ಅಬ್ಬಬ್ಬಾ....ಬೆಂಗಳೂರಲ್ಲಿ ದರ್ಬಾರ್ ಚಿತ್ರದ ಟಿಕೆಟ್ ಬೆಲೆ ಇಷ್ಟೊಂದಾ!
Recommended Video
ಬುಕ್ ಮೈ ಶೋ ಓಪನ್ ಮಾಡಿದ ದರ್ಬಾರ್ ಸಿನಿಮಾ ಥಿಯೇಟರ್ ಪಟ್ಟಿ ನೋಡಿದ್ರೆ ಅಚ್ಚರಿಯಾಗುತ್ತೆ. ಸಾಮಾನ್ಯವಾಗಿ ದರ್ಶನ್, ಸುದೀಪ್, ಯಶ್, ಪುನೀತ್ ಅಂತಹ ಸ್ಟಾರ್ ನಟರ ಚಿತ್ರಗಳಿಗೆ ಇಷ್ಟು ದೊಡ್ಡ ಮಟ್ಟದ ಓಪನಿಂಗ್ ಸಿಗುತ್ತೆ. ಆದರೆ, ಕನ್ನಡದ ಸ್ಟಾರ್ ನಟರನ್ನು ಮೀರಿಸುವಂತಹ ಸ್ವಾಗತ ದರ್ಬಾರ್ ಚಿತ್ರಕ್ಕೆ ಸಿಗುತ್ತಿದೆ.
ಬೆಂಗಳೂರಿನಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳಲ್ಲಿ ರಜನಿ ಸಿನಿಮಾ ಬಿಡುಗಡೆಯಾಗುತ್ತಿದೆ. ಇದರಲ್ಲಿ ಬಹುತೇಕ ಶೋಗಳು ಈಗಾಗಲೇ ಸೋಲ್ಡ್ ಔಟ್ ಆಗಿದೆ.
ಇನ್ನು ಟಿಕೆಟ್ ಬೆಲೆ ನೋಡಿದ್ರೆ ನಿಜಕ್ಕೂ ಚಿತ್ರಪ್ರೇಮಿಗಳು ನಿಜಾನಾ ಎಂದು ಅಚ್ಚರಿಯಿಂದ ನೋಡುವಂತಾಗಿದೆ. ಹಾಗಿದ್ರೆ, ಬೆಂಗಳೂರಿನಲ್ಲಿ ದರ್ಬಾರ್ ಟಿಕೆಟ್ ಬೆಲೆ ಎಷ್ಟು? ಮುಂದೆ ಓದಿ...

1500 ರೂಗೆ ಟಿಕೆಟ್ ಮಾರಾಟವಾಗುತ್ತಿದೆ
ಬೆಂಗಳೂರಿನ ಮೆಗ್ರಾಥ್ ರಸ್ತೆಯಲ್ಲಿರುವ ಐನಾಕ್ಸ್ ಚಿತ್ರಮಂದಿರದಲ್ಲಿ ಮೊದಲ ದಿನ ದರ್ಬಾರ್ ಸಿನಿಮಾ 16 ಶೋ ಪ್ರದರ್ಶನವಾಗುತ್ತಿದೆ. ಟಿಕೆಟ್ ಬೆಲೆ 236, 1000, 1200, 1500 ರೂಪಾಯಿವರೆಗೂ ನಿಗದಿಯಾಗಿದೆ. ಬಹುತೇಕ ಎಲ್ಲ ಶೋಗಳಲ್ಲೂ ಟಿಕೆಟ್ ಬುಕ್ಕಿಂಗ್ ಆಗಿದೆ.

ಕೋರಮಂಗಲದಲ್ಲಿ ದುಬಾರಿ
ಬೆಂಗಳೂರಿನ ಕೋರಮಂಗಲದಲ್ಲಿರುವ ಪಿವಿಆರ್ ಚಿತ್ರಮಂದಿರದಲ್ಲೂ ಅದೇ ಕಥೆ. ಗೋಲ್ಡ್ ಕ್ಲಾಸ್ ಟಿಕೆಟ್ 1200 ಮತ್ತು 1500 ರೂಪಾಯಿಗೆ ನಿಗದಿಯಾಗಿದ್ದು, 8 ಶೋ ನಡೆಯುತ್ತಿದೆ. ಇನ್ನು 700 ಮತ್ತು 800 ರೂಪಾಯಿ ಟಿಕೆಟ್ ಕೂಡ ಇದ್ದು, ಸುಮಾರು 19 ಶೋ ಮೊದಲ ದಿನ ಪ್ರದರ್ಶನವಾಗ್ತಿದೆ.

ಮುಂಬೈನಲ್ಲಿ ಎಷ್ಟು?
ಹಿಂದಿಯಲ್ಲೂ ದರ್ಬಾರ್ ತೆರೆಕಾಣುತ್ತಿದೆ. ತಮಿಳುನಾಡು, ಕರ್ನಾಟಕದಲ್ಲಿರುವಂತೆ ಮುಂಬೈನಲ್ಲಿ ರಜನಿ ಫ್ಯಾನ್ಸ್ ಇದ್ದಾರೆ. ಆದರೆ ಟಿಕೆಟ್ ವಿಚಾರಕ್ಕೆ ಬಂದ್ರೆ ಬೆಂಗಳೂರಿನಲ್ಲಿರುವಷ್ಟು ಕ್ರೇಜ್ ಅಲ್ಲಿಲ್ಲ. ಮುಂಬೈನಲ್ಲಿ ಗರಿಷ್ಠ ಅಂದ್ರೆ 300 ರೂಪಾಯಿ ಟಿಕೆಟ್. ಉಳಿದಂತೆ 60, 70, 100 ರೂಪಾಯಿಗೂ ಟಿಕೆಟ್ ಸಿಗುತ್ತೆ.

ತಮಿಳುನಾಡಿನಲ್ಲಿ ಎಷ್ಟಿದೆ ಗೊತ್ತಾ?
ಇನ್ನು ತಮಿಳುನಾಡಿನಲ್ಲಿ ದರ್ಬಾರ್ ಕ್ರೇಜ್ ಬಹಳ ದೊಡ್ಡದಾಗಿದೆ. ಆದರೆ, ಟಿಕೆಟ್ ಬೆಲೆ ಮಾತ್ರ ಬಹಳ ಕಮ್ಮಿ ಎನಿಸುತ್ತೆ. ಚೆನ್ನೈನಲ್ಲಿ ದರ್ಬಾರ್ ಸಿನಿಮಾದ ಟಿಕೆಟ್ ಬೆಲೆ ಗರಿಷ್ಠ ಅಂದ್ರೆ 190 ರೂಪಾಯಿ. ಇದಕ್ಕಿಂತ ಜಾಸ್ತಿ ಬೆಲೆಯ ಟಿಕೆಟ್ ಇಲ್ಲವೇ ಇಲ್ಲ. ಗೋಲ್ಡ್, ಪ್ಲಾಟಿನಂ, ಸೆಕೆಂಡ್ ಕ್ಲಾಸ್ ಯಾವುದೇ ವರ್ಗಕ್ಕೂ ಅದಕ್ಕಿಂತ ಕಡಿಮೆಯೇ.


Click it and Unblock the Notifications











