂನ್ 20ರಂದು ಮದನ್ ಅನ್ನು ಸಹ ಪೊಲೀಸರು ಬಂಧಿಸಿದ್ದಾರೆ.

Recommended Video

ವಿಶ್ವ ಯೋಗ ದಿನದಂದು Pooja Hegde ಕ್ಯಾಮೆರಾ ಕಣ್ಣಿಗೆ ಕಂಡಿದ್ದು ಹೀಗೆ.. | Filmibeat Kannada

ಈ ದಂಪತಿ ತಮ್ಮ ಯೂಟ್ಯೂಬ್‌ ಚಾನೆಲ್‌ನಿಂದ ಕೋಟ್ಯಂತರ ಹಣವನ್ನು ಸಂಪಾದಿಸಿದ್ದರು. ಎರಡು ಕೋಟಿ ಮೌಲ್ಯದ ಎರಡು ಕಾರನ್ನು ಈ ದಂಪತಿ ಖರೀದಿಸಿದ್ದರು. ಜೊತೆಗೆ ಚೆನ್ನೈನಲ್ಲಿಯೇ ಎರಡು ಐಶಾರಾಮಿ ಬಂಗ್ಲೆ ಜೊತೆಗೆ ಧರ್ಮಪುರಿಯಲ್ಲಿ ಭಾರಿ ದೊಡ್ಡ ಮನೆ ಕಟ್ಟಿಸಿದ್ದರು. ಇತರೆ ಆಸ್ತಿಗಳನ್ನು ಸಹ ಇವರು ಖರೀದಿ ಮಾಡಿದ್ದರು. ಈ ದಂಪತಿ ಕೇವಲ ಯೂಟ್ಯೂಬ್‌ನಿಂದಲೇ ತಿಂಗಳಿಗೆ ಸರಾಸರಿ 10 ಲಕ್ಷಕ್ಕೂ ಹೆಚ್ಚು ಹಣ ಸಂಪಾದಿಸಿದ್ದರು.

More from Filmibeat

English summary
Chennai couple arrested for obscene talk on YouTube with under 18 aged children. Both earned crores of rupees from it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X