ದರ್ಬಾರ್ ಸೋಲು, ರಜನಿ ಮನೆ ಬಾಗಿಲು ತಟ್ಟಲು ಮುಂದಾದ ವಿತರಕರು

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿದ್ದ ದರ್ಬಾರ್ ಸಿನಿಮಾ ಆರಂಭದಲ್ಲಿ ಒಳ್ಳೆಯ ಬಿಸಿನೆಸ್ ಮಾಡಿತ್ತು. ದಿನ ಕಳೆದಂತೆ ದರ್ಬಾರ್ ಚಿತ್ರದ ಗಳಿಕೆಯಲ್ಲಿ ಭಾರಿ ಹಿನ್ನಡೆ ಕಂಡ ತಲೈವಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸೋಲು ಕಂಡಿದೆ.

ಸುಮಾರು 200 ಕೋಟಿ ಬಜೆಟ್ ನಲ್ಲಿ ತಯಾರಾಗಿದ್ದ ಈ ಚಿತ್ರ ಜಗತ್ತಿನಾದ್ಯಂತ ಕೇವಲ 250 ಕೋಟಿ ಮಾತ್ರ ಗಳಿಸಿದೆ. ಇದರಲ್ಲಿ ರಜನಿಕಾಂತ್ ಸಂಭಾವನೆ 108 ಕೋಟಿ. ಅಲ್ಲಿಗೆ ಸಿನಿಮಾ ಸೋತಿದೆ ಎನ್ನಲಾಗಿದೆ.

ದರ್ಬಾರ್ ಚಿತ್ರವನ್ನ ಬಿಡುಗಡೆ ಮಾಡಿದ್ದ ಹಾಗೂ ಖರೀದಿ ಮಾಡಿದ್ದ ವಿತರಕರು ಈಗ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ದರ್ಬಾರ್ ಚಿತ್ರದ ಮೇಲೆ ಹಾಕಿದ್ದ ಬಂಡವಾಳ ಕೂಡ ಕೈಸೇರಿಲ್ಲ. ನಮಗೆ ನಷ್ಟ ಆಗಿದೆ. ಅದನ್ನು ರಜನಿಕಾಂತ್ ಅವರು ಹಿಂತಿರುಗಿಸಬೇಕು ಎಂದು ತಮಿಳಿನಲ್ಲಿ ಸಿನಿಮಾ ವಿತರಿಸಿದ್ದ ಕೆಲವರು ಬೇಡಿಕೆಯಿಟ್ಟಿದ್ದಾರೆ.

Darbar Distributor Asking Compensate To Rajnikanth

ಈ ಹಿಂದೆ ತನ್ನ ಚಿತ್ರಗಳಿಂದ ನಷ್ಟ ಅನುಭವಿಸಿದ ವಿತರಕರಿಗೆ ರಜನಿಕಾಂತ್ ಪರಿಹಾರ ನೀಡಿದ್ದರು. ಬಾಬಾ, ಕುಸೇಲನ್ ಸಿನಿಮಾ ಸೋತಾಗ ವಿತರಕರಿಗೆ ಕೈಯಿಂದ ಹಣ ಹಿಂತಿರುಗಿಸಿದ್ದರು. ಅದೇ ವಿಶ್ವಾಸದಲ್ಲಿ ಈಗ ದರ್ಬಾರ್ ಸಿನಿಮಾದ ವಿತರಕರು ತಲೈವಾ ಭೇಟಿ ಮಾಡಲು ಸಜ್ಜಾಗಿದ್ದಾರೆ.

ಲೈಕಾ ಪ್ರೊಡಕ್ಷನ್ ಈ ಚಿತ್ರ ನಿರ್ಮಿಸಿತ್ತು. ಎ ಆರ್ ಮುರುಗದಾಸ್ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ರಜನಿಕಾಂತ್ ಪೊಲೀಸ್ ಆಫೀಸರ್ ಆಗಿ ನಟಿಸಿದ್ದರು. ನಿವೇತಾ ಥಾಮಸ್, ನಯನತಾರಾ, ಯೋಗಿಬಾಬು, ಸುನೀಲ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಸನ್ ಪಿಕ್ಚರ್ ನಿರ್ಮಾಣದಲ್ಲಿ ತಯಾರಾಗುತ್ತಿರುವ ಹೊಸ ಚಿತ್ರದಲ್ಲಿ ರಜನಿ ಅಭಿನಯಿಸುತ್ತಿದ್ದಾರೆ. ಖುಷ್ಬೂ, ಮೀನಾ, ಕೀರ್ತಿ ಸುರೇಶ್, ನಯನತಾರಾ ಈ ಸಿನಿಮಾದಲ್ಲಿದ್ದಾರೆ. ವೀರಂ, ವಿಶ್ವಾಸಂ ಖ್ಯಾತಿ ಶಿವ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Superstar Rajinikanth starrer Darbar movie did not done well in box office. according to boxoffice analysis darbar movie flop. so, distributor asking compensation from thalaiva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X