'ದರ್ಬಾರ್' ಮೋಷನ್ ಪೋಸ್ಟರ್ ರಿಲೀಸ್ ಬಳಿಕ ಕನ್ನಡಿಗರು ಬೇಸರ
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ದರ್ಬಾರ್' ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಎಆರ್ ಮುರುಗದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ದರ್ಬಾರ್ ಚಿತ್ರ ಭಾರಿ ಕುತೂಹಲ ಮೂಡಿಸಿದ್ದು, ಮೋಷನ್ ಪೋಸ್ಟರ್ 'ಕಿಕ್' ಹೆಚ್ಚಿಸಿದೆ.
ಸುಮಾರು 20 ವರ್ಷಗಳ ಬಳಿಕ ರಜನಿಕಾಂತ್ ಪೊಲೀಸ್ ಆಫೀಸರ್ ಆಗಿ ಬಣ್ಣ ಹಚ್ಚಿದ್ದು, ತಲೈವಾ ಅಭಿಮಾನಿಗಳು ಹಬ್ಬ ಮಾಡ್ತಿದ್ದಾರೆ.
ನಾಲ್ಕು ಭಾಷೆಗಳಲ್ಲಿ ತೆರೆಕಂಡಿರುವ ದರ್ಬಾರ್ ಸಿನಿಮಾ ಮೋಷನ್ ಪೋಸ್ಟರ್ ನೋಡಿದ ಡಬ್ಬಿಂಗ್ ಪರ ಚಿತ್ರಪ್ರೇಮಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾಕೆ? ಮುಂದೆ ಓದಿ....

ಕನ್ನಡದಲ್ಲಿ 'ದರ್ಬಾರ್' ಯಾಕಿಲ್ಲ?
ತಮಿಳಿನಲ್ಲಿ ತಯಾರಾಗುತ್ತಿರುವ ದರ್ಬಾರ್ ಸಿನಿಮಾ ಒಟ್ಟು ಐದು ಭಾಷೆಯಲ್ಲಿ ಬರ್ತಿದೆ. ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ದರ್ಬಾರ್ ಡಬ್ಬಿಂಗ್ ಆಗ್ತಿದೆ. ಆದರೆ, ಕನ್ನಡದಲ್ಲಿ ದರ್ಬಾರ್ ಡಬ್ ಆಗ್ತಿಲ್ಲ ಎನ್ನುವುದು ಡಬ್ಬಿಂಗ್ ಪರ ಕನ್ನಡಿಗರಿಗೆ ಬೇಸರ ಉಂಟಾಗಿದೆ.

ರಜನಿಗೆ ಕರ್ನಾಟಕದಲ್ಲಿ ಮಾರ್ಕೆಟ್ ಇದೆ
ರಜನಿಕಾಂತ್ ಅವರ ಚಿತ್ರಗಳಿಗೆ ಕರ್ನಾಟಕದಲ್ಲಿ ದೊಡ್ಡ ಮಾರ್ಕೆಟ್ ಇದೆ. ಅವರ ಸಿನಿಮಾಗಳು ಇಲ್ಲಿ ದೊಡ್ಡ ಕಲೆಕ್ಷನ್ ಮಾಡುತ್ತೆ. ಹಾಗಿದ್ದರೂ ಕನ್ನಡ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಮಾಡುವುದನ್ನು ಮರೆತಿದ್ದಾರೆ. ಇದು ಖಂಡನೀಯ ಎಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.

ಪ್ಯಾನ್ ಇಂಡಿಯಾ ಅಂದ್ರೆ ಕನ್ನಡನೂ ಇದೆ!
''ಪ್ಯಾನ್ ಇಂಡಿಯಾ ಸಿನಿಮಾ ಎಂದು ಬಂದಾಗ ಕನ್ನಡ ಭಾಷೆಯೂ ಸೇರುತ್ತೆ. ಆದರೆ, ಕನ್ನಡದಲ್ಲಿ ದರ್ಬಾರ್ ಯಾಕಿಲ್ಲ. ಲೈಕಾ ಪ್ರೊಡಕ್ಷನ್ ಈ ಬಗ್ಗೆ ಗಮನ ಕೊಡಿ. ಕನ್ನಡದಲ್ಲಿ ದರ್ಬಾರ್ ಸಿನಿಮಾ ಬಿಡಿ'' ಎಂದು ಬೇಡಿಕೆಯಿಟ್ಟಿದ್ದಾರೆ.

ರಜನಿಗೆ ಕನ್ನಡ ಬರುತ್ತೆ?
''ಹೇಳಿಕೊಳ್ಳಲು ಕರ್ನಾಟಕದ ಮೂಲದವರಾಗಿರುವ ರಜನಿಕಾಂತ್ ಉತ್ತಮವಾಗಿ ಕನ್ನಡ ಮಾತನಾಡಬಲ್ಲರು. ಅವರೇ ಡಬ್ ಮಾಡಲಿ. ಕನ್ನಡದಲ್ಲಿ ದರ್ಬಾರ್ ಸಿನಿಮಾ ರಿಲೀಸ್ ಮಾಡಿ'' ಎಂದು ಮನವಿ ಮಾಡಿದ್ದಾರೆ.


Click it and Unblock the Notifications











