ನಡೆಯಲು ಆಗದ ಸ್ಥಿತಿಯಲ್ಲಿ 'ಅಣ್ಣಾವ್ರು' ಸಿನಿಮಾ ನಟಿ: ಅಷ್ಟಕ್ಕೂ ಆ ನಟಿಗೆ ಅಂಥಾದ್ದೇನಾಯ್ತು?
ಕೆಲ ನಟ -ನಟಿಯರು ಒಂದೆರಡು ಸಿನಿಮಾಗಳಲ್ಲಿ ನಟಿಸಿದರೂ ಪ್ರೇಕ್ಷಕರು ಮನದಲ್ಲಿ ಜಾಗ ಗಳಿಸಿಬಿಡುತ್ತಾರೆ. ಅಂತಹ ನಟಿಯರಲ್ಲಿ ತಮಿಳಿನ ಕನಿಹಾ ಕೂಡ ಒಬ್ಬರು. ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಈ ಚೆಲುವೆ ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದ 'ಅಣ್ಣಾವ್ರು' ಚಿತ್ರದಲ್ಲಿ ದರ್ಶನ್ ಜೋಡಿಯಾಗಿ ನಟಿಸಿ ಕನಿಹಾ ಮೋಡಿ ಮಾಡಿದ್ದರು.
'ಅಣ್ಣಾವ್ರು' ನಂತರ ಸುದೀಪ್ ಜೋಡಿಯಾಗಿ 'ಸೈ' ಚಿತ್ರದಲ್ಲಿ ಈ ಚೆಲುವೆ ಮಿಂಚಿದ್ದರು. ರವಿಚಂದ್ರನ್ ಸಹೋದರ ಬಾಲಾಜಿ ಜೋಡಿಯಾಗಿ 'ರಾಜಕುಮಾರಿ' ಚಿತ್ರದಲ್ಲೂ ಮಿಂಚಿದ್ದರು. ಕನಿಹಾ ಸದ್ಯ ಕಾಲಿಗೆ ಪೆಟ್ಟು ಮಾಡಿಕೊಂಡು ನಡೆಯಲಾಗದ ಸ್ಥಿತಿಯಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಫ್ಯಾಕ್ಚರ್ ಕಾರಣಕ್ಕೆ ನಡೆಯಲಾಗದ ಸ್ಥಿತಿಯಲ್ಲಿ ಇದ್ದಾರೆ. ವಾಕರ್ ಹಿಡಿದು ಫೋಟೊವೊಂದನ್ನು ನಟಿ ಶೇರ್ ಮಾಡಿದ್ದಾರೆ.

"ಹೊಸ ಬೂಟುಗಳನ್ನು ಧರಿಸಿ ಬ್ಯಾಲೆನ್ಸಿಂಗ್ ಆಗಿ ಹೆಜ್ಜೆ ಹಾಕುವುದನ್ನು ಕಲಿಯುತ್ತಿದ್ದೇನೆ" ಎಂದು ಕನಿಹಾ ಬರೆದುಕೊಂಡಿದ್ದಾರೆ. "ಒಂದು ವಾರ ಆಯಿತು ಇನ್ನು 5 ವಾರ ಬಾಕಿಯಿದೆ" ಎಂದಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು, ಚಿತ್ರರಂಗದ ಮಂದಿ ನಟಿ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತಿದ್ದಾರೆ. 2008ರಲ್ಲಿ ಶ್ಯಾಮ್ ರಾಧಕೃಷ್ಣನ್ ಎಂಬುವವರನ್ನು ಸಾಫ್ಟ್‌ವೇರ್ ಇಂಜಿನಿಯರ್‌ನ ಕನಿಹಾ ಮದುವೆ ಆಗಿದ್ದರು.
ಇತ್ತೀಚಿನ ವರ್ಷಗಳಲ್ಲಿ ಕನಿಹಾ ಮಾಲಿವುಡ್‌ನಲ್ಲಿ ಹೆಚ್ಚು ಗುರ್ತಿಸಿಕೊಂಡಿದ್ದಾರೆ. ಸಾಲು ಸಾಲು ಮಲಯಾಳಂ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. 'ಅಣ್ಣಾವ್ರು' ಚಿತ್ರದಲ್ಲಿ ಲಂಗಾ ದಾವಣಿ ತೊಟ್ಟು ಕನಿಹಾ ದರ್ಶನ್ ಜೋಡಿಯಾಗಿ ಮೋಡಿ ಮಾಡಿದ್ದರು. 'ಮಾವಿನ ತೋಪಿನಲ್ಲಿ' ಹಾಡಿನಲ್ಲಿ ಬಿಂದಾಸ್ ಆಗಿ ಕುಣಿದಿದ್ದರು. ನಟಿಯಾಗಿ ಮಾತ್ರವಲ್ಲದೇ ಗಾಯಕಿಯಾಗಿ, ಕಂಠದಾನ ಕಲಾವಿದೆಯಾಗಿ, ಟಿವಿ ನಿರೂಪಕಿಯಾಗಿಯೂ ಕನಿಹಾ ಗುರ್ತಿಸಿಕೊಂಡಿದ್ದಾರೆ. ಸಿನಿಕರಿಯರ್‌ನ ಉತ್ತುಂಗದಲ್ಲಿ ಇದ್ದಾಗಲೇ ಮದುವೆ ಆಗಿದ್ದರು. ದಂಪತಿಗೆ ಒಬ್ಬ ಮಗ ಇದ್ದಾನೆ. ಮದುವೆ ನಂತರ ಕೂಡ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ.

ಸಾಕಷ್ಟು ಜಾಹೀರಾತುಗಳಲ್ಲಿ ಕನಿಹಾ ಮಿಂಚಿದ್ದಾರೆ. ಸಚಿನ್ ಚಿತ್ರದಲ್ಲಿ ಜೆನಿಲಿಯಾಗೆ, ಅನ್ನಿಯನ್ ಚಿತ್ರದಲ್ಲಿ ಸದಾಗೆ ಹಾಗೂ ಶಿವಾಜಿ ಚಿತ್ರದಲ್ಲಿ ಶ್ರಿಯಾ ಶರಣ್‌ಗೆ ಈಕೆ ವಾಯ್ಸ್ ಡಬ್ ಮಾಡಿದ್ದರು. ಸಾಕಷ್ಟು ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ, ತೀರ್ಪುಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ. ದಿವ್ಯಾ ವೆಂಕಟಸುಬ್ರಮಣ್ಯಂ ಅನ್ನೋದು ಆಕೆಯ ಮೂಲ ಹೆಸರು. ಚಿತ್ರರಂಗದಲ್ಲಿ ಕನಿಹಾ, ಕನಿಕಾ ಆಗಿ ಜನಪ್ರಿಯರಾಗಿದ್ದಾರೆ.


Click it and Unblock the Notifications











