For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನವೇ ರಜನಿಕಾಂತ್ ದರ್ಬಾರ್ ಗೆ ಆಘಾತ!

  |

  ದರ್ಬಾರ್ ಸಿನಿಮಾ ಬಿಡುಗಡೆಗೂ ಮುಂಚೆಯೇ ಪೈರಸಿ ಕುರಿತು ಆತಂಕ ಕಾಡುತ್ತಿತ್ತು. ನಿರೀಕ್ಷೆಯಂತೆ ಮೊದಲ ದಿನವೇ ಆಘಾತ ಎದುರಾಗಿದೆ. ಮೊದಲ ಶೋ ಮುಗಿಯುತ್ತಿದ್ದಂತೆ ಉತ್ತಮ ಗುಣಮಟ್ಟದಲ್ಲಿ ದರ್ಬಾರ್ ಸಿನಿಮಾ ಲೀಕ್ ಮಾಡಲಾಗಿದೆ.

  ದರ್ಬಾರ್ ಟಿಕೆಟ್ ರೇಟ್ ತಮಿಳುನಾಡಿಗಿಂತ ಕರ್ನಾಟಕದಲ್ಲೇ ಜಾಸ್ತಿ | DARBAR | RAJNI KANTH | FILMIBEAT KANNADA

  ಇದು ಸಹಜವಾಗಿ ರಜನಿಕಾಂತ್ ಅಭಿಮಾನಿಗಳಿಗೆ ನಿರಾಸೆ ತಂದಿದೆ. ಪೈರಸಿ ಪ್ರೋತ್ಸಾಹಿಸಬಾರದು ಎಂದು ಮೊದಲೇ ನಿರ್ಧರಿಸಿದ್ದ ತಲೈವಾ ಫ್ಯಾನ್ಸ್, ಚಿತ್ರವನ್ನು ಥಿಯೇಟರ್ ನಲ್ಲೇ ನೋಡಲು ತೀರ್ಮಾನಿಸಿದ್ದರು.

  ಬಾಕ್ಸ್ ಆಫೀಸ್ ನಲ್ಲಿ ದರ್ಬಾರ್ ಚಿತ್ರಕ್ಕೆ ಹಿನ್ನಡೆಯಾಗಬಾರದು ಎಂಬ ಕಾರಣಕ್ಕೆ, ಪದೇ ಪದೇ ಚಿತ್ರಮಂದಿರದಲ್ಲಿ ದರ್ಬಾರ್ ನೋಡಲು ಕೂಡ ಅಭಿಮಾನಿಗಳು ಮನವಿ ಮಾಡಿದ್ದರು. ಇದೆಲ್ಲದರ ನಡುವೆಯೂ ರಜನಿ ಸಿನಿಮಾ ಪೈರಸಿಯಾಗಿದೆ.

  Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ'Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ'

  ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದ್ಭುತವಾಗಿಲ್ಲ ಅಂದರೂ ಸಿನಿಮಾ ಇಷ್ಟ ಆಗುವಂತಿದೆ ಎಂಬ ಮಾತುಗಳು ಕೇಳಿಬಂದಿದೆ. ಹಾಗಾಗಿ, ಮುಂದಿನ ದಿನದಲ್ಲೂ ದರ್ಬಾರ್ ಚೆನ್ನಾಗಿ ಹೋಗುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

  'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು?'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು?

  ಇನ್ನುಳಿದಂತೆ ಎ ಆರ್ ಮುರುಗದಾಸ್ ಈ ಚಿತ್ರ ನಿರ್ದೇಶನ ಮಾಡಿದ್ದು, ಲೈಕಾ ಪ್ರೊಡಕ್ಷನ್ ನಿರ್ಮಿಸಿದೆ. ನಯನತಾರ, ನಿವೇತಾ ಥಾಮಸ್, ಯೋಗಿ ಬಾಬು, ಸುನೀಲ್ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜಗತ್ತಿನಾದ್ಯಂತ ಸುಮಾರು 7 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ದರ್ಬಾರ್ ರಿಲೀಸ್ ಆಗಿತ್ತು.

  English summary
  Superstar Rajinikanth starrer Darbar movie released all over world. unfortunately video has leaked in online after first show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X