ರಿಲೀಸ್ ಗೂ ಮುಂಚೆ 'ದರ್ಬಾರ್' ದಾಖಲೆ ಕಲೆಕ್ಷನ್: ಗಳಿಕೆ ನಿರೀಕ್ಷೆ ಎಷ್ಟಿದೆ?

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ದರ್ಬಾರ್ ಸಿನಿಮಾ ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜನವರಿ 9 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ತಮಿಳು ಮತ್ತು ತೆಲುಗು ಭಾಷೆಯಲ್ಲಿ ದರ್ಬಾರ್ ಸಿನಿಮಾ ತೆರೆಕಾಣುತ್ತಿದೆ. ಆದರೆ, ಕರ್ನಾಟಕದಲ್ಲಿ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

ಕರ್ನಾಟಕದಲ್ಲಿ ಡಬ್ಬಿಂಗ್ ಅವಕಾಶ ಕೊಟ್ಟಿದ್ದರೂ ದರ್ಬಾರ್ ಸಿನಿಮಾ ಕನ್ನಡದಲ್ಲಿ ಬರ್ತಿಲ್ಲ ಎನ್ನುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ತಮಿಳು ಮತ್ತು ತೆಲುಗಿನಲ್ಲಿ ದೊಡ್ಡ ಮಟ್ಟದ ಬಿಡುಗಡೆಯಾಗುತ್ತಿದ್ದು, ಕನ್ನಡ ಸಿನಿಮಾಗಳಿಗೆ ತೊಂದರೆಯಾಗುತ್ತಿದೆ.

ದರ್ಬಾರ್ ಗಳಿಕೆಯಲ್ಲಿ ಕರ್ನಾಟಕದ ಪಾಲು ದೊಡ್ಡದಿದೆ. ಇದೀಗ, ಬಿಡುಗಡೆಗೂ ಮುಂಚೆಯೇ ದರ್ಬಾರ್ ಕಲೆಕ್ಷನ್ ವರದಿ ಚರ್ಚೆಯಾಗ್ತಿದ್ದು, ಲೆಕ್ಕಾಚಾರ ಜೋರಾಗಿದೆ. ಅಷ್ಟಕ್ಕೂ ದರ್ಬಾರ್ ಪ್ರಿ-ರಿಲೀಸ್ ಗಳಿಕೆ ಎಷ್ಟಿದೆ? ಮುಂದೆ ಓದಿ....

ದರ್ಬಾರ್ ಬಜೆಟ್ ಎಷ್ಟು?

ದರ್ಬಾರ್ ಬಜೆಟ್ ಎಷ್ಟು?

2.0 ಚಿತ್ರ ನಿರ್ಮಿಸಿದ್ದ ಲೈಕಾ ಪ್ರೊಡಕ್ಷನ್ ದರ್ಬಾರ್ ಚಿತ್ರಕ್ಕೂ ಬಂಡವಾಳ ಹಾಕಿದ್ದಾರೆ. ನಿಖರವಾದ ಬಜೆಟ್ ಎಷ್ಟು ಎನ್ನುವುದನ್ನು ಘೋಷಿಸಿಲ್ಲ. ಆದರೂ ದೊಡ್ಡ ಮೊತ್ತದ ಬಜೆಟ್ ನಲ್ಲಿ ಸಿನಿಮಾ ತಯಾರಾಗಿದೆ ಎಂಬ ಮಾತಿದೆ. ಇದೀಗ, ಸಿನಿಮಾ ರಿಲೀಸ್ ಗೂ ಮುಂಚೆಯೇ ಹಾಕಿದ ಬಂಡವಾಳ ವಾಪಸ್ ಆಗಿದೆ ಎಂಬ ಸುದ್ದಿ ಬಹಿರಂಗವಾಗಿದೆ.

220 ಕೋಟಿ ಗಳಿಕೆಯಂತೆ!

220 ಕೋಟಿ ಗಳಿಕೆಯಂತೆ!

ಸಿನಿಮಾ ಬಿಡುಗಡೆಗೂ ಮುಂಚೆ ಸುಮಾರು 220 ಕೋಟಿವರೆಗೂ ಗಳಿಕೆ ಆಗಿದೆ ಎಂದು ಲೆಕ್ಕಾಚಾರ ನಡೆಯುತ್ತಿದೆ. ವಿತರಣೆ ಹಕ್ಕು, ಡಿಜಿಟಲ್ ಹಕ್ಕು, ಸ್ಯಾಟ್ ಲೈಟ್ ಹಕ್ಕು, ಆಡಿಯೋ ಹಕ್ಕು, ಜಾಹೀರಾತು ಹೀಗೆ ವಿವಿದ ಕಡೆಯಿಂದ ಒಟ್ಟಾರೆ 220 ಕೋಟಿ ಬಿಸಿನೆಸ್ ಆಗಿದೆ ಎನ್ನಲಾಗುತ್ತಿದೆ.

ನಿರ್ಮಾಪಕರ ಕೈ ಹಿಡಿಯುತ್ತಾ ದರ್ಬಾರ್?

ನಿರ್ಮಾಪಕರ ಕೈ ಹಿಡಿಯುತ್ತಾ ದರ್ಬಾರ್?

ರಜನಿಕಾಂತ್ ಮತ್ತು ಲೈಕಾ ಪ್ರೊಡಕ್ಷನ್ ನಲ್ಲಿ 2.0 ಸಿನಿಮಾ ಬಂದಿತ್ತು. 450 ಕೋಟಿಗೂ ಅಧಿಕ ಬಜೆಟ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ನಿರ್ಮಾಪಕರಿಗೆ ನಿರೀಕ್ಷಿತ ಲಾಭ ತಂದುಕೊಟ್ಟಿರಲಿಲ್ಲ. ಈಗ ದರ್ಬಾರ್ ಸಿನಿಮಾ ಮಾಡ್ತಿದ್ದು, ಕಳೆದ ಸಿನಿಮಾದಲ್ಲಿ ಸಿಗದ ಲಾಭ ಈ ಚಿತ್ರದಲ್ಲಿ ಮಾಡಲಿ ಎಂಬ ನಿರೀಕ್ಷೆ ಇದೆ.

ಕರ್ನಾಟಕದಲ್ಲಿ ಏನಾಗಬಹುದು?

ಕರ್ನಾಟಕದಲ್ಲಿ ಏನಾಗಬಹುದು?

ದರ್ಬಾರ್ ಸಿನಿಮಾ ಬಿಡುಗಡೆಗೆ ಕರ್ನಾಟಕದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಕನ್ನಡ ಪರ ಸಂಘಟನೆಗಳು ಸಿನಿಮಾ ರಿಲೀಸ್ ಮಾಡದಂತೆ ಎಚ್ಚರಿಕೆ ಕೂಡ ನೀಡಿದೆ. ಇಷ್ಟೆಲ್ಲಾ ಆತಂಕದ ನಡುವೆ ದರ್ಬಾರ್ ಕನ್ನಡ ನಾಡಿನಲ್ಲಿ ರಿಲೀಸ್ ಆಗುತ್ತಾ? ಇಲ್ಲಿ ಉತ್ತಮ ಗಳಿಕೆ ಕಾಣುತ್ತಾ? ಕಾದು ನೋಡಬೇಕಿದೆ.

More from Filmibeat

English summary
Superstar Rajinikanth starrer Darbar movie set to release on sankranthi festival. movie has already collected huge amount before release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X